ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು

ಸಮಗ್ರ ನ್ಯೂಸ್: ಧಾರವಾಡ ಜಿಲ್ಲೆಯ ನವಲಗುಂದ ಠಾಣೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೌದು ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ಸ್ವಾಮೀಜಿ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ.

Ad Widget ... ..

ಇವರು ನವಲಗುಂದ ಮಾರ್ಕೆಟ್‌ನಲ್ಲಿ ನಡೆದಿದ್ದ ಸ್ವಾಭಿಮಾನಿ ಮತದಾರರ ಸಮಾವೇಶ ಚುನಾವಣೆ ಭಾಷಣದ ವೇಳೆ ಎಡವಟ್ಟು ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಾಮೀಜಿ, ಭಸ್ಮ ಹೋಗಿ ಕುಂಕುಮ ಬಂತು ಹಾಗೂ ಭಂಡಾರ ಹೋಗಿ ಕುಂಕುಮ ಬಂತು. ಶರಣು ಶರಣಾರ್ಥಿ ಹೋಗಿ ಹರಿ ಓಂ ಬಂತು ಎಂದು ಭಾಷಣ ಮಾಡಿದ್ದರು. ಹೀಗಾಗಿ ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ

Ad Widget

Leave a Comment

Your email address will not be published. Required fields are marked *