Ad Widget .

ಮಡಿಕೇರಿ: 2 ವರ್ಷದ ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಿದ ಐದು ಕಳ್ಳರ ಬಂಧನ

ಸಮಗ್ರ ನ್ಯೂಸ್: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಲೂರು ಗ್ರಾಮದ ಚನ್ನಂಗಿ ನಿವಾಸಿ ತಂಗಚ್ಚನ್ ಕೆ.ಕೆ ಎಂಬುವರ ಮನೆಗೆ 2022ರ ಜೂನ್ 8 ರಂದು ರಾತ್ರಿ 8:30 ಸಮಯದಲ್ಲಿ ಅಪರಿಚಿತ ಮುಸುಕುದಾರಿ ವ್ಯಕ್ತಿಗಳು ತಂಗಚ್ಚನ್ ಅವರ ಮನೆಗೆ ಪ್ರವೇಶಿಸಿ ತಂಗಚ್ಚನ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಅಂದಾಜು ಎರಡು ಲಕ್ಷ ರೂಪಾಯಿ ಹಾಗೂ ಪತ್ನಿಯ ಕುತ್ತಿಗೆಯಲ್ಲಿದ್ದ ಎಂಟು ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Ad Widget . Ad Widget .

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿ ವೈ ಎಸ್ ಪಿ ಮಹೇಶ್ ಕುಮಾರ್ ವೃತ್ತನಿರೀಕ್ಷಕರಾದ ರಾಜು ಪಿ.ಕೆ ಮತ್ತು ರಾಘವೇಂದ್ರ, ಠಾಣಾಧಿಕಾರಿ ಹಾಲಪ್ಪ ಹಾಗೂ ಸಿಬ್ಬಂದಿಗಳು, ಡಿ ಸಿ ಆರ್ ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ 2024ರ ಮೇ 4 ರಂದು ಆರೋಪಿಗಳಾದ 51 ವರ್ಷ ಪ್ರಾಯದ ಚನ್ನಂಗಿ ನಿವಾಸಿ ಲವಕುಮಾರ್ ಎಂ. ಕೆ, ವಿನೋದ್ ಎಚ್ ಸಿ 45,ಅಬ್ಬುರು ಗ್ರಾಮದ ಅನಿಶ್ ಪಿ ಎಸ್ , ಅಯ್ಯಪ್ಪ ಬೆಟ್ಟ ವಿರಾಜ್ ಪೇಟೆ,

Ad Widget . Ad Widget .

ಅಬ್ಬೂರು ಗ್ರಾಮದ ಪ್ರವೀಣ್ ಕುಮಾರ್ 46, ಭದ್ರಗೋಳದ ರಫೀಕ್ ಕೆ, ಇವರೆಲ್ಲರನ್ನು ಬಂಧಿಸಿ 7.9 ಗ್ರಾಂ ಚಿನ್ನದ ಸರ 60,000 ನಗದು, ಕೃತ್ಯಕ್ಕೆ ಬಳಿಸಿದ ಮಾರುತಿ 800 ಕಾರು, ಹಾಗೂ ಕಳ್ಳತನ ಮಾಡಿದ ಹಣದಿಂದ ಖರೀದಿಸಲಾಗಿದೆ ಮಾರುತಿ ಆಲ್ಟೊ ಕಾರು ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣವನ್ನು ಭೇದಿಸಿದ ವಿಶೇಷ ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಶ್ಲಾಘಿಸಿ, ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *