ಸಮಗ್ರ ನ್ಯೂಸ್: ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ನಾಗನಾಳ ಎಂಬಲ್ಲಿ ನಡೆದಿದೆ. ಮೊನ್ನೆ ಬುಧವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ.
ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ. ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ. ಒಂದು ಬದಿ ಮಕ್ಕಳಿಬ್ಬರು ಈಜುತ್ತಿದ್ದರು. ಈ ಕಡೆ ತಂಗಿಗೆ ಮೊಬೈಲ್ನಲ್ಲಿ ಕೊಟ್ಟು ಈಜುವುದನ್ನು ವಿಡಿಯೊ ಮಾಡು ಎಂದು ತಿಳಿಸಿದ್ದ.
ಬಳಿಕ ಗೌತಮ್ ಕೃಷಿ ಹೊಂಡಕ್ಕೆ ಜಿಗಿದು ಈಜುತ್ತಿದ್ದ. ಇತ್ತ ತಂಗಿಯು ವಾಪಸ್ ಬಾ ಎಂದು ಕೂಗಿದ್ದಾಳೆ. ಆಕೆಯ ಮಾತನ್ನು ಕೇಳಿಸಿಕೊಳ್ಳದ ಗೌತಮ್ ಈಜುತ್ತಾ ಕೊಂಚ ದೂರ ಹೋಗಿದ್ದಾನೆ. ಅಷ್ಟೇ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ.
ಸರಿಯಾಗಿ ಈಜು ಬಾರದಿದ್ದರು ಈಜಲು ಹೋಗಿ ನೀರುಪಾಲಾಗಿದ್ದಾನೆ. ಗೌತಮ್ ನೀರಿನಲ್ಲಿ ಮುಳುಗುತ್ತಿರುವ ಎಲ್ಲವೂ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.