Ad Widget .

ಶಬರಿಮಲೆಗೆ ರೋಪ್ ವೇ ಸೌಲಭ್ಯ/ ಸರ್ವೇ ಕಾರ್ಯ ಆರಂಭ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶಬರಿಮಲೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ 80 ಕೋಟಿ ರೂಪಾಯಿ ವೆಚ್ಚದ ರೋಪ್ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಪಂಪಾದಿಂದ ಸನ್ನಿಧಾನದವರೆಗಿನ ಸರ್ವೇ ಕಾರ್ಯ ಆರಂಭವಾಗಿದೆ.

Ad Widget . Ad Widget .

ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನೀಡಿರುವ ಪ್ರಸ್ತಾವನೆ ಪರಿಗಣಿಸಿ ರೋಪ್ ವೇ ಎತ್ತರವನ್ನು 35 ಮೀಟರ್‍ನಿಂದ 60 ಮೀಟರ್ಗೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಕಡಿಯಬೇಕಾದ ಮರಗಳ ಸಂಖ್ಯೆ 510ರಿಂದ 50ಕ್ಕೆ ಇಳಿಯಲಿದೆ. ಪರಿಷ್ಕøತ ಯೋಜನೆ ಪ್ರಕಾರ ಕಂಬಗಳ ಸಂಖ್ಯೆಯೂ 5ಕ್ಕೆ ಇಳಿಯಲಿದೆ. ಇನ್ನು ನಿಲ್ದಾಣ, ಕಚೇರಿ ನಿರ್ಮಾಣಕ್ಕಾಗಿ ಕಾಲು ಎಕರೆ ಭೂಮಿ ಅಗತ್ಯವಿದ್ದು, ಈ ಪೈಕಿ ದೇವಸ್ವಂ ಬೋರ್ಡ್ 20 ಸೆಂಟ್ಸ್ ಸ್ಥಳ ನೀಡುತ್ತಿದೆ.

Ad Widget . Ad Widget .

ಹೈಕೋರ್ಟ್ ಸೂಚನೆ ಮೇರೆಗೆ ಅಡ್ವಕೇಟ್ ಕಮಿಷನ್ ಎಸ್‍ಪಿ ಕುರುಪ್ ಪಸ್ಥಿತಿಯಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದ್ದು, ಸಮೀಕ್ಷಾ ಉಪನಿರ್ದೇಶಕ ಡಿ. ಮೋಹನ್ ದೇವ್, ಅರಣ್ಯ ಸರ್ವೇಕ್ಷಣಾ ತಂಡದ ಅಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಮಲಿಕಪ್ಪುರಂ ಪೊಲೀಸ್ ಬ್ಯಾರಕ್ ಹಿಂಭಾಗದಿಂದ ಈಗ ಸರ್ವೆ ಆರಂಭವಾಗಿದೆ. ಈ ಬಗೆಗಿನ ವರದಿಯನ್ನು ಇದೇ ಮೇ 23ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

Leave a Comment

Your email address will not be published. Required fields are marked *