Ad Widget .

ಚಾಮರಾಜನಗರ : ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ

ಸಮಗ್ರ ನ್ಯೂಸ್ : ಬೀಸಿದ ಗಾಳಿಗೆ ಸುರಿದ ಮಳೆಯ ರಭಸಕ್ಕೆ ಏಸು ಕ್ರೈಸ್ತನ ಮೂರ್ತಿ ಧರೆಗುರುಳಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿ ಮಂಗಲ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಚಾಮರಾಜನಗರ ಜಿಲ್ಲೆಯ ಮರಿ ಮಂಗಲ ಗ್ರಾಮದಲ್ಲಿರುವ ಕ್ರೈಸ್ತ ಧರ್ಮದ ಚರ್ಚ್ ಮುಂಭಾಗದಲ್ಲಿ ಇರಿಸಲಾಗಿದ್ದ ಏಸು ಕ್ರೈಸ್ತನ ಮೂರ್ತಿಯು ಶುಕ್ರವಾರ ಸಂಜೆ ಬೀಸಿದ ಗಾಳಿ ಸುರಿದ ಮಳೆಯ ರಭಸಕ್ಕೆ ಧರೆಗುರುಳಿದೆ. ಅಲ್ಲದೆ ಗ್ರಾಮದ ಹಲವಾರು ಷೆಡ್ ಗಳು ನಾಶವಾಗಿದ್ದರೆ ಮರಗಳು ಧರೆಗುರುಳಿವೆ.

Ad Widget . Ad Widget .

ಮರಿಮಂಗಲ ಗ್ರಾಮದಲ್ಲಿ ಗಾಳಿ ಮಳೆಯ ಅವಾಂತರಕ್ಕೆ ಷೆಡ್ ಗಳು ಮರಿದು ಬಿದ್ದು, ಅಲ್ಲಿ ವಾಸ ಮಾಡುವ ಜನರು ದಿಕ್ಕು ತೋಚದಂತೆ ಇದ್ದಾರೆ ಇದರ ನಡುವೆ ತೇಗದ ಮರಗಳು ಧರೆಗುರುಳಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಪಾಯವಾಗಿಲ್ಲ.

ಹನೂರು ತಾಲ್ಲೂಕು ಆಡಳಿತವು ಗ್ರಾಮಕ್ಕೆ ಭೇಟಿ ಕೊಟ್ಟು ಮಳೆ ಗಾಳಿಯಿಂದ ಆಶ್ರಯ ಕಳೆದುಕೊಂಡಿರುವವರಿಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವ ಕಾರ್ಯವಾಗಬೇಕಾಗಿದೆ.

Leave a Comment

Your email address will not be published. Required fields are marked *