ಸಮಗ್ರ ನ್ಯೂಸ್ : ರಾಜಸ್ಥಾನ್ ರಾಯಲ್ಸ್ ತಂಡವು ನಟ ಕಿಚ್ಚ ಸುದೀಪ್ ಅವರಿಗೆ ರಾಜಸ್ಥಾನ್ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.
ಕಡುನೀಲಿ ಮತ್ತು ತಿಳಿಗೆಂಪು ಮಿಶ್ರಿತ ಬಣ್ಣದ ಜೆರ್ಸಿಯಾಗಿದ್ದು, ಜೆರ್ಸಿ ಹಿಂಭಾಗದಲ್ಲಿ ಸುದೀಪ್ ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.
T
ಕ್ರಿಕೆಟ್ ಎಂದರೆ ಸುದೀಪ್‌ಗೆ ತುಂಬಾ ಅಚ್ಚುಮೆಚ್ಚು. ಬಾಲ್ಯದಿಂದಲೂ ಕ್ರಿಕೆಟ್‌ನ ಜೊತೆ ಉತ್ತಮ ನಂಟು ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಈ ಹಿಂದೆಯೂ ಕಿಚ್ಚ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್ ಕಾರ್ಡ್ ಮಾಡಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಜೆರ್ಸಿಯ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಧನ್ಯವಾದಗಳು. ವರ್ಷ-ವರ್ಷವೂ ನಿಮ್ಮ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತಿದೆ. ತಂಡಗಳ ಅದ್ಭುತ ಪ್ರದರ್ಶನಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.