ಕುಕ್ಕೆ ಸುಬ್ರಹ್ಮಣ್ಯ : ಸಿಡಿಲಾಘಾತಕ್ಕೆ ನವ ವಿವಾಹಿತ ಬಲಿ

ಸಮಗ್ರ ನ್ಯೂಸ್: ಸಿಡಿಲಿನ ಆಘಾತಕ್ಕೆ ಸಿಲುಕಿ ನವ ವಿವಾಹಿತ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಹೊಸೊಳಿಕೆ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಇಲ್ಲಿನ ನಿವಾಸಿ ದಿ. ಬೀರಣ್ಣ ಗೌಡ ಎಂಬವರ ಮಗ ಸೋಮಸುಂದರ (32) ಎಂದು ಗುರುತಿಸಲಾಗಿದೆ.

Ad Widget ... ..

ಇಂದು ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸಿಡಿಲು ಸಹಿತ ಮಳೆ ಸುರಿದಿತ್ತು. ಪರ್ವತ ಮುಖಿ ಬಳಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಸೋಮಸುಂದರ್ ಮಳೆ ಬರುವ ಹಿನ್ನಲೆಯಲ್ಲಿ ಅಂಗಳದಲ್ಲಿ ಹರಡಿದ್ದ ಅಡಿಕೆ ಎತ್ತಿಡಲು ತೆರಳಿದ್ದರು.

Ad Widget

ಈ ವೇಳೆ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸೋಮಸುಂದರ್ ಆಘಾತಗೊಂಡರು.‌ ತಕ್ಷಣ ಅವರನ್ನು ‌ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ‌ ಮೃತಪಟ್ಟರೆಂದು ತಿಳಿದುಬಂದಿದೆ.

ಮೃತ ಸೋಮಸುಂದರ್ 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದು, ಮನೆಯಲ್ಲಿ ಮದುವೆಯ ಕಳೆಯನ್ನು ಸೂತಕದ ಛಾಯೆ ಕಸಿದುಕೊಂಡಿದೆ.

Leave a Comment

Your email address will not be published. Required fields are marked *