ಸಮಗ್ರ ನ್ಯೂಸ್ : ಸುಡೋ ಬಿಸಿಲಿಗೆ ಜನ ತತ್ತಿರಿಸಿ ಹೋಗಿದ್ದು, ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಾಗಿದೆ. ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿದೆ. ಈ ಕಡೆ ಬಿಸಿಲ ನಡುವೆ ಹೊಸ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ತಾಪಮಾನ ಏರಿಕೆಯಿಂದ ಕಿಡ್ನಿ ಸಮಸ್ಯೆ ದುಪ್ಪಟ್ಟಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಸಮಸ್ಯೆ ಹೆಚ್ಚಾಗುತ್ತಿದೆ.
ದೇಶದಲ್ಲಿ 10 ರಿಂದ 20ಲಕ್ಷ ಕಿಡ್ನಿ ಸಮಸ್ಯೆಯ ಕೇಸ್ ದಾಖಲಾಗಿದ್ದು, ಬಿಸಿಲಿಗೆ ಬೆವರು, ನೀರಿನಾಂಶದ ಕೊರತೆ ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್ ಪ್ರಕರಣ ಹೆಚ್ಚಳವಾಗಿದೆ. 20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್ ಹೆಚ್ಚಳವಾಗಿದ್ದು, ಬೇಸಿಗೆಗೂ ಕಿಡ್ನಿ ಸ್ಟೋನ್ಗೂ ಲಿಂಕ್ ಆಗುತ್ತದೆ.
ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ಗೆ ದೇಹದಲ್ಲಿನ ನಿರ್ಜಲೀಕರಣ ಕಾರಣವಾಗುತ್ತಿದೆ, ಮನುಷ್ಯನ ದೇಹಕ್ಕೆ ಪ್ರತಿ ದಿನ 2 ರಿಂದ 3 ಲೀಟರ್ ನೀರು ಅತ್ಯಗತ್ಯವಾಗಿದ್ದು, ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ದೇಹದ ನೀರಿನ್ನು ಕಸಿದು ಕೊಳ್ಳುತ್ತದೆ. ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತೆ. ಮೂತ್ರದಿಂದ ಫಿಲ್ಟರ್ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್ ರೂಪುಗೊಳ್ಳುತ್ತವೆ.
ಮಹಿಳೆಯರಿಗೆ ಉರಿ ಮೂತ್ರದ ಸಮಸ್ಯೆ ಆದರೆ ಪುರುಷರಲ್ಲಿ ಕಿಡ್ನಿ ಸ್ಟೋನ್ ಆಗುತ್ತದೆ. ಮೂತ್ರ ವಿಸರ್ಜನೆಯನ್ನು ತಡೆಯಬಾರದು, ದಿನಕ್ಕೆ 2ರಿಂದ 3 ಲೀಟರ್ ನೀರು ಅವಶ್ಯವಾಗಿ ಕುಡಿಯಬೇಕು ಅಂತ ವೈದ್ಯರು ಸಲಹೆ ನೀಡಿದ್ದು, ಬಿಸಿಲ ಬೇಗೆಗೆ ದಿನಕ್ಕೊಂದು ಸಮಸ್ಯೆ ಶುರುವಾಗುತ್ತಿದೆ.
ಪ್ರತಿಬಾರಿಗಿಂತಲೂ ಈ ಬಾರಿ ಬಿಸಿಲ ಪ್ರಮಾಣ ಹೆಚ್ಚಾಗಿದ್ದು, ಇನ್ನೂ ನಾಲ್ಕೈದು ದಿನ ಉಷ್ಣ ಅಲೆಯಿಂದ ತತ್ತರಿಸಬೇಕಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ,ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ರಾಯಚೂರು, ಕಲಬುರಗಿ ಸೇರಿಂದತೆ ರಾಜ್ಯದ ಒಟ್ಟು 25 ಜಿಲ್ಲೆಗಳಲ್ಲಿ ಮೇ 4 ರವರೆಗೂ ಹೀಟ್‌ವೇವ್ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಮಳೆ ಆಗುತ್ತಿತ್ತು. ಅದರೆ ಈ ಬಾರಿ ವರುಣ ಕೈ ಕೊಟ್ಟಿದ್ದು, ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳಲ್ಲೂ ಶೂನ್ಯ ಮಳೆ ದಾಖಲಾಗಿದೆ.