Ad Widget .

ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಗ್‍ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಚೈತನ್ಯ ಯುವಜನ ಪಕ್ಷದಿಂದ ಬಿಗ್‍ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ ಕಣಕ್ಕಿಳಿದಿದ್ದಾರೆ. ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಇವರಿಗೆ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದಾರೆ, ಎಸ್‍ಆರ್ ಕಾಂಗ್ರೆಸ್ ಪಕ್ಷದಿಂದ ವಂಗಾ ಗೀತಾ ಅವರು ಸ್ಪರ್ಧೆ ಮಾಡಲಿದ್ದಾರೆ.

Ad Widget . Ad Widget .

ಬ್ರಾಹ್ಮಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ವೇದ ಶಾಲೆಯನ್ನು ಸ್ಥಾಪಿಸುವ ಜೊತೆಗೆ ಪೀಠಾಪುರಂ ಪಟ್ಟಣವನ್ನು ರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯಿಂದ ನಾನು ಇಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಮನ್ನಾ ತಿಳಿಸಿದ್ದಾರೆ.

Ad Widget . Ad Widget .

2019ರ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿ ನಾರ ಲೋಕೇಶ್ ಅವರ ವಿರುದ್ಧ ತಮನ್ನಾ ಸ್ಪರ್ಧಿಸಿ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದ ಮೊದಲ ಮಂಗಳಮುಖಿ ಎಂಬ ಖ್ಯಾತಿ ಪಡೆದಿದ್ದರು.

Leave a Comment

Your email address will not be published. Required fields are marked *