ಆಂಧ್ರಪ್ರದೇಶ: ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನ

ಸಮಗ್ರ ನ್ಯೂಸ್‌ : ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಡೋಲು ಪಟ್ಟಣದ ಟೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget ... ..

ಬೀರುವಿನ ಲಾಕರ್‌ಗಳಲ್ಲಿ ಇರಿಸಲಾಗಿದ್ದ 5.63 ಲಕ್ಷ ರೂ ನಾಪತ್ತೆಯಾಗಿದೆ. ಲಕ್ಷ ಲಕ್ಷ ನಗದು ನಾಪತ್ತೆಯಾಗಿದ್ದರೂ ಕೂಡ ಬೀರುವಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಬೀಗಗಳು ಇದ್ದಂತೆಯೇ ಇದ್ದುದ್ದರಿಂದ ಇದು ಹೊರಗಿನವರ ಕೆಲಸವಲ್ಲ, ಠಾಣೆಯ ಒಳಗಿನವರ ಕೆಲಸ ಎಂದು ಸ್ಪಷ್ಟವಾಗಿದೆ. ಈ ವೇಳೆ ತನಿಖೆ ನಡೆಸಿದಾಗ ಬೀರುವಿನಲ್ಲಿದ್ದ ಹಣವನ್ನು ಗೃಹರಕ್ಷಕ ದಳದ ಸಿಬ್ಬಂದಿಯೇ ಕದ್ದಿರುವುದು ಬೆಳಕಿಗೆ ಬಂದಿದೆ.

Ad Widget

ಬಹಳ ನಂಬಿಕಸ್ಥನಾಗಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಿಧ ಪ್ರಕರಣಗಳಲ್ಲಿ ಸಿಕ್ಕ ನಗದನ್ನು ನೋಡಿಕೊಳ್ಳಲು ಮನೋಜ್ ಅವರಿಗೆ ಜವಬ್ದಾರಿ ನೀಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ 5.63 ಲಕ್ಷ ರೂ ದೋಚಿ ತನಗೇನೂ ಗೊತ್ತಿಲ್ಲದವರಂತೆ ಪೊಲೀಸ್​ ಠಾಣೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದರು.

ಆದರೆ ಬೀರುವಿನಲ್ಲಿದ್ದ ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಪೊಲೀಸರನ್ನು ಕಾಡತೊಡಗಿದೆ. ಇದಾದ ಬಳಿಕ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್ ನನ್ನು ವಶಕ್ಕೆ ಪಡೆದಿದ್ದು, ತಾನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಆತನಿಂದ 3 ಲಕ್ಷ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ರಿಮಾಂಡ್‌ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *