Ad Widget .

ಬಾಗಲಕೋಟೆ : ಹಾಸನದ ವಿಡಿಯೋ ಕೇಸ್ ಪ್ರಕರಣ-ಅನ್ಯಾಯ ಯಾರಿಗೆ ಆದರೂ ಅದು ಅನ್ಯಾಯವೇ ಎಂದ ಎಸ್. ನಾರಾಯಣ್

ಸಮಗ್ರ ನ್ಯೂಸ್‌ : ಹಾಸನದ ವಿಡಿಯೋ ಕೇಸ್ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ‌. ಅದರ ಬಗ್ಗೆ ನಾವು ಮಾತನಾಡದೇ ಇರುವುದೇ ಉತ್ತಮ. ಯಾಕೆಂದರೆ ಒಳ್ಳೆಯ ವಿಷಯಗಳನ್ನು 10 ಸಾರಿ ಮಾತನಾಡೋಣ. ಕೆಟ್ಟ ವಿಷಯಗಳನ್ನು ಮರೆತು ಬಿಡೋಣ. ಇವೆಲ್ಲ ರಾಜ್ಯಕ್ಕೆ ಕಳಂಕ ಬರುವಂತ ವಿಚಾರಗಳು. ಇಂತಹ ಘಟನೆಗಳು ಮರುಕಳಿಸಬಾರದು ನಿರ್ದೇಶಕ ಎಸ್. ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

Ad Widget . Ad Widget .

ಯಾರೂ ಕೂಡ ಇಂತಹ ಕೆಲಸಗಳನ್ನು ಮಾಡಬಾರದು. ಇದೊಂದು ಅನಾಗರಿಕತೆ, ಅನ್ಯಾಯ ಯಾರಿಗೆ ಆದರೂ ಅದು ಅನ್ಯಾಯವೇ. ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳೋದು ಅಕ್ಷಮ್ಯ ಅಪರಾಧ. ಹೆಣ್ಣು ಮಕ್ಕಳು ಕೂಡಾ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಿರ್ದೇಶಕ ಎಸ್. ನಾರಾಯಣ್ ಅವರು ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *