Ad Widget .

ಬೆಂಗಳೂರಿನಲ್ಲಿ ಉದ್ಯೋಗವಕಾಶ, ಬಂಪರ್ ಸ್ಯಾಲರಿ ಕೂಡ!

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಮೆಡಿಕಲ್ ಆಫೀಸರ್, ಸೀನಿಯರ್ ಮೆಡಿಕಲ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೇ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆಫ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಸೀನಿಯರ್ ಮೆಡಿಕಲ್​ ಆಫೀಸರ್- 3
ಮೆಡಿಕಲ್ ಆಫೀಸರ್-1

Ad Widget . Ad Widget .

ವಿದ್ಯಾರ್ಹತೆ:
ಸೀನಿಯರ್ ಮೆಡಿಕಲ್​ ಆಫೀಸರ್- ಎಂಬಿಬಿಎಸ್, ಎಂಎಸ್, ಎಂ.ಡಿ, ಡಿಎನ್​ಬಿ, ಡಿಎಲ್​ಒ, ಸ್ನಾತಕೋತ್ತರ ಪದವಿ
ಮೆಡಿಕಲ್ ಆಫೀಸರ್- ಎಂಬಿಬಿಎಸ್

ವಯೋಮಿತಿ:
ಸೀನಿಯರ್ ಮೆಡಿಕಲ್​ ಆಫೀಸರ್- 45 ವರ್ಷ
ಮೆಡಿಕಲ್ ಆಫೀಸರ್- 35 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
PWD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ಇಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
ಪಾವತಿ ವಿಧಾನ: ಆನ್‌ಲೈನ್

ವೇತನ:
ಸೀನಿಯರ್ ಮೆಡಿಕಲ್​ ಆಫೀಸರ್- ಮಾಸಿಕ ₹ 50,000-1,60,000
ಮೆಡಿಕಲ್ ಆಫೀಸರ್- ಮಾಸಿಕ ₹ 40,000-1,40,000

ಉದ್ಯೋಗದ ಸ್ಥಳ:
ಬೆಂಗಳೂರು

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಮುಖ್ಯ ವ್ಯವಸ್ಥಾಪಕರು (HR)
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕೈಗಾರಿಕಾ ಆರೋಗ್ಯ ಕೇಂದ್ರ
ಸುರಂಜನದಾಸ್ ರಸ್ತೆ
ವಿಮಾನಪುರ ಅಂಚೆ
ಬೆಂಗಳೂರು – 560017

Leave a Comment

Your email address will not be published. Required fields are marked *