April 2024

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ

ಸಮಗ್ರ ನ್ಯೂಸ್ : ಶಾಲೆಯಲ್ಲಿ ಹ್ಯಾಂಡ್ ಪಂಪ್ ಬಳಿ ಇರಿಸಲಾಗಿದ್ದ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಅನ್ನು ಎಂಟು ವರ್ಷದ ದಲಿತ ಬಾಲಕ ಮುಟ್ಟಿದನು ಎಂಬ ಕಾರಣಕ್ಕೆ ಬಾಲಕನಿಗೆ ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿ ನಡೆದಿದೆ. ನಾಲ್ಕನೇ ತರಗತಿ ಬಾಲಕ ಚಿರಾಗ್ ಎಂದು ಗುರುತಿಸಲಾಗಿದೆ. ರತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದನು. ಚಿರಾಗ್ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್ […]

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ Read More »

ಚೀನಾಗೆ ಸೆಡ್ಡು ಹೊಡೆದ ಫಿಲಿಪ್ಪಿನ್ಸ್/ ಸಮುದ್ರ ಮಾರ್ಗದ ಭದ್ರತೆ ಇನ್ನಷ್ಟು ಬಿಗಿ

ಸಮಗ್ರ ನ್ಯೂಸ್: ಬಲಿಷ್ಠ ಚೀನಾಗೆ ಪುಟ್ಟ ರಾಷ್ಟ್ರ ಫಿಲಿಪ್ಪಿನ್ಸ್ ಸೆಡ್ಡುಹೊಡೆದಿದ್ದು,ಸಮುದ್ರ ಮಾರ್ಗದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಫಿಲಿಪ್ಪಿನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕಸ್ ಜೂನಿಯರ್ ಆದೇಶ ನೀಡಿದ್ದಾರೆ. ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ನೌಕಾಪಡೆ ಸಂಘರ್ಷ, ಅತಿಕ್ರಮಣ ಪ್ರಯತ್ನಗಳು – ಹೆಚ್ಚುತ್ತಿರುವ ಬೆನ್ನಿಗೇ ಅಲರ್ಟ್ ಆಗಿರುವ ಫಿಲಿಪ್ಪಿನ್ಸ್‌ ಸರ್ಕಾರ, ಚೀನಾ ಹೆಸರನ್ನು ಉಲ್ಲೇಖಿಸದೆಯೇ ಈ ಆದೇಶ ಹೊರಡಿಸಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿ ಬಹುತೇಕ ತನ್ನ ಗಡಿಗೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಲೆ ಇದೆ. ಆದರೆ ಫಿಲಿಪ್ಪಿನ್ಸ್, ವಿಯೆಟ್ನಾಂ,

ಚೀನಾಗೆ ಸೆಡ್ಡು ಹೊಡೆದ ಫಿಲಿಪ್ಪಿನ್ಸ್/ ಸಮುದ್ರ ಮಾರ್ಗದ ಭದ್ರತೆ ಇನ್ನಷ್ಟು ಬಿಗಿ Read More »

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ

ಸಮಗ್ರ ನ್ಯೂಸ್: ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್‌ ವಿಚಾರದಲ್ಲಿ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ. ಲೋಕಸಭಾ ಎಲೆಕ್ಷನ್ ಹೊತ್ತಿನಲ್ಲಿ ಬಾಕಿ ಇರುವ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸಲು IT ಇಲಾಖೆ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣೆಯ ಸಮಯದಲ್ಲಿ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಹೇಳಿದೆ. ಸುಪ್ರೀಂಕೋರ್ಟ್ ಮಹತ್ವದ

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ Read More »

ಲೋಕಸಭಾ ಚುನಾವಣೆ/ನಾಮಪತ್ರ ಸಲ್ಲಿಸಿದ ಯದುವೀರ್ ಕೃಷ್ಣ ರಾಜ ಒಡೆಯ‌ರ್

ಸಮಗ್ರ ನ್ಯೂಸ್: ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ರಾಜ ಒಡೆಯ‌ರ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಪ್ರಮದಾದೇವಿ ಒಡೆಯರ್, ಶಾಸಕ ಟಿ.ಎಸ್‌. ಶ್ರೀವತ್ಸ ಮತ್ತಿನ್ನಿಬ್ಬರು ಹಾಜರಿದ್ದರು. ಈ ಮೊದಲು ಅಭ್ಯರ್ಥಿ ಯದುವೀ‌ರ್ ಅವರೇ ಖುದ್ದು ವಿಡಿಯೋ ಸಂದೇಶದ ಮೂಲಕ ಏ. ೩ ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಇಂದು ಯಾವುದೇ ಸದ್ದುಗದ್ದಲ ಇಲ್ಲದೆ

ಲೋಕಸಭಾ ಚುನಾವಣೆ/ನಾಮಪತ್ರ ಸಲ್ಲಿಸಿದ ಯದುವೀರ್ ಕೃಷ್ಣ ರಾಜ ಒಡೆಯ‌ರ್ Read More »

ಉಡುಪಿ: ಸರಳೇಬೆಟ್ಟುವಿನಲ್ಲಿ ಮನೆಯೊಳಗೆ ನುಗ್ಗಿ ಕೋಳಿಗಳನ್ನು ಬಲಿ ಪಡೆದ ಚಿರತೆ

ಸಮಗ್ರ ನ್ಯೂಸ್‌ : ಮಣಿಪಾಲ ಸಮೀಪದ ಸರಳೇಬೆಟ್ಟು ಪರಿಸರದಲ್ಲಿ ಮತ್ತೆ ಚಿರತೆ ಹಾವಳಿ ಕಂಡುಬಂದಿದ್ದು, ಮನೆಯೊಂದರ ಕೋಳಿ ಗೂಡಿಗೆ ಲಗ್ಗೆ ಇಟ್ಟ ಚಿರತೆ, ಕೋಳಿಗಳನ್ನು ಬಲಿ ಪಡೆದುಕೊಂಡಿದೆ. ಸರಳೇಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜ ಎಂಬವರ ಮನೆಗೆ ರಾತ್ರಿ ಹೊತ್ತಿನಲ್ಲಿ ದಾಳಿ ನಡೆಸಿದ ಚಿರತೆ, ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ತಿಂದಿದೆ. ಒಂದು ಕೋಳಿಯನ್ನು ಗೂಡಿನಲ್ಲಿಯೇ ಬಿಟ್ಟು ಓಡಿ ಹೋಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ. ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸರಳೇಬೆಟ್ಟು, ಕೋಡಿ, ಎಂಡ್

ಉಡುಪಿ: ಸರಳೇಬೆಟ್ಟುವಿನಲ್ಲಿ ಮನೆಯೊಳಗೆ ನುಗ್ಗಿ ಕೋಳಿಗಳನ್ನು ಬಲಿ ಪಡೆದ ಚಿರತೆ Read More »

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿಯುವರೆಗೂ ಕಾಂಗ್ರೆಸ್‌ ಪಕ್ಷ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.‌ ಆದಾಯ ತೆರಿಗೆ ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಸಾಲಿಸಿಟರ್‌ ಜನರಲ್‌

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ Read More »

ಕಾರವಾರ :ಬೈಕ್‌‌ಗೆ ನಗರಸಭೆ ವಾಹನ ಡಿಕ್ಕಿ: ಶಿಕ್ಷಕಿ ಸಾವು

ಸಮಗ್ರ ನ್ಯೂಸ್‌ : ಬೈಕ್‌‌ಗೆ ನಗರಸಭೆ ವಾಹನ ಡಿಕ್ಕಿ ಹೊಡೆದು ಶಿಕ್ಷಕಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಿರ್ಜಾನಕರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ವಿಜಯಾ ಮಾಸ್ತೆಪ್ಪ ಭೋವಿ (40) ಮೃತ ಪಟ್ಟ ದುರ್ದೈವಿ. ವಿಜಯಾ ಅವರು ತಾಲ್ಲೂಕಿನ ಬಂಡಲದ ಬಡಗಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಜತೆಗೆ ವಿಜಯಾ ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಬಡಿದಿದೆ. ಈ ವೇಳೆ ಕೆಳಗೆ ಬಿದ್ದ ಶಿಕ್ಷಕಿ ವಿಜಯಾ

ಕಾರವಾರ :ಬೈಕ್‌‌ಗೆ ನಗರಸಭೆ ವಾಹನ ಡಿಕ್ಕಿ: ಶಿಕ್ಷಕಿ ಸಾವು Read More »

ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ… ಚುನಾವಣಾ ಆಯೋಗದಿಂದ ನೋಟಿಸ್

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ರಂಜಾನ್​ ಆಚರಣೆ ವೇಳೆ ರೋಜಾ ಪ್ರಯುಕ್ತ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ವ್ಯವಸ್ಥೆ ಆಯೋಜಿಸಿದ್ದ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಸಾರ್ವಜನಿಕ ರಸ್ತೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಅಬೂಬಕರ್ ಸಿದ್ದಿಕಿಗೆ ಚುನಾವಣಾ ಆಯೋಗ ತುರ್ತು ನೋಟಿಸ್ ನೀಡಿದೆ. ಮುಡಿಪುವಿನ ರಸ್ತೆಯಲ್ಲಿ ಆಟೋ ಚಾಲಕರಿಗಾಗಿ ಈ ಇಫ್ತಾರ್ ಕೂಟ ಆಯೋಜನೆಗೊಂಡಿತ್ತು. ಇಫ್ತಾರ್ ಕೂಟದ ವಿಡಿಯೋ ವೈರಲ್ ಆಗಿದೆ. ವಿಡಿಯೋ ಕುರಿತು ಪರ ಮತ್ತು ವಿರೋಧ ಚರ್ಚೆ ನಡೆದಿತ್ತು.

ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ… ಚುನಾವಣಾ ಆಯೋಗದಿಂದ ನೋಟಿಸ್ Read More »

ಗ್ಯಾಸ್​ ಬಳಕೆದಾರರಿಗೆ ಗುಡ್​ನ್ಯೂಸ್​… ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​​ ಬೆಲೆ ಇಳಿಕೆ

ಸಮಗ್ರ ನ್ಯೂಸ್: ಇಂದು ಗ್ಯಾಸ್​ ಬಳಕೆದಾರರಿಗೆ ಗುಡ್​ನ್ಯೂಸ್​ ಸಿಕ್ಕಿದೆ. ಹೌದು ಹಣಕಾಸು ವರ್ಷದ ಮೊದಲ ದಿನ ಎಲ್​​ಪಿಜಿ ದರವನ್ನು ಕಡಿಮೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ. ಇನ್ನು 5ಕೆಜಿ ಎಫ್​ಟಿಎಲ್ ಸಿಲಿಂಡರ್​ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ. ದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ 30.50 ರೂ, ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32

ಗ್ಯಾಸ್​ ಬಳಕೆದಾರರಿಗೆ ಗುಡ್​ನ್ಯೂಸ್​… ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​​ ಬೆಲೆ ಇಳಿಕೆ Read More »

ಬಂಟ್ವಾಳ: ರಿಕ್ಷಾ-ಸ್ಕೂಟರ್ ಢಿಕ್ಕಿ

ಸಮಗ್ರ ನ್ಯೂಸ್‌ : ರಿಕ್ಷಾ ಢಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳದ ಪರಂಗಿಪೇಟೆ ಎಂಬಲ್ಲಿ ನಡೆದಿದೆ. ಮೂಡಬಿದಿರೆ ನಿವಾಸಿ ಕೌಶಿಕ್ ಗಾಯಗೊಂಡ ವ್ಯಕ್ತಿ. ಪರಂಗಿಪೇಟೆ ಎಂಬಲ್ಲಿ ಏಕಮುಖ ರಸ್ತೆಯಲ್ಲಿ ಬಂದ ರಿಕ್ಷಾ ಚಾಲಕನೋರ್ವ ಸ್ಕೂಟರ್ ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ: ರಿಕ್ಷಾ-ಸ್ಕೂಟರ್ ಢಿಕ್ಕಿ Read More »