April 2024

ಕಾರ್ಕಳ : ಆಧುನಿಕ ವಸ್ತುಗಳಿಂದ ದುರ್ಬಲ| ವಿದ್ವಾನ್ ಕೃಷ್ಣರಾಜ ಕುತ್ಪಾಡಿ

ಸಮಗ್ರ ನ್ಯೂಸ್‌ : ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ತಿಳಿಸಿದರು. ಅವರು ತಾಲ್ಲೂಕು ಮುನಿಯಾಲಿನ ಗೋಧಾಮದಲ್ಲಿ ಗೋಕುಲಾನಂದ ವಿಹಾರ ಪ್ರಕೃತಿ ಮಾತೆಯ ಮಡಿಲಲ್ಲಿ ಒಂದು ಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಪರಿಸರ ಎಲ್ಲವನ್ನೂ ಒಳಗೊಂಡಿರುವಂತಹದು. ಅಂದರೆ ಮರ, ಗಿಡ, ಹರಿಯುವ ನೀರು ಇವುಗಳ ಜೊತೆಗೆ ಚಿಕ್ಕ ಜೀವಿಗಳೂ ಪರಿಸರದ ಅಂಶಗಳಾಗಿವೆ. ಪ್ರಕೃತಿ ನಮ್ಮ ಭೋಗಕ್ಕಲ್ಲ, ನಮ್ಮ ಬದುಕಿಗೆ. ಗುಬ್ಬಚ್ಚಿ, ಚಿಟ್ಟೆ ಇವುಗಳ ಪರಾಗ ಸ್ಪರ್ಶ ದಿಂದಲೇ ಹೂವು ಕಾಯಿ ಹಣ್ಣು ನಮಗೆ […]

ಕಾರ್ಕಳ : ಆಧುನಿಕ ವಸ್ತುಗಳಿಂದ ದುರ್ಬಲ| ವಿದ್ವಾನ್ ಕೃಷ್ಣರಾಜ ಕುತ್ಪಾಡಿ Read More »

ವಿಜಯಪುರ : ಪಾದಯಾತ್ರೆ ಹಾಗೂ ಪ್ರಚಾರ ಸಭೆಗೆ ಆಲಗೂರ್ ಚಾಲನೆ

ಸಮಗ್ರ ನ್ಯೂಸ್‌ : ವಿಜಯಪುರ ನಗರದ ವರ್ಡ್ ನಂ.೩೨, ೩೩, ೩೪ರಲ್ಲಿ ನಡೆದ ಪಾದಯಾತ್ರೆ ಹಾಗೂ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಚಾರ ನಗರದಲ್ಲಿ ಅಧಿಕೃತವಾಗಿ ಶುಭಾರಂಭವಾಯಿತು. ಈ ವೇಳೆ ಮಾತನಾಡಿದ ರಾಜು ಆಲಗೂರ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆಯಿದ್ದು, ಈ ಸಲ ಮತದಾರರು ಬದಲಾವಣೆ ಬಯಸಿದ್ದು ನಿಚ್ಚಳವಾಗಿದೆ. ರಾಜ್ಯದ ಸಿದ್ದರಾಮಯ್ಯನವರ ಸರಕಾರದ ಸಾಧನೆ ಮನೆ ಮನೆ, ಮನ ಮನ ಮುಟ್ಟಿದೆ. ಜಿಲ್ಲೆಯೊಂದರಲ್ಲೇ ನಾಲ್ಕು ಲಕ್ಷದಷ್ಟು

ವಿಜಯಪುರ : ಪಾದಯಾತ್ರೆ ಹಾಗೂ ಪ್ರಚಾರ ಸಭೆಗೆ ಆಲಗೂರ್ ಚಾಲನೆ Read More »

ಚಾಮರಾಜನಗರ: ಲಂಚ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯೆ ರೇಣುಕಾದೇವಿ ವರ್ಗಾವಣೆ

ಸಮಗ್ರ ನ್ಯೂಸ್ : ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿ ತಾಲೂಕಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಂತಿಷ್ಟು ಹಣವನ್ನ ನಿಗದಿಗೊಳಿಸಿ ಲಂಚದ ಸುಳಿಯಲ್ಲಿ ಸಿಲುಕಿದ್ದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ರೇಣುಕಾದೇವಿ ಅವರನ್ನು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಲಂಚದ ಬಲೆಯಲ್ಲಿ ಸಿಲುಕಿ ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯೆ ರೇಣುಕಾದೇವಿ ಅವರನ್ನ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ

ಚಾಮರಾಜನಗರ: ಲಂಚ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯೆ ರೇಣುಕಾದೇವಿ ವರ್ಗಾವಣೆ Read More »

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಸತ್ಯಜಿತ್ ಸುರತ್ಕಲ್| ಪದ್ಮರಾಜ್, ಕೋಟಾ, ಗೀತಾಗೆ ಬೆಂಬಲ ನೀಡಲು ಮನವಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ನಾರಾಯಣ‌ಗುರು ವಿಚಾರ ವೇದಿಕೆಯಿಂದ ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ. ಅವರು ಸೋಮವಾರದಂದು ಮಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾರಾಯಣ‌ಗುರು ವಿಚಾರ ವೇದಿಕೆ ನಾರಾಯಣ ‌ಗುರು ಸಮುದಾಯದ ಅಭ್ಯರ್ಥಿಗಳಾದ ದ.ಕ ಕ್ಷೇತ್ರದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ‌ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಲಿದೆ,’ ಎಂದು ತಿಳಿಸಿದ್ದಾರೆ. ‘ವೇದಿಕೆ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಮುದಾಯವೂ ಪಕ್ಷದ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಸತ್ಯಜಿತ್ ಸುರತ್ಕಲ್| ಪದ್ಮರಾಜ್, ಕೋಟಾ, ಗೀತಾಗೆ ಬೆಂಬಲ ನೀಡಲು ಮನವಿ Read More »

ತೋಷಖಾನ ಪ್ರಕರಣ: ಇಮ್ರಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಪಾಕಿಸ್ತಾನ ಹೈ

ಸಮಗ್ರ ನ್ಯೂಸ್‌ : ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷಾರಾ ಬೀಬಿಗೆ ವಿಧಿಸಲಾಗಿದ್ದ 14 ವರ್ಷ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಹೈಕೋರ್ಟ್ ರದ್ದುಗೊಳಿಸಿದೆ. ಖಾನ್ ಅವರು 2018 ರಿಂದ 2022ರ ಅವಧಿಯಲ್ಲಿ ವಿದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವೀಕರಿಸಿದ 140 ಮಿಲಿಯನ್‌ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಸರ್ಕಾರಿ ಸ್ವಾಧೀನದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಪ್ರೀಮಿಯರ್‌ಶಿಪ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಖಾನ್‌ ಮೇಲೆ ಹೋರಿಸಲಾಗಿತ್ತು. ಈ

ತೋಷಖಾನ ಪ್ರಕರಣ: ಇಮ್ರಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಪಾಕಿಸ್ತಾನ ಹೈ Read More »

ಪ್ರೆಗ್ನೆನ್ಸಿ ವಿಚಾರದಲ್ಲಿ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಟ್ಟ ಪರಿಣಿತಿ ಚೋಪ್ರಾ

ಸಮಗ್ರ ನ್ಯೂಸ್:‌ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ರವರು ‘ಅಮರ್ ಸಿಂಗ್ ಚಮ್ಕಿಲಾ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದು, ಇದರ ನಡುವೆ ಪರಿಣಿತಿ ಚೋಪ್ರಾ ಪ್ರೆಗ್ನೆನ್ಸಿ ಎಂಬ ಸುದ್ದಿ ಎಲ್ಲಾ ಕಡೆ ಹಬ್ಬಿದ್ದು, ಈ ವದಂತಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಸಂದರ್ಶನಕ್ಕೆ ಬರುವಾಗ ನಟಿ ಫಿಟೆಡ್ ಬಟ್ಟೆಯನ್ನು ಧರಿಸಿದ್ದರು. ಇದನ್ನು ನೋಡಿ ಚೋಪ್ರಾ ರವರು ಪ್ರೆಗ್ನೆನ್ಸಿ ಎಂಬ ಸುದ್ದಿ ಎಲ್ಲಾ ಕಡೆ ಹರಡಿತ್ತು. ಈ ವಿಷಯ ಅವರಿಗೆ

ಪ್ರೆಗ್ನೆನ್ಸಿ ವಿಚಾರದಲ್ಲಿ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಟ್ಟ ಪರಿಣಿತಿ ಚೋಪ್ರಾ Read More »

ಶಿವರಾಜ್ ಕೆಆರ್ ಪೇಟೆಯಿಂದ ಅನುಚಿತ ವರ್ತನೆ| ಕಾರ್ ಟಚ್ ಮಾಡಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಸಮಗ್ರ ನ್ಯೂಸ್: ʻಕಾಮಿಡಿ ಕಿಲಾಡಿʼ ಖ್ಯಾತಿಯ ಶಿವರಾಜ್ ಕೆಆರ್ ಪೇಟೆಯಿಂದ ಅನುಚಿತ ವರ್ತನೆ ಹಿನ್ನೆಲೆ ಆರೋಪವೊಂದು ಕೇಳಿ ಬಂದಿದೆ. ಮಹಿಳೆಯೊಬ್ಬರನ್ನು ನಿಂದಿಸಿ, ಅವಾಚ್ಯ ಪದವನ್ನು ಬಳಸಿದ್ದಾರೆ ಎಂದು ಈ ಬಗ್ಗೆ ಶಾರದಾ ಬಾಯಿ ಎಂಬುವರು ಸುಬ್ರಮಣ್ಯನಗರ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನಲ್ಲಿ ʻʻನಾನು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದೆ. ಆಗ ರಾಜ್‌ಕುಮಾರ್‌ ರಸ್ತೆ 10ನೇ ಕ್ರಾಸ್‌ನ ಹಿಂಭಾಗದ ಪೆಟ್ರೋಲ್‌ ಬಂಕ್‌ ಹತ್ತಿರ ಶಿವರಾಜ್ ಕೆಆರ್ ಪೇಟೆ ಅವರು ಕಾರನ್ನು ತಂದು ನನ್ನ

ಶಿವರಾಜ್ ಕೆಆರ್ ಪೇಟೆಯಿಂದ ಅನುಚಿತ ವರ್ತನೆ| ಕಾರ್ ಟಚ್ ಮಾಡಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ Read More »

ಗದಗ: ನೀರು ಕುಡಿಯಲು ಹೋದ ಮಹಿಳೆ ಕೃಷಿ ಹೊಂಡಕ್ಕೆ ಬಿದ್ದು ಮೃತ್ಯು

ಸಮಗ್ರ ನ್ಯೂಸ್‌ : ನೀರು ಕುಡಿಯಲು ಹೋದ ಮಹಿಳೆ ಕಾಲು ಜಾರಿ‌ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ‌ ಕಳೆದುಕೊಂಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು‌ ಗ್ರಾಮದಲ್ಲಿ ಘಟನೆ ನಡೆದಿದೆ. ಗೌರಮ್ಮ ಕರಿಗಾರ (48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಜಮೀನಿಗೆ ಹೋಗಿದ್ದ ಗೌರಮ್ಮ ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗಿದ್ದು, ನೀರು ಕುಡಿಯಲು ಎಂದು ಜಮೀನಿ‌ನಲ್ಲಿದ್ದ ಕೃಷಿ ಹೊಂಡಕ್ಕೆ ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಕೃಷಿ ಹೊಂಡದಿಂದ ಹೊರಬರಲು ಆಗದೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಲಕ್ಷ್ಮೇಶ್ವರ

ಗದಗ: ನೀರು ಕುಡಿಯಲು ಹೋದ ಮಹಿಳೆ ಕೃಷಿ ಹೊಂಡಕ್ಕೆ ಬಿದ್ದು ಮೃತ್ಯು Read More »

ನವದೆಹಲಿ:ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಸಮಗ್ರ ನ್ಯೂಸ್‌ : ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಘಟನೆ ನಡೆದಿದೆ. ಕೇಂದ್ರ ಚುನಾವಣಾ ಆಯೋಗದಲ್ಲಿ ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದೆ ಮತ್ತು ಇವಿಎಂ ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ್ದು,. ಇದರ ಜೊತೆಗೆ ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ. ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ

ನವದೆಹಲಿ:ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ Read More »

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಪ್ರಚಾರ ಕೈಗೊಂಡ ಹಿನ್ನೆಲೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು Read More »