April 2024

ಉಡುಪಿ: 10,680 ರೂ. ಮೌಲ್ಯದ 24.030 ಲೀ ಮದ್ಯ ವಶ

ಸಮಗ್ರ ನ್ಯೂಸ್: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 31 ರಂದು ಅಬಕಾರಿ ಇಲಾಖೆ ವತಿಯಿಂದ 10,680 ರೂ. ಮೌಲ್ಯದ 24.030 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಉಡುಪಿ: 10,680 ರೂ. ಮೌಲ್ಯದ 24.030 ಲೀ ಮದ್ಯ ವಶ Read More »

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ

ಸಮಗ್ರ ನ್ಯೂಸ್: ಮಸೀದಿಯ ನೆಲಮಹಡಿಯಲ್ಲಿರುವ ವ್ಯಾಸ್ ಠಿಖಾನಾ ಎಂದೂ ಕರೆಯಲಾಗುವ ಜ್ಞಾನವಾಪಿ ಮಸೀದಿಯ ದಕ್ಷಿಣದ ಭಾಗದ ನೆಲಮಹಡಿಯಲ್ಲಿನ ಮೂರ್ತಿಗಳಿಗೆ ಹಿಂದುಗಳ ಪೂಜೆ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರಿಂದ ಹಿಂದುಗಳ ಪೂಜೆಗೆ ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗ್ಯಾನವಾಪಿ ಮಸೀದಿ ಉಸ್ತುವಾರಿ ವಹಿಸಿರುವ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ Read More »

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ

ಸಮಗ್ರ ನ್ಯೂಸ್: ಭೂ ಲೋಕದ ಸ್ವರ್ಗ ಎಂದು ಹೆಸರಾಗಿರುವ ಕಾಶ್ಮೀರದಲ್ಲಿ ಕೆಲವು ವರ್ಷಗಳ ಹಿಂದೆ ಗುಂಡಿನ ಸದ್ದು ಮಾತ್ರ ಕೇಳಿಸುತ್ತಿದ್ದು, ಇದೀಗ ಈಗ ಅತಿಥಿಗಳ ಕಲರವ ಕೇಳಿಬರುತ್ತಿದೆ. ಕಣಿವೆ ರಾಜ್ಯಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತಿದೆ. ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್‍ಸ್ಟೇಗಳು ಬುಕ್ಕಿಂಗ್ ಆಗಿವೆ ಎಂಬುದೇ ಇಲ್ಲಿಗೆ ಪ್ರವಾಸಿಗರು ಎಷ್ಟು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇದಲ್ಲದೆ ಇಲ್ಲಿನ ಸ್ಥಳೀಯರೂ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ವಸತಿ ಸ್ಥಳಗಳಲ್ಲಿಯೇ ಹೋಮ್ ಸ್ಟೇ

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ Read More »

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) 90ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು.ಈ ನಾಣ್ಯವು ಶೇ.99.99ರಷ್ಟು ಶುದ್ಧವಾದ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಅಂದಾಜು 40 ಗ್ರಾಂ ತೂಕ ಹೊಂದಿದೆ. ಇದು ಆರ್‍ಬಿಐನ ಶ್ರೀಮಂತ ಇತಿಹಾಸ ಹಾಗೂ 9 ದಶಕಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಒಂದು ದಶಕದಲ್ಲಿ RBI ಹಾಗೂ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಬ್ಯಾಂಕಿಂಗ್ ವಲಯ ಉತ್ತಮ ರೀತಿಯಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ Read More »

ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ/ ತಿಹಾರ್ ಜೈಲಿಗೆ ಶಿಫ್ಟ್

ಸಮಗ್ರ ನ್ಯೂಸ್: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ, ಅರವಿಂದ್ ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದು, ಇದರ ಜೊತೆಗೆ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ. ಬಂಧನದ ಸಮಯದಲ್ಲಿ ಓದುವ ಸಾಮಗ್ರಿಗಳಿಗಾಗಿ ವಿಶೇಷ ವಿನಂತಿ ಮಾಡಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ನೀರಜಾ ಚೌಧರಿ ಅವರ “ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ಸ್” ಎಂಬ ಮೂರು ಪುಸ್ತಕಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅವರ ವಕೀಲರು ನ್ಯಾಯಾಲಯದಿಂದ ಅನುಮತಿ ಕೋರಿದ್ದಾರೆ. ಅವರು ಜೈಲಿನಲ್ಲಿದ್ದಾಗ ಅಗತ್ಯ ಔಷಧಿಗಳನ್ನು

ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ/ ತಿಹಾರ್ ಜೈಲಿಗೆ ಶಿಫ್ಟ್ Read More »

IPL 2024: ಬೆಂಗಳೂರಿನಲ್ಲಿ ಇಂದು ಆರ್ಸಿಬಿ vs ಲಕ್ನೋ ಪಂದ್ಯಾವಳಿ

ಸಮಗ್ರ ನ್ಯೂಸ್‌ : ಐಪಿಎಲ್ 17ನೇ ಸೀಸನ್ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಂದ್ಯಾವಳಿ ಏಪ್ರಿಲ್ 2 ರಂದು ರಾತ್ರಿ 7:30ಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಈ ಸೀಸನ್ನಲ್ಲಿ ಲಕ್ನೋಗೆ ಮೂರನೇ ಮತ್ತು ಆರ್‌ಸಿಬಿಗೆ ನಾಲ್ಕನೇ ಪಂದ್ಯವಾಗಿದೆ. ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಗೆದ್ದಿದೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಆರು ಮತ್ತು ಒಂಬತ್ತನೇ ಸ್ಥಾನದಲ್ಲಿವೆ.

IPL 2024: ಬೆಂಗಳೂರಿನಲ್ಲಿ ಇಂದು ಆರ್ಸಿಬಿ vs ಲಕ್ನೋ ಪಂದ್ಯಾವಳಿ Read More »

ಗೂಂಡಾ ಪದಬಳಕೆ/ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಗೂಂಡಾ ಪದಬಳಕೆ ಮಾಡಿದ್ದ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದ್ದಾರೆ. ಈ ಕುರಿತು ಅಮಿತ್ ಷಾ ವಿರುದ್ಧ ಗೂಂಡ ಹೇಳಿಕೆ ಹೇಳಿದ್ದಕ್ಕೆ ನೊಟೀಸ್ ಕೊಡಿಸಿದ್ದಾರೆ. ಯತೀಂದ್ರಗೆ ನೊಟೀಸ್ ಕೊಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಚಿವ ಕೆ ವೆಂಕಟೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚಿಗೆ ಯತಿಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ಗೂಂಡಾ

ಗೂಂಡಾ ಪದಬಳಕೆ/ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್ Read More »

21,000 ಕೋಟಿ ರೂ. ಮೌಲ್ಯದ ರಕ್ಷಣಾ ರಫ್ತು/ ದಾಖಲೆ ನಿರ್ಮಿಸಿದ ಭಾರತ

ಸಮಗ್ರ ನ್ಯೂಸ್: ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ತಿಳಿಸಿದ್ದಾರೆ.2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೋರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ ಭಾರತ್

21,000 ಕೋಟಿ ರೂ. ಮೌಲ್ಯದ ರಕ್ಷಣಾ ರಫ್ತು/ ದಾಖಲೆ ನಿರ್ಮಿಸಿದ ಭಾರತ Read More »

ನಾಳೆ ರಾಜ್ಯಕ್ಕೆ ಅಮಿತ್ ಶಾ/ ಚನ್ನಪಟ್ಟಣದಲ್ಲಿ ರೋಡ್ ಶೋ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಲಿದ್ದಾರೆ.ಬೆಳಗ್ಗೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಈ ಭೇಟಿ ನಡೆಯಲಿದ್ದು, ಲೋಕಸಭೆ ಚುನಾವಣೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ನಮ್ಮಲ್ಲಿರುವ ಮಾಹಿತಿಯನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಜ್ಯದ 28 ಕ್ಷೇತ್ರಗಳನ್ನು ನಮ್ಮ ಮೈತ್ರಿಕೂಟ ಗೆಲ್ಲಬೇಕು. ಯಾವುದೇ ಕ್ಷೇತ್ರದಲ್ಲಿಯೂ ಸಮಸ್ಯೆ ಆಗಬಾರದು. ಹೊಂದಾಣಿಕೆಗೆ ಧಕ್ಕೆ ಆಗಬಾರದು, ಗುರಿ ತಲುಪಲು ಯಾವ

ನಾಳೆ ರಾಜ್ಯಕ್ಕೆ ಅಮಿತ್ ಶಾ/ ಚನ್ನಪಟ್ಟಣದಲ್ಲಿ ರೋಡ್ ಶೋ Read More »

ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ದೀರ? ಹಾಗಾದ್ರೆ ತಿಂಗಳಿಗೆ 1 ವರೆ ಲಕ್ಷ ಕೊಡುವ ಜಾಬ್ ಗೆ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಸೋಸಿಯೇಟ್ ಪ್ರೊಫೆಸರ್ ಹೋಮಿಯೋಪತಿ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ:ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ:ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 21, 2024ಕ್ಕೆ ಕನಿಷ್ಠ 18 ವರ್ಷ

ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ದೀರ? ಹಾಗಾದ್ರೆ ತಿಂಗಳಿಗೆ 1 ವರೆ ಲಕ್ಷ ಕೊಡುವ ಜಾಬ್ ಗೆ ಅಪ್ಲೈ ಮಾಡಿ Read More »