April 2024

ಕೇರಳ : ಬಾವಿಗೆ ಬಿದ್ದ ಹುಲಿಯ ರಕ್ಷಣೆ

ಸಮಗ್ರ ನ್ಯೂಸ್‌ : ಜನವಸತಿ ಪ್ರದೇಶಕ್ಕೆ ಹುಲಿಯೊಂದು ನುಗ್ಗಿ ಮನೆಯೊಂದರ ಬಾವಿಗೆ ಬಿದ್ದ ಘಟನೆ ವಯನಾಡು ಜಿಲ್ಲೆಯ ಕಾಲಪೆಟ್ಟಾ ಎಂಬಲ್ಲಿ ನಡೆದಿದೆ. ಈ ವೇಳೆ ಮನೆಯವರು, ಛಾವಣಿ ಮೇಲಿನ ನೀರಿನ ಟ್ಯಾಂಕ್‌ಗೆ ನೀರು ಪೂರೈಕೆ ಆಗದಿದ್ದನ್ನು ಪರಿಶೀಲಿಸಲು ಹೋಗಿದ್ದಾಗ ಬಾವಿಯಲ್ಲಿ ಹುಲಿ ಇರುವುದನ್ನು ಕಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಅರಣ್ಯಾಧಿಕಾರಿಗಳ ತಂಡ ಬಾವಿಯಿಂದ ನೀರನ್ನು ಹೊರ ಹಾಕಿ, ಬಳಿಕ ಅರವಳಿಕೆ ನೀಡಿ ಹುಲಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ಗಂಡು ಹುಲಿಯನ್ನು ಕಾಡಿಗೆ […]

ಕೇರಳ : ಬಾವಿಗೆ ಬಿದ್ದ ಹುಲಿಯ ರಕ್ಷಣೆ Read More »

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಶೆಟ್ಟಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್‌ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಶೆಟ್ಟಿ ಅವರು ಬುಧವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಇಂದು ತಮ್ಮ ನಾಮ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮುಖಂಡರಾದ ಮೊಟಮ್ಮ, ಅಂಶುಮತ್ ಉಪಸ್ಥಿತರಿದ್ದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಶೆಟ್ಟಿ ನಾಮಪತ್ರ ಸಲ್ಲಿಕೆ Read More »

ಮೈಸೂರು : ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿಯುವುದಿಲ್ಲ: ಪ್ರತಾಪ್‌ ಸಿಂಹ

ಸಮಗ್ರ ನ್ಯೂಸ್‌ : ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಸಚಿವ ವೆಂಕಟೇಶ್‌ಗೆ ತಿರುಗೇಟು ನೀಡಿದ್ದಾರೆ. ದೇವೇಗೌಡರೇ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ ಎಂಬ ಸಚಿವ ಕೆ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಅಮಿತ್ ಶಾ ಅವರ ಜೊತೆ ಫೋನಿನಲ್ಲಿ ದೇವೇಗೌಡರು ಮಾತನಾಡಿದ್ದರು ಎಂದು ಹೇಳಿದರು. ಅಮಿತ್ ಶಾ ಅವರಲ್ಲಿ ನನಗೆ ಟಿಕೆಟ್ ಕೊಡಿ ಎಂದು

ಮೈಸೂರು : ದೇವೇಗೌಡರು ನಾಯಕರನ್ನು ಬೆಳೆಸುತ್ತಾರೆ ಹೊರತು ತುಳಿಯುವುದಿಲ್ಲ: ಪ್ರತಾಪ್‌ ಸಿಂಹ Read More »

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್‌ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಇಂದು ತಮ್ಮ ನಾಮ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಮುಖಂಡ ಸಿ.ಟಿ. ರವಿ, ಜೆಡಿಎಸ್ ಮುಖಂಡ ಎಸ್.ಎಲ್. ಭೋಜೆಗೌಡ ಇದ್ದರು‌

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ Read More »

ಉಡುಪಿ: ಆಕಸ್ಮಿಕವಾಗಿ ಮಹಿಳೆ ಬಾವಿಗೆ ಬಿದ್ದು ಮೃತ್ಯು

ಸಮಗ್ರ ನ್ಯೂಸ್‌ : ಮಹಿಳೆಯೋರ್ವರು ಆಕಸ್ಮಿಕವಾಗಿ ಮನೆ ಸಮೀಪದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಸಮೀಪ ನಡೆದಿದೆ. ಮೃತಪಟ್ಟ ಮಹಿಳೆ ಗೌರಿ (62) ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರು, ಹೊರಗಡೆ ಹೋದ ಸಂದರ್ಭ ಮನೆಯ ಹತ್ತಿರದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಆಕಸ್ಮಿಕವಾಗಿ ಮಹಿಳೆ ಬಾವಿಗೆ ಬಿದ್ದು ಮೃತ್ಯು Read More »

ವಿಟ್ಲ : ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ : ಪ್ರಕರಣ ದಾಖಲು

ಸಮಗ್ರ ನ್ಯೂಸ್‌ : ವ್ಯಕ್ತಿಯೊಬ್ಬನಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನೆಟ್ಲ ಮುಡ್ನೂರು ಗ್ರಾಮದ ಜನತಾಗೃಹ ಎಂಬಲ್ಲಿ ನಡೆದಿದೆ. ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ನಿವಾಸಿ ನವೀನ ಶೆಟ್ಟಿ (61) ಎಂಬವರು, ಏ.೦೧ ರಂದು ರಾತ್ರಿ, ನವೀನ ಶೆಟ್ಟಿಯವರು, ಕೊರಗಪ್ಪ ಮತ್ತು ಸುಂದರ ಎಂಬವರೊಂದಿಗೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಜನತಾಗೃಹ ಸಾರ್ವಜನಿಕ ರಸ್ತೆಯಲ್ಲಿ ಮಾತನಾಡುತ್ತಿರುವಾಗ ಆರೋಪಿ ವಸಂತ ಎಂಬಾತನು ಬಂದು ನವೀನ ಶೆಟ್ಟಿಯವರಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ

ವಿಟ್ಲ : ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ : ಪ್ರಕರಣ ದಾಖಲು Read More »

ಹೊಸದಿಲ್ಲಿ : ಕಾಂಗ್ರೆಸ್‌ನ 11ನೇ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಗೆ 17 ಅಭ್ಯರ್ಥಿಗಳನ್ನೊಳಗೊಂಡ ತನ್ನ 11ನೇ ಪಟ್ಟಿಯನ್ನು ಕಾಂಗ್ರೆಸ್‌ ಪಕ್ಷ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಆಂಧ್ರ ಪ್ರದೇಶ, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಹೆಸರುಗಳಿವೆ. ಆಂಧ್ರಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯಾಗಿರುವ ವೈ ಎಸ್‌ ಶರ್ಮಿಳಾ ರೆಡ್ಡಿ ಅವರನ್ನು ಕಡಪಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕ್ಷೇತ್ರವನ್ನು ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಶರ್ಮಿಳಾ ಅವರ ಸೋದರ ಸಂಬಂಧಿ ಅವಿನಾಶ್‌ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ.

ಹೊಸದಿಲ್ಲಿ : ಕಾಂಗ್ರೆಸ್‌ನ 11ನೇ ಪಟ್ಟಿ ಬಿಡುಗಡೆ Read More »

ಹವಾಮಾನ ವರದಿ| ರಾಜ್ಯದಲ್ಲಿ ಕಾವೇರಲಿದೆ‌ ಬಿಸಿಲು| ಮುಂದಿನ 3 ತಿಂಗಳು‌ ದೇಶಾದ್ಯಂತ ಕಾಡಲಿದೆ ಬಿಸಿಗಾಳಿ, ಬಿಸಿಲ ಝಳ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲ, ಮತ್ತೊಂದೆಡೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ನಡುವೆ ಮುಂದಿನ ಮೂರು ತಿಂಗಳು ರಣಬಿಸಿಲು ಇರಲಿದ್ದು, ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಅಂದರೆ 2ರಿಂದ 8 ದಿನಗಳ ಕಾಲ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಏಪ್ರಿಲ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ಬಯಲುಸೀಮೆಯ ಬಹುತೇಕ ಭಾಗಗಳಲ್ಲಿ ಬಿಸಿಗಾಳಿ ಬೀಸಲಿದೆ.

ಹವಾಮಾನ ವರದಿ| ರಾಜ್ಯದಲ್ಲಿ ಕಾವೇರಲಿದೆ‌ ಬಿಸಿಲು| ಮುಂದಿನ 3 ತಿಂಗಳು‌ ದೇಶಾದ್ಯಂತ ಕಾಡಲಿದೆ ಬಿಸಿಗಾಳಿ, ಬಿಸಿಲ ಝಳ Read More »

ಕೆಪಿಎಸ್​ಸಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ 4 ಕೋಟಿ ವಂಚನೆ| ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗೊಂದು ಕೆಪಿಎಸ್​ಸಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 4 ಕೋಟಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆಪಿಎಸ್​ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಸಿಎಂ ಹಾಗೂ ರಾಜ್ಯಪಾಲರ ನಕಲಿ ಲೆಟರ್ ಹೆಡ್ ಹಾಗೂ ನಕಲಿ ಸಹಿ ಬಳಸಿ 4 ಕೋಟಿ ಹಣ ಪಡೆದು ವಂಚನೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಿಯಾಜ್ ಅಹ್ಮದ್, ಯೂಸುಫ್, ಚಂದ್ರಪ್ಪ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ಕರ್ನಾಟಕ

ಕೆಪಿಎಸ್​ಸಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ 4 ಕೋಟಿ ವಂಚನೆ| ಆರೋಪಿಗಳು ಅರೆಸ್ಟ್ Read More »

ಲೋಕಸಭಾ ಚುನಾವಣೆ/ ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯ ಅಬ್ಬರದ ಪ್ರಚಾರ ಆರಂಭಗೊಂಡಿದ್ದು, ಇಂದು ರಾಜ್ಯಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸತತ ಸಭೆ, ಸಮಾವೇಶಗಳ ಬಳಿಕ ಇದೀಗ ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರು ಗ್ರಾಮಂತರ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅಮಿತ್ ಶಾ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ್ದಾರೆ.ಒಂದೂವರೆ ಕಿಲೋಮೀಟರ್ ಸಾಗಲಿರುವ ಈ ರೋಡ್‍ಶೋನಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ

ಲೋಕಸಭಾ ಚುನಾವಣೆ/ ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ Read More »