April 2024

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​​ ಹತ್ತಲು ಯತ್ನಿಸಿದ ಚಿರತೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್​​ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ. ತುರಹಳ್ಳಿ ಫಾರೆಸ್ಟ್​ನಿಂದ ಚಿರತೆ ಮತ್ತು ಮರಿ ರಸ್ತೆಗೆ ನುಗ್ಗಿದೆ. ಚಿರತೆ ತಪ್ಪಿಸಿಕೊಂಡಿದ್ದು, ಮರಿ‌ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಚಿರತೆ ಮರಿಗೆ ಬಿಎಂಟಿಸಿ ಚಾಲಕ ನೀರು ಕುಡಿಸಲು ಮುಂದಾಗಿದ್ದು, ಈ ವೇಳೆ ಚಾಲಕನ ಮೇಲೆ ದಾಳಿ ಮಾಡಲು ಮರಿ ಚಿರತೆ ಮುಂದಾಗಿದೆ. ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್​​ ಕೆಳಗೆ ಮರಿ ಚಿರತೆ ಅವಿತುಕೊಂಡಿತ್ತು. ಹೀಗಾಗಿ […]

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​​ ಹತ್ತಲು ಯತ್ನಿಸಿದ ಚಿರತೆ Read More »

ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅನುಮತಿ ಅವಶ್ಯಕತೆ ಇಲ್ಲ

ಸಮಗ್ರ ನ್ಯೂಸ್: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ಚುನಾವಣೆ/ ರಾಜಕೀಯ ಕಾರ್ಯಕ್ರಮಗಲನ್ನು ನಡೆಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು, 21-ಮೈಸೂರು ಲೋಕಸಭಾ ಕ್ಷೇತ್ರರವರೆಗೆ ಸಂಬಂಧಪಟ್ಟ ರಾಜಕೀಯ ಪಕ್ಷ/ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕಡ್ಡಾಯವಾಗಿ ಅನುಮತಿಯನ್ನು ಪಡೆದ ನಂತರ ಕಾರ್ಯಕ್ರಮವನ್ನು ನಡೆಸಬೇಕು.ಅದಲ್ಲದೇ ಈ ಕಚೇರಿಗೆ ಧಾರ್ಮಿಕ ಕಾರ್ಯಕ್ರಮಗಳು/ ಕೌಟುಂಬಿಕ ಕಾರ್ಯಕ್ರಮ (ಮದುವೆ, ಗೃಹ ಪ್ರವೇಶ, ದೇವರ ಪೂಜೆ ಇತ್ಯಾದಿ) (ರಾಜಕೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಗಳಿಗೆ ಈ ಕಚೇರಿಗೆ ಅರ್ಜಿಗಳು ಸ್ವೀಕೃತವಾಗುತ್ತಿರುತ್ತದೆ. ನಿಯಮಗಳಂತೆ

ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅನುಮತಿ ಅವಶ್ಯಕತೆ ಇಲ್ಲ Read More »

ಕೊಡಗು: ರಸ್ತೆಗಳಲ್ಲಿ ಕಾಡಾನೆ ಪ್ರತ್ಯಕ್ಷ ಭಯಬೀತರಾದ ಗ್ರಾಮಸ್ಥರು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕೆಲವು ಕಡೆ ರೈಲ್ವೆ ಬ್ಯಾರಿಕೆಟ್ ಕಾಮಗಾರಿ ಪೂರ್ಣಗೊಳ್ಳದ ಜಾಗದಲ್ಲಿ ಕಾಡಾನೆಗಳು ದಾಟಿ ಗ್ರಾಮಗಳಿಗೆ ಸೇರುತ್ತಿವೆ. ಮೀಸಲು ಅರಣ್ಯ ಸಂಪೂರ್ಣ ಒಣಗಿದ್ದು ಅರಣ್ಯದೊಳಗೆ ನೀರಿನ ಕಾಡಾನೆಗಳು ಕಾಡುಬಿಟ್ಟು ಗ್ರಾಮದೊಳಗೆ ನುಗ್ಗುತ್ತವೆ ಇದರಿಂದ ಗ್ರಾಮಸ್ಥರು ಭಯಬೀತವಾಗಿ ಕಾಡಾನೆಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ.

ಕೊಡಗು: ರಸ್ತೆಗಳಲ್ಲಿ ಕಾಡಾನೆ ಪ್ರತ್ಯಕ್ಷ ಭಯಬೀತರಾದ ಗ್ರಾಮಸ್ಥರು Read More »

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ

ಸಮಗ್ರ ನ್ಯೂಸ್‌ : ನಾಳೆ ನಾಮಪತ್ರ ಸಲ್ಲಿಸಲಿರುವ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಚುನಾವಣಾ ಠೇವಣಿಗಾಗಿ ಕಾರ್ಮಿಕ ಮಹಿಳೆಯರು ದೇಣಿಗೆ ನೀಡಿದ್ದಾರೆ. ತಾವು ದುಡಿದ ಸ್ವಂತ ಹಣವನ್ನು ದೇಣಿಗೆ ರೂಪಾದಲ್ಲಿ ಬ್ರಿಜೇಶ್ ಚೌಟಾ ಅವರಿಗೆ ಮಹಿಳೆಯರು ಸಹಾಯಹಸ್ತದ ರೂಪದಲ್ಲಿ ನೀಡಿದ್ದಾರೆ. ಮೀನಿನ ವ್ಯಾಪಾರ, ಹೂವಿನ ವ್ಯಾಪಾರ ಹಾಗು ಇತರೆ ಸಣ್ಣ ಪುಟ್ಟ ವ್ಯವಹಾರ ಮಾಡುವ ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲಕ ಹಚ್ಚಿ ದೃಷ್ಟಿ ತೆಗೆದು ಆಶೀರ್ವಾದಿಸಿ ಬಳಿಕ ಚುನಾವಣಾ ಠೇವಣಿಗೆ

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ Read More »

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ?

ಸಮಗ್ರ ನ್ಯೂಸ್‌ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಲೋಕಸಭೆ ಚುನಾವಣೆಯ ಪ್ರಚಾರ ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೆ ಜೊತೆಗೆ ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ಶೋಭಾ ಕರಂದ್ಲಾಜೆಯವರು 16.02 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಚರಾಸ್ತಿ – 9 ಕೋಟಿ 23 ಲಕ್ಷ 66 ಸಾವಿರ 909 ರೂಪಾಯಿ ಮೌಲ್ಯ, ಸ್ಥಿರಾಸ್ತಿ – 6 ಕೋಟಿ 78 ಲಕ್ಷ 97 ಸಾವಿರ ರೂಪಾಯಿ ಮೌಲ್ಯ, ಬ್ಯಾಂಕ್

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ? Read More »

ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ| 500 ಅಡಿ ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಕಂದಮ್ಮ

ಸಮಗ್ರ ವಾರ್ತೆ: ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದ್ದು ಇದೀಗ 500 ಅಡಿಯ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಮುಜುಗೊಂಡ ಎಂಬುವವರ ಜಮೀನಿನಲ್ಲಿ ಸುಮಾರು 500 ಅಡಿ ಆಳದಷ್ಟು ಕೊಳವೆ ಬಾವಿಯನ್ನು ಕೊಡೆಯಲಾಗಿತ್ತು. ಈ ವೇಳೆ ಕೊಳವೆ ಬಾವಿಯಿಂದ ನೀರು ಬರದೇ ಹಿನ್ನೆಲೆಯಲ್ಲಿ ಅದನ್ನು ಹಾಗೆ ಬಿಟ್ಟಿದ್ದರು.

ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ| 500 ಅಡಿ ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಕಂದಮ್ಮ Read More »

ಉಬರ್ ಆಟೋ ಏರಿದವನಿಗೆ ಶಾಕ್…!15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 1 ಕೋಟಿ ರೂ

ಸಮಗ್ರ ನ್ಯೂಸ್: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ ಉಬರ್ ನಲ್ಲಿ ಆಟೋ ಬುಕ್ ಮಾಡಿದ್ರು, ಆದ್ರೆ ಆಟೋ ಬುಕ್ ಮಾಡಿ ಇಳಿದ ಮೇಲೆ ಆ ಪ್ರಯಾಣಿಕನಿಗೆ ಶಾಕ್ ಎದುರಾಗಿದೆ. ಹೌದು ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್‌ ಆಟೋ ಬುಕ್‌ ಮಾಡಿದ್ದರು. ಟಿನ್‌ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಬಂದು ಇಳಿದ ಪ್ರಯಾಣಿಕನಿಗೆ ಜಸ್ಟ್‌ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. ತೋರಿಸಿದೆ. ಉಬರ್‌

ಉಬರ್ ಆಟೋ ಏರಿದವನಿಗೆ ಶಾಕ್…!15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 1 ಕೋಟಿ ರೂ Read More »

ಹುಬ್ಬಳ್ಳಿ: ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ಎಂದು IMF ಹೇಳಿದೆ;ಪ್ರಲ್ಹಾದ್‌ ಜೋಶಿ

ಸಮಗ್ರ ನ್ಯೂಸ್‌ : ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಮುಂದುವರಿಯುತ್ತದೆ. ಕನಿಷ್ಠ ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ನಡೆಸುತ್ತಾರೆ ಎಂದು ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಹೇಳಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ನುಡಿದರು. ಪ್ರಲ್ಹಾದ್‌ ಜೋಶಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೋದಿ ಆಡಳಿತದ ಮೆಚ್ಚುಗೆ ವ್ಯಕ್ತವಾಗಿದ್ದು, ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಅಂತಾರಾಷ್ಟ್ರೀಯ ಮಟ್ಟದ

ಹುಬ್ಬಳ್ಳಿ: ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ಎಂದು IMF ಹೇಳಿದೆ;ಪ್ರಲ್ಹಾದ್‌ ಜೋಶಿ Read More »

ಮಧ್ಯಪ್ರದೇಶ: ಕಾಂಗ್ರೆಸ್‌ ಪಕ್ಷದವರೇ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಯಾದವ್

ಸಮಗ್ರ ನ್ಯೂಸ್‌ : ಕಾಂಗ್ರೆಸ್‌ ಪಕ್ಷವೇ ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಮೂಲಕ ಜಯ ಸಾಧಿಸಿದರೆ, ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಮೋಹನ್‌ ಯಾದವ್‌ ಪ್ರತಿಕ್ರಿಯಿಸಿ, ರಾಹುಲ್ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿರುಗೇಟು ನೀಡಿದರು. ಏಕೆಂದರೆ ಅವರದೇ ಪಕ್ಷದವರು ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಬೇರೆಯವರು ಹೇಗೆ ಅವರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಹೇಳಿದರು. ಚುನಾವಣಾ

ಮಧ್ಯಪ್ರದೇಶ: ಕಾಂಗ್ರೆಸ್‌ ಪಕ್ಷದವರೇ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಯಾದವ್ Read More »

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ

ಸಮಗ್ರ ನ್ಯೂಸ್‌ : ಚಾಮರಾಜನಗರ ಹಾಗೂ ಮೈಸೂರು ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಇಳಿಸುತ್ತಾರೆ ಎಂಬ ಭಯವಿದೆ. ಹೀಗಾಗಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರದ ಪತನ ಖಚಿತ ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ.

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ Read More »