April 2024

ಕುಂದಾಪುರ: ಮನೆಗೆ ನುಗ್ಗಿ ಕಳವು ಪ್ರಕರಣ- ಆರೋಪಿ ಬಂಧನ

ಸಮಗ್ರ ನ್ಯೂಸ್‌ : ಉಡುಪಿ ಕುಂದಾಪುರ ತಾಲೂಕಿನ ಕೋಣಿ ಎಂಬಲ್ಲಿನ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕೋಣಿ ಗ್ರಾಮದ ವಿಜಯ (34) ಬಂಧಿತ ಆರೋಪಿ. ಈತನಿಂದ ಒಟ್ಟು 2.64ಲಕ್ಷ ರೂ. ಮೌಲ್ಯದ 44 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯ ಕಪಾಟಿನಲ್ಲಿದ್ದ 44 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿದ್ದು, ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. […]

ಕುಂದಾಪುರ: ಮನೆಗೆ ನುಗ್ಗಿ ಕಳವು ಪ್ರಕರಣ- ಆರೋಪಿ ಬಂಧನ Read More »

ಉಡುಪಿ : ಕಾಲೇಜಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ: ಬಿಜೆಪಿ ಅಭ್ಯರ್ಥಿ ಕೋಟ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್‌ : ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕ ಲಾಲಾಜಿ ಆ‌ರ್.ಮೆಂಡನ್ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಕಟಪಾಡಿ ತ್ರಿಶಾ ಕಾಲೇಜಿನ ಕಾಂಪೌಂಡಿನ ಒಳಗಡೆ ಕೋಟ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಲಾಲಾಜಿ ಆ‌ರ್.ಮೆಂಡನ್ ಅವರಿಗೆ ತ್ರಿಶಾ ಕಾಲೇಜಿನ ಆಡಳಿತ ಮಂಡಳಿಯವರು

ಉಡುಪಿ : ಕಾಲೇಜಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ: ಬಿಜೆಪಿ ಅಭ್ಯರ್ಥಿ ಕೋಟ ವಿರುದ್ಧ ಪ್ರಕರಣ ದಾಖಲು Read More »

ಉಡುಪಿ: ಎ.9ರಿಂದ ಎ.18ರ ವರೆಗೆ ಶೀರೂರು ಮೂಲ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ

ಸಮಗ್ರ ನ್ಯೂಸ್‌ : ಶೀರೂರು ಮೂಲ ಮಠದ ಆಶ್ರಯದಲ್ಲಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಇದೇ ಬರುವ ಎ.9ರಿಂದ ಎ.18ರ ವರೆಗೆ ಹರಿಖಂಡಿಗೆಯ ಶೀರೂರು ಮೂಲ ಮಠದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನರಾದ ಡಾ. ಎಂ.ಉದಯ ಕುಮಾರ್ ಸರಳತ್ತಾಯ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಸುಮಾರು 70 ವರ್ಷಗಳ ಹಿಂದೆ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಆರಂಭಿಸಿದ್ದ ಶ್ರೀರಾಮ ನವಮಿ ರಥೋತ್ಸವದ ಸವಿನೆನಪಿಗಾಗಿ ಈ ಮಹೋತ್ಸವವನ್ನು

ಉಡುಪಿ: ಎ.9ರಿಂದ ಎ.18ರ ವರೆಗೆ ಶೀರೂರು ಮೂಲ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ Read More »

Weather Report: ರಾಜ್ಯದಲ್ಲಿ ಸೆಖೆ ಇನ್ನೂ ಹೆಚ್ಚು! ಇಲ್ಲಿದೆ ವೆದರ್ ರಿಪೋರ್ಟ್

ಸಮಗ್ರ ನ್ಯೂಸ್: ಸೆಕೆಗಾಲ ಬಂದಾಯ್ತು, ಈಗಿನ ಸೆಖೆಗೆ ಉಸ್ಸಪ್ಪಾ ಅಂತ ಹೇಳುತ್ತಿದ್ದೇವೆ. ಆದರೆ ಇನ್ನೂ ಸೆಕೆ ಜಾಸ್ತಿ ಆಗುತ್ತೆ ಅಂತೆ. ಇಲ್ಲಿದೆ ವೆದರ್ ರಿಪೋರ್ಟ್. ಭಾರತದ ಹವಾಮಾನ ಇಲಾಖೆ (IMD) ದೇಶಾದ್ಯಂತ ಕೆಲವು ಕಡೆ ವಿಪರೀತ ಸೆಕೆ ಮತ್ತು ಕೆಲವು ಮಳೆಯ ಮುನ್ಸೂಚನೆ ನೀಡಿದೆ. ದೇಶದೆಲ್ಲೆಡೆ ಕಳೆದ ಕೆಲವು ಬಿಸಿಲು ಧಗಧಗನೆ ಉರಿಯುತ್ತಿದೆ. ಜನ ಸೆಕೆ ತತ್ತರಿಸಿದ್ದಾರೆ. ಬೆಳಗ್ಗೆಯಿಂದಲೇ ಬಿಸಿಲು ತಾಪ ಆರಂಭವಾಗಿ ಹೊರಗಡೆ ಜನ ತಿರುಗಾಡಲು ಯೋಚಿಸುವಂತಾಗಿದೆ. ಇದೀಗ ಹವಾಮಾನ ಇಲಾಖೆ ಕೂಡ ಕೆಲವು ರಾಜ್ಯಗಳಿಗೆ

Weather Report: ರಾಜ್ಯದಲ್ಲಿ ಸೆಖೆ ಇನ್ನೂ ಹೆಚ್ಚು! ಇಲ್ಲಿದೆ ವೆದರ್ ರಿಪೋರ್ಟ್ Read More »

ಬೀದರ್ : ಬಿಜೆಪಿ, ಜೆಡಿಎಸ್ ಮೈತ್ರಿ ಹಾಲು ಜೇನು ತರಹ ಆಗಿದೆ: ಆರ್. ಅಶೋಕ

ಸಮಗ್ರ ನ್ಯೂಸ್ : ಅಮಿತ ಶಾ ಸೂಚನೆ ಮೇರೆಗೆ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಮನ್ವಯ ಸಭೆ ಕರೆಯಲಾಗಿದೆ. ಹಾಗಾಗಿ ಬೀದರ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಮನ್ವಯ ಸಭೆ ನಡೆಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಹೇಳಿದರು. ಈಗಾಗಲೇ ದೇವಗೌಡರು ಕೆಳಮಟ್ಟದಿಂದ ಬಿಜೆಪಿ ಪರ‌ ಕೆಲಸ ಮಾಡುತ್ತಾ ಇದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಹಾಲು ಜೇನು ತರಹ ಆಗಿದೆ ಎಂದು ಬೀದರ್‌ ನಲ್ಲಿ ವಿಪಕ್ಷ

ಬೀದರ್ : ಬಿಜೆಪಿ, ಜೆಡಿಎಸ್ ಮೈತ್ರಿ ಹಾಲು ಜೇನು ತರಹ ಆಗಿದೆ: ಆರ್. ಅಶೋಕ Read More »

ಬೆಂಗಳೂರಿನ ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ

ಸಮಗ್ರ ನ್ಯೂಸ್: ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬಾಲಕಿಯರ ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಐವರಿಗೆ ಹೆಚ್​​ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಾಲರಾದಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಸಹಪಾಠಿಗಳು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನಲ್ಲಿ ಹೆಚ್ಚು ತಾಪಮಾನ ನಡುವೆ ಕಾಲರಾ ಭೀತಿಯು ಶುರುವಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು,

ಬೆಂಗಳೂರಿನ ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ Read More »

ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ವ್ಯಕ್ತಿಯೋರ್ವನಿಂದ ಹಲ್ಲೆ, ಬಸ್ ಚಾಲಕನಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ನಡೆದಿದೆ. ಶಿರವಾಡದ ಸುಭಾಷ್ ಬಾಡಕರ್ ಈ ರೀತಿಯ ವರ್ತನೆ ತೋರಿದು. ಈ ಬಸ್​ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ವೇಳೆ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್​ ಮುಂದೆ ಬೈಕ್​ ನಿಲ್ಲಿಸಿದ್ದಾನೆ. ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ.

ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ವ್ಯಕ್ತಿಯೋರ್ವನಿಂದ ಹಲ್ಲೆ, ಬಸ್ ಚಾಲಕನಿಗೆ ಗಂಭೀರ ಗಾಯ Read More »

ಲೋಕಸಭಾ ಚುನಾವಣೆ/ ಮತ ಜಾಗೃತಿಗೆ ಹಲವು ಸಂಸ್ಥೆಗಳು ಸಾಥ್

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ಮತದಾನ ಜಾಗೃತಿಗೆ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಹಲವಾರು ಅಂಚೆ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಮತದಾನ ಜಾಗೃತಿಗೆ ಸಾಥ್ ನೀಡಿವೆ. ಮತದಾನ ಜಾಗೃತಿಗೆ ಈ ಬಾರಿ ಅಂಚೆ ಇಲಾಖೆಯು ಕೈ ಜೋಡಿಸಿದ್ದು, ಪ್ರತಿ ಪೋಸ್ಟ್‌ನಲ್ಲಿಯೂ ಮತಜಾಗೃತಿ ಮೂಡಿಸುತ್ತಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರಿಗೆ ಬರುವ ಪತ್ರಗಳ ಮೇಲೆ ‘ಚುನಾವಣೆ ಪರ್ವ, ದೇಶದ ಗರ್ವ’ ಎಂದು ಮೊಧಿಹರು (ಸೀಲ್‌)ಹಾಕಲಾಗುತ್ತಿದೆ. ಇನ್ನೊಂದೆಡೆ ಅಂಚೆ ಕಚೇರಿಯಲ್ಲಿ ಸಿಗುವ ಎನ್‌ವಲಪ್‌

ಲೋಕಸಭಾ ಚುನಾವಣೆ/ ಮತ ಜಾಗೃತಿಗೆ ಹಲವು ಸಂಸ್ಥೆಗಳು ಸಾಥ್ Read More »

ಹೊಸ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ| ಮೇ.29ರಿಂದ ಶಾಲಾರಂಭ| ದಸರಾ ರಜೆ ಎಷ್ಟು ದಿನ ಗೊತ್ತೇ?

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ 2024-2025 ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಮೊದಲನೇ ಅವಧಿಯು 2024ರ ಮೇ 29 ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ. ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ, 2025ರ ಏಪ್ರಿಲ್ 11 ರಿಂದ

ಹೊಸ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ| ಮೇ.29ರಿಂದ ಶಾಲಾರಂಭ| ದಸರಾ ರಜೆ ಎಷ್ಟು ದಿನ ಗೊತ್ತೇ? Read More »

ಹವಾಮಾನ ವರದಿ| ಎ.7 ರಿಂದ ಕರಾವಳಿ ಹಾಗೂ ಒಳನಾಡಿನ ಹಲವೆಡೆ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಬಿಸಿಲ ಬೇಗೆ ನಡುವೆ ಏಪ್ರಿಲ್ 7ರಿಂದ 11ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಒಂದು ವಾರ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ತಿಂಗಳ ಅಂತ್ಯದವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಬೀದರ್, ಮೈಸೂರು, ಕಲಬುರಗಿ, ಯಾದಗಿರಿ,

ಹವಾಮಾನ ವರದಿ| ಎ.7 ರಿಂದ ಕರಾವಳಿ ಹಾಗೂ ಒಳನಾಡಿನ ಹಲವೆಡೆ ಮಳೆ ನಿರೀಕ್ಷೆ Read More »