April 2024

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು

ಇದು ಲಾವಾ ಕಂಪನಿ ತಯಾರಿಸಿದ ಬ್ಲೇಜ್ 5ಜಿ ಮೊಬೈಲ್. ಇದು ಎಲ್ಲಾ 5G ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಈ ಮೊಬೈಲ್ 6.5 ಇಂಚು ಇದೆ. ಇದು HD+ 90Hz ಡಿಸ್ಪ್ಲೇ ಹೊಂದಿದೆ. ಅಲ್ಲದೆ ಇದು Widevine L1 DRM ರಕ್ಷಣೆಯನ್ನು ಹೊಂದಿದೆ. ಎಲ್ಲಾ ವಿಷಯವನ್ನು ಹೈ ರೆಸಲ್ಯೂಷನ್‌ನಲ್ಲಿ ನೋಡಲಾಗುವುದು ಎಂದು ಅವರು ಹೇಳಿದರು. ಇದು ಆಕ್ಟಾ-ಕೋರ್ 2.2GHz ಮೀಡಿಯಾ ಟೆಕ್ ಡೈಮೆನ್ಶನ್ 700 ಪ್ರೊಸೆಸರ್ ಹೊಂದಿದೆ. ಇದು 4GB RAM, UFS 2.2 ಮತ್ತು 128GB ಸಂಗ್ರಹವನ್ನು ಹೊಂದಿದೆ. […]

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು Read More »

ಭಾರತ -ಮಾಲ್ಡೀವ್ಸ್ ನಡುವೆ ವ್ಯಾಪಾರಕ್ಕೆ ಒಪ್ಪಿಗೆ| ಧನ್ಯವಾದ ತಿಳಿಸಿದ ಮಾಲ್ಡೀವ್ಸ್ ವಿದೇಶಾಂಗ ಸಚಿವ

ಸಮಗ್ರ ನ್ಯೂಸ್ : ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಭಾರತ ನೆರವಿನ ಹಸ್ತ ನೀಡುವುದನ್ನು ಮುಂದುವರಿಸಿದ್ದು, ಭಾರತದ ನೆರವಿನ ಹಸ್ತಕ್ಕೆ ಮಾಲ್ಡೀವ್ಸ್ ಧನ್ಯವಾದ ಹೇಳಿದೆ. ಭಾರತದಿಂದ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದವನ್ನು ನವೀಕರಣಗೊಳಿಸಿದ್ದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯವನ್ನು ಮತ್ತಷ್ಟು ವಿಸ್ತರಿಸುವ ಬಲವಾದ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತ -ಮಾಲ್ಡೀವ್ಸ್ ನಡುವೆ ವ್ಯಾಪಾರಕ್ಕೆ ಒಪ್ಪಿಗೆ| ಧನ್ಯವಾದ ತಿಳಿಸಿದ ಮಾಲ್ಡೀವ್ಸ್ ವಿದೇಶಾಂಗ ಸಚಿವ Read More »

ನವದೆಹಲಿ: ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ;ರಾಜನಾಥ್‌ ಸಿಂಗ್‌

ಸಮಗ್ರ ನ್ಯೂಸ್‌ : ಭಯೋತ್ಪಾದಕರನ್ನು ಸುಮ್ಮನೆ ಬಿಡಲ್ಲ. ಪಾಕಿಸ್ತಾನಕ್ಕೆ ನುಗ್ಗಿಯಾದರೂ ಸರಿ ಅವರನ್ನು ಕೊಲ್ಲುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಸಚಿವರು ಮಾತನಾಡಿ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಾಚೆ ಪಲಾಯನ ಮಾಡುವವರನ್ನು ನಿರ್ಮೂಲನೆ ಮಾಡಲು ಭಾರತವು ಪಾಕಿಸ್ತಾನದೊಳಗೆ ಪ್ರವೇಶಿಸಲಿದೆ. ಯಾವುದೇ ಭಯೋತ್ಪಾದಕನನ್ನು ಬಿಡುವುದಿಲ್ಲ, ಮನೆಗೆ ನುಗ್ಗಿ ಅವನನ್ನು ಕೊಲ್ಲುತ್ತೇವೆ. ದೇಶದ ಶಾಂತಿ ಕದಡಲು ಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಭಾರತವು ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನು

ನವದೆಹಲಿ: ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ;ರಾಜನಾಥ್‌ ಸಿಂಗ್‌ Read More »

ಮತ್ತೊಂದು ನಿಗೂಢ ಸಾವು/ ಅಮೇರಿಕಾದಲ್ಲಿ ಹತ್ತಕ್ಕೇರಿದ ಭಾರತೀಯರ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದು, ಈ ಮೂಲಕ ೨೦೨೪ರ ಆರಂಭದಿಂದ, ಇಲ್ಲಿಯವರೆಗೆ ಅಮೆರಿಕದಲ್ಲಿ ಸಾವನ್ನಪ್ಪಿದ ಭಾರತೀಯ, ಭಾರತೀಯ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಉಮಾ ಸತ್ಯ ಸಾಯಿಗಡ್ಡೆ ಎಂಬಾಕೆ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಈ ಸಾವಿನ ನಿಗೂಢತೆ ಬೇಧಿಸಲು ತನಿಖೆ ಆರಂಭವಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿ ತಳಿಸಿದೆ. ಈಕೆ ಉಮಾ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದೂ ದೂತವಾಸ ಕಚೇರಿ ಹೇಳಿದೆ.

ಮತ್ತೊಂದು ನಿಗೂಢ ಸಾವು/ ಅಮೇರಿಕಾದಲ್ಲಿ ಹತ್ತಕ್ಕೇರಿದ ಭಾರತೀಯರ ಸಾವಿನ ಸಂಖ್ಯೆ Read More »

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್

ಸಮಗ್ರ ನ್ಯೂಸ್: ಭಾರತದಲ್ಲಿ ಜಂಟಿಯಾಗಿ ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಟೋ ಮೊಬೈಲ್‌ ಕ್ಷೇತ್ರದ ಜಾಗತಿಕ ದೈತ್ಯ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ ಪರಸ್ಪರ ಕೈ ಜೋಡಿಸಿದ್ದಾರೆ. ಭಾರತದ ಪುಣೆ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಪೈಕಿ ಜಂಟಿ ಉದ್ಯಮದ ಮುಖ್ಯ ಕೇಂದ್ರ ಬೆಂಗಳೂರು ಮತ್ತು ಪುಣೆಯಲ್ಲಿ, ಐಟಿ ಚೆನ್ನೈನಲ್ಲಿ ಸ್ಥಾಪನೆಯಾಗಲಿವೆ ಎಂದು ಕಂಪನಿಗಳು ಹೇಳಿವೆ. ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದವು ಸಾಫ್ಟ್‌ವೇರ್-ಡಿಫೈನ್ಸ್ ವೆಹಿಕಲ್, ಬಿಎಂಡಬ್ಲ್ಯು

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ Read More »

ನವದೆಹಲಿ : ನವಜಾತ ಶಿಶುಗಳನ್ನು 4 ರಿಂದ 5 ಲಕ್ಷ ರೂ.ಗೆ ಮಾರಾಟ; ಸಿಬಿಐ ದಾಳಿ

ಸಮಗ್ರ ನ್ಯೂಸ್‌ : ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧಿಸಿದಂತೆ ದೆಹಲಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಈ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಇದ್ದಾರೆ. ದಾಳಿ ವೇಳೆ ಸಿಬಿಐ ತಂಡ ಕೇಶವಪುರಂನ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಿಸಿದೆ. ಈ ಪ್ರಕರಣದಲ್ಲಿ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಹಾಗೂ ಖರೀದಿಸಿದ ವ್ಯಕ್ತಿಯ ವಿಚಾರಣೆ

ನವದೆಹಲಿ : ನವಜಾತ ಶಿಶುಗಳನ್ನು 4 ರಿಂದ 5 ಲಕ್ಷ ರೂ.ಗೆ ಮಾರಾಟ; ಸಿಬಿಐ ದಾಳಿ Read More »

ಬೀದರ್‌ ಲೋಕಸಭಾ ಚುನಾವಣೆ|ಪ್ರಚಾರದ ಅಖಾಡಲ್ಲಿ ‘ತಾರೆ’ ಗಳಿಗೆ ಬೇಡಿಕೆ

ಸಮಗ್ರ ನ್ಯೂಸ್‌ : ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಧಿಸೂಚನೆ ಹೊರಬೀಳಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ, ತಾರಾ ಪ್ರಚಾರಕರನ್ನು ಜಿಲ್ಲೆಗೆ ಕರೆತರಲು ಯೋಜನೆ ರೂಪಿಸಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಈಗಾಗಲೇ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ್ದು, ಕಳೆದ ಕೆಲವು ದಿನಗಳಿಂದ ಬಿರುಸಿನ ಪ್ರಚಾರ ಕೂಡ ಕೈಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯ ದಿನ ಶಕ್ತಿ ಪ್ರದರ್ಶನ ಮಾಡಿ,

ಬೀದರ್‌ ಲೋಕಸಭಾ ಚುನಾವಣೆ|ಪ್ರಚಾರದ ಅಖಾಡಲ್ಲಿ ‘ತಾರೆ’ ಗಳಿಗೆ ಬೇಡಿಕೆ Read More »

ಕೊಳ್ಳೇಗಾಲ: ನೀರು, ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

ಸಮಗ್ರ ನ್ಯೂಸ್‌ : ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಜಮಾಯಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗುತ್ತ ಡಾ.ರಾಜ್ ರಸ್ತೆ ಮತ್ತು ಡಾ.ಬಿ.ಆರ್ ಅಂಭೇಡ್ಕರ್ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಎಡಿಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ರೈತ ಸಂಘ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ ಚಾಮರಾಜನಗರ ಜಿಲ್ಲೆಯಾದ್ಯಂತ ಬರಗಾಲ ಉಲ್ಬಣವಾಗಿದ್ದು ರೈತರು

ಕೊಳ್ಳೇಗಾಲ: ನೀರು, ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ Read More »

ಬೀದರ್: ಜೆಡಿಎಸ್, ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದ ಬಂಡೆಪ್ಪ ಖಾಶೆಂಪುರ್

ಸಮಗ್ರ ನ್ಯೂಸ್‌ : ಜೆಡಿಎಸ್, ಬಿಜೆಪಿ ಒಂದಾಗಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬೇರೆ ಪಕ್ಷದವರು ಆಶ್ಚರ್ಯ ಪಡುವಂತಾಗಿದೆ. ಆ ರೀತಿಯ ಜನ ಬೆಂಬಲ ನಮ್ಮ ಮೈತ್ರಿಗೆ ಸಿಕ್ಕಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ನಗರದಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ನಿವಾಸದಲ್ಲಿ ನಡೆದ ಬಿಜೆಪಿ ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ

ಬೀದರ್: ಜೆಡಿಎಸ್, ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದ ಬಂಡೆಪ್ಪ ಖಾಶೆಂಪುರ್ Read More »

ಉಡುಪಿ: ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ

ಸಮಗ್ರ ನ್ಯೂಸ್‌ : ಬಿಜೆಪಿ ಸಂಸ್ಥಾಪನಾ ದಿನಾಚರಣೆಯು ಇಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಆಗಿರುವ ಉದಯ್ ಕುಮಾರ್ ಶೆಟ್ಟಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆರ್ಗ ಶ್ರೀ ದಿನಕರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್, ನಗರ ಮಂಡಲ ಅಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಸಹ ವಕ್ತಾರರ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

ಉಡುಪಿ: ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ Read More »