April 2024

ಮಳೆಯ ಮುನ್ಸೂಚನೆ/ ಹಲವೆಡೆ ಯೆಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದ ಉತ್ತರ ಒಳನಾಡಿನ ಹಲವೆಡೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಇಂದು ಕೆಲವೆಡೆ ಮಳೆಯ ಮುನ್ಸೂಚನೆ ನಡುವೆಯೂ ತಾಪಮಾನ ಏರಿಕೆಯೊಂದಿಗೆ, ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ದಕ್ಷಿಣ […]

ಮಳೆಯ ಮುನ್ಸೂಚನೆ/ ಹಲವೆಡೆ ಯೆಲ್ಲೋ ಅಲರ್ಟ್ Read More »

ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್/ ರಾಜ್ಯದಲ್ಲಿ ಏರಿಕೆ ಕಂಡ ನೋಂದಣಿ

ಸಮಗ್ರ ನ್ಯೂಸ್: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್ ಅಳವಡಿಕೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಿಂಗಳಲ್ಲಿ 34 ಲಕ್ಷ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನೋಂದಾಯಿಸಿಕೊಂಡಿದ್ದಾರೆ. ದೇಶಾದ್ಯಂತ ಏಕರೂಪದ ವಾಹನ ನೋಂದಣಿ ಫಲಕ ಮತ್ತು ವಾಹನ ಸುರಕ್ಷತೆ ಅಗತ್ಯತೆಗಳ ಪರಿಚಯದೊಂದಿಗೆ, ಸಾರಿಗೆ ಇಲಾಖೆಯು ಏಪ್ರಿಲ್ 2019 ರ ಮೊದಲು ನೋಂದಾಯಿಸಲಾದ ವಾಹನಗಳಿಗೆ HSRP ಅನ್ನು ಕಡ್ಡಾಯಗೊಳಿಸಿದೆ. ಏಪ್ರಿಲ್ 2019 ರ ಮೊದಲು ರಾಜ್ಯದಲ್ಲಿ ನೋಂದಾಯಿಸಲಾದ 2 ಕೋಟಿಗಿಂತಲೂ ಹೆಚ್ಚು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಎಚ್‌ಎಸ್‌ಆರ್‌ಪಿ ಅಳವಡಿಸಲು

ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್/ ರಾಜ್ಯದಲ್ಲಿ ಏರಿಕೆ ಕಂಡ ನೋಂದಣಿ Read More »

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ/ ನಾಮಪತ್ರ ಹಿಂತೆಗೆಯಲು ಇಂದು‌ ಕಡೆಯ ದಿನ

ಸಮಗ್ರ ನ್ಯೂಸ್: ಕರ್ನಾಟಕದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ 358 ಅಭ್ಯರ್ಥಿಗಳು ಒಟ್ಟು 492 ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 300 ನಾಮಪತ್ರಗಳು ಕ್ರಮಬದ್ಧವಾಗಿದ್ದು ಉಳಿದವು ಅಮಾನ್ಯವಾಗಿವೆ. ಸಂಜೆಯ ವೇಳೆಗೆ 14 ಜಿಲ್ಲೆಗಳಲ್ಲಿ ಯಾವ ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಚುನಾವಣಾ ಪ್ರಚಾರ, ರೋಡ್‌ಶೋ ಇತ್ಯಾದಿ ಈಗಾಗಲೇ ಆರಂಭವಾಗಿದ್ದು, ಮಂಗಳವಾರದಿಂದ ಚುನಾವಣಾ ಪ್ರಚಾರ ಇನ್ನಷ್ಟು ಬಿರುಸಾಗಲಿದೆ. ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ/ ನಾಮಪತ್ರ ಹಿಂತೆಗೆಯಲು ಇಂದು‌ ಕಡೆಯ ದಿನ Read More »

ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ/ ದಾಖಲೆಗಳು ಏನೇನು ಬೇಕು?

ಸಮಗ್ರ ನ್ಯೂಸ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನು 2024ರ ಜನವರಿಯಿಂದಲೇ ಪರಿಷ್ಕರಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರ ಮಾಹಿತಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆಯು ಸೂಚಿಸಿದೆ. 2023-24ನೇ ಸಾಲಿನಲ್ಲಿ ಹೆಚ್ಚುವರಿ ಕಾರ್ಯಾಭಾರಕ್ಕೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಈಗಾಗಲೇ ಫೆಬ್ರವರಿವರೆಗೆ ಗೌರವಧನ ಬಿಡುಗಡೆ ಮಾಡಲಾಗಿದೆ. ಆದರೆ ಅತಿಥಿ ಉಪನ್ಯಾಸಕರು ಸಲ್ಲಿಸಿರುವ ಸೇವಾವಧಿಯ ಆಧಾರದಲ್ಲಿ ಗೌರವಧವನ್ನು ಪರಿಷ್ಕರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ 2024ರ ಜನವರಿಯಿಂದಲೇ ವ್ಯತ್ಯಾಸವಾಗಿರುವ ಗೌರವಧನವನ್ನು ಸರಿಪಡಿಸಬೇಕಿರುವ ಕಾರಣ ಅತಿಥಿ ಶಿಕ್ಷಕರ

ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ/ ದಾಖಲೆಗಳು ಏನೇನು ಬೇಕು? Read More »

ಕೇಂದ್ರೀಯ ವಿದ್ಯಾಲಯದ ಆರ್ ಟಿ ಇ ಸೀಟುಗಳಿಗೆ ಅರ್ಜಿ ಆಹ್ವಾನ/ ಏಪ್ರಿಲ್15 ಕೊನೆಯ ದಿನ

ಸಮಗ್ರ ನ್ಯೂಸ್: ಕೇಂದ್ರೀಯ ವಿದ್ಯಾಲಯದಲ್ಲಿರುವ ಶೇ.25 ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನವಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿನ 5 ಕಿಮೀ ವ್ಯಾಪ್ತಿಯಲ್ಲಿನ ಅಭ್ಯರ್ಥಿಗಳು ಹಾಗೂ ಬಿಪಿಎಲ್ ಕಾರ್ಡುದಾರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆkvsanghathan.nic.in ಅಥವಾ kvonlineadmission.kvs.gov.in ಸಂಪರ್ಕಿಸಬಹುದು.

ಕೇಂದ್ರೀಯ ವಿದ್ಯಾಲಯದ ಆರ್ ಟಿ ಇ ಸೀಟುಗಳಿಗೆ ಅರ್ಜಿ ಆಹ್ವಾನ/ ಏಪ್ರಿಲ್15 ಕೊನೆಯ ದಿನ Read More »

ಜಬಲಪುರದಲ್ಲಿ‌ ಮೋದಿ‌ ರೋಡ್ ಶೋ/ ಕುಸಿದ ವೇದಿಕೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಎ. 7ರಂದು ಮಧ್ಯಪ್ರದೇಶದ ಜಬಲಪುರದಲ್ಲಿ ಆಯೋಜಿಸಿದ್ದರು ಪ್ರಧಾನಿ ಮೋದಿ ಬಹತ್ ರೋಡ್ ಶೋ ವೇಳೆ ವೇದಿಕೆ ಕುಸಿದು ಕೆಲವರಿಗೆ ಗಾಯಗಳಾಗಿವೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ವೇದಿಕೆಗೆ ಸೇರಿದ ಕಾರಣ ವೇದಿಕೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರ ರೋಡ್

ಜಬಲಪುರದಲ್ಲಿ‌ ಮೋದಿ‌ ರೋಡ್ ಶೋ/ ಕುಸಿದ ವೇದಿಕೆ Read More »

ತಮಿಳುನಾಡಿನಲ್ಲಿ ಜೆ ಪಿ‌ ನಡ್ಡಾ ರೋಡ್ ಶೋಗೆ ಅನುಮತಿ ನಿರಾಕರಣೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ರೋಡ್ ಶೋಗೆ ಅನುಮತಿ ನಿರಾಕರಿಸಲಾಗಿದೆ. ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ . ಇದರ ಜೊತೆಗೆ ಸಮಯಪುರಂ ದೇವಸ್ಥಾನದ ಪುಷ್ಪಾರ್ಚನೆ ಸಮಾರಂಭ ಮತ್ತು ಸಂಚಾರ ದಟ್ಟಣೆ ಮುಂದಿಟ್ಟುಕೊಂಡು ಪೊಲೀಸರು ಜೆ.ಪಿ ನಡ್ಡಾ ಅವರ ರೋಡ್ ಶೋಗೆ ಅನುಮತಿ ನಿರಾಕರಿಸಿದ್ದಾರೆ. ಇನ್ನುತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೋಡ್ ಶೋ ನಡೆಸಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಪೊಲೀಸ್

ತಮಿಳುನಾಡಿನಲ್ಲಿ ಜೆ ಪಿ‌ ನಡ್ಡಾ ರೋಡ್ ಶೋಗೆ ಅನುಮತಿ ನಿರಾಕರಣೆ Read More »

ಮಡಿಕೇರಿ:ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ: ಯದುವೀರ್‌

ಸಮಗ್ರ ನ್ಯೂಸ್‌ : ನಿಮ್ಮೆಲ್ಲರ ಮನೆ ಮಗನಂತೆ ಕೆಲಸ ಮಾಡಲು ಸಿದ್ಧನಿದ್ದೇನೆ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕು. ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಅವರು ಭಾನುವಾರ ಕೊಡಗಿನ ಹಲವೆಡೆಗಳಲ್ಲಿ ಬಿರುಬಿಸಿಲಿನಲ್ಲೂ ಸಂಚಾರ ನಡೆಸಿ ಜನರಿಂದ ಮತ ಯಾಚಿಸುತ್ತಿದ್ದಾರೆ. ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಹತ್ತಾರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಹಗಲು-ರಾತ್ರಿ ಎನ್ನದೇ ಮತಯಾಚನೆಯಲ್ಲಿ ತೊಡಗಿದ್ದಾರೆ. ಅಂದಿನ ಕಾಲದಲ್ಲಿ ಅರಸರು

ಮಡಿಕೇರಿ:ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ: ಯದುವೀರ್‌ Read More »

ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಸೂತ್ರವಾಗಿ ಆಯೋಜಿಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ‘ಸ್ಥಳಾಂತರಗೊಂಡ 24,500ಕ್ಕೂ ಹೆಚ್ಚು ಜನರು ಮತದಾನದ ಹಕ್ಕಿಗೆ ಅರ್ಹರಾಗಿದ್ದಾರೆ. ಅವರಿಗೆ ಆಶ್ರಯ ಶಿಬಿರಗಳಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾ‌ರ್ ಝಾ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಶೇ 50ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ಜನರಿಗೆ ಮತದಾನ

ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು Read More »

ತಿರಸ್ಕೃತಗೊಂಡ ನಾಮ ಪತ್ರ/ ಬಿ ಎಸ್ ಪಿ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಉಚ್ಚಾಟನೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಬಿಎಸ್‌ಪಿ ರಾಜ್ಯಸಮಿತಿ ವತಿಯಿಂದ ನಿಯೋಜನೆಗೊಂಡಿದ್ದ ರೇವತಿರಾಜ್ ರವರ ನಾಮಪತ್ರ ತಿರಸ್ಕಾರಗೊಂಡು ಪಕ್ಷಕ್ಕೆ ಬಹಳ ಮುಜುಗರ ಮತ್ತು ಅಪಮಾನ ಉಂಟುಮಾಡಿದ ಆರೋಪದ ಮೇಲೆ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಉಚ್ಚಾಟಿಸಲಾಗಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರೇವತಿರಾಜ್ ಅವರ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆ ಪ್ರಚಾರ ಕಾರ್ಯಗಳನ್ನು ಬಿಎಸ್‌ಪಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಯವರಿಗೆ ಒಪ್ಪಿಸಿ, ಇವರನ್ನು ತಾರಾ ಪ್ರಚಾರಕರನ್ನಾಗಿಯೂ ಪಕ್ಷವು ನೇಮಕ ಮಾಡಿತ್ತು.

ತಿರಸ್ಕೃತಗೊಂಡ ನಾಮ ಪತ್ರ/ ಬಿ ಎಸ್ ಪಿ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಉಚ್ಚಾಟನೆ Read More »