April 2024

14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಫೈನಲ್/ 53 ನಾಮ ಪತ್ರ ವಾಪಸ್

ಸಮಗ್ರ ನ್ಯೂಸ್: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 52 ಮಂದಿ ಹಾಗೂ ಏ.6 ರಂದು ಒಬ್ಬರು ಸೇರಿದಂತೆ 53 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ಒಟ್ಟು 270 ಪುರುಷ 21 ಮಹಿಳೆಯರು ಸೇರಿದಂತೆ 300 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ಈ ಪೈಕಿ 53 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 247 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 226 ಪುರುಷ […]

14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಫೈನಲ್/ 53 ನಾಮ ಪತ್ರ ವಾಪಸ್ Read More »

ಸಿಇಟಿ ಕೇಂದ್ರ ಬದಲಾವಣೆ/ ಎಪ್ರಿಲ್ 12ರ ಒಳಗೆ ಅರ್ಜಿ ಸಲ್ಲಿಸಿ

ಸಮಗ್ರ ನ್ಯೂಸ್: ಸಿಇಟಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿರುವ ಕಲಬುರಗಿ ಜಿಲ್ಲೆಯ ಕೆಲ ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಾಂಶುಪಾಲರ ಮೂಲಕ ಇದೇ 12ರೊಳಗೆ ಮನವಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಕಲಬುರಗಿಯ ಕೆಲವು ಅಭ್ಯರ್ಥಿಗಳು ತಮಗೆ ಪರೀಕ್ಷಾ ಕೇಂದ್ರ ಕೋಲಾರ ಜಿಲ್ಲೆಯಲ್ಲಿ ಹಂಚಿಕೆಯಾಗಿದೆ ಎಂದು ಕೆಇಎಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ತಿಳಿಸಿರುವ ಕಾರಣ ಅವರ ಅರ್ಜಿಗಳನ್ನು ಪರಿಶೀಲಿಸಿದಾಗ ಅವರೇ ಎಡಿಟ್ ಸಂದರ್ಭದಲ್ಲಿ ಕೋಲಾರ

ಸಿಇಟಿ ಕೇಂದ್ರ ಬದಲಾವಣೆ/ ಎಪ್ರಿಲ್ 12ರ ಒಳಗೆ ಅರ್ಜಿ ಸಲ್ಲಿಸಿ Read More »

ಅಬಕಾರಿ ನೀತಿ ಹಗರಣ/ ಯುಗಾದಿಯಂದು ಕೇಜ್ರೀವಾಲ್‍ಗೆ ಸಿಗಬಹುದೇ ಸಿಹಿ ಸುದ್ದಿ?

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆಯ ಕುರಿತಾದ ದೆಹಲಿ ಹೈಕೋರ್ಟ್ ನ ತೀರ್ಪು ಇಂದು (ಏಪ್ರಿಲ್ 9) ಪ್ರಕಟಿಸಲಿದೆ. ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಅವರು ತನ್ನ ಬಂಧನ ಮತ್ತು ಇ.ಡಿ ರಿಮ್ಯಾಂಡ್ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ನಡೆಸುತ್ತಿರುವ ಹೈಕೋರ್ಟ್‍ನ ನ್ಯಾ. ಸ್ವರಾನಾ ಕಾಂತ ಶರ್ಮಾ ಅವರುಳ್ಳ ಪೀಠ, ಇಂದು ಅಪರಾಹ್ನ 2.30ರ ಸುಮಾರಿಗೆ ತೀರ್ಪು

ಅಬಕಾರಿ ನೀತಿ ಹಗರಣ/ ಯುಗಾದಿಯಂದು ಕೇಜ್ರೀವಾಲ್‍ಗೆ ಸಿಗಬಹುದೇ ಸಿಹಿ ಸುದ್ದಿ? Read More »

ಬಂಗಾಳದಲ್ಲಿ ಬಿಜೆಪಿ ನಂಬರ್ ಒನ್/ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿಕೆ

ಸಮಗ್ರ ನ್ಯೂಸ್: ಬಿಜೆಪಿ ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ತನ್ನ ಎಲೆ ಬೇರುಗಳನ್ನು ವ್ಯಾಪಕವಾಗಿ ವಿಸ್ತರಿಸಲು ಕಳೆದ ಕೆಲ ಸಮಯದಿಂದ ಕಠಿಣವಾಗಿ ಶ್ರಮಿಸುತ್ತಿದ್ದು, ಅವರ ಶ್ರಮಕ್ಕೆ ಫಲ ಸಿಕ್ಕುವ ಸಮಯ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೂ ನಂಬರ್ 1 ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು 2021 ರ ಬಂಗಾಳ ಚುನಾವಣೆಯ ಪ್ರಚಾರದಲ್ಲಿ ತೃಣಮೂಲ ಮುಖ್ಯಸ್ಥೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ

ಬಂಗಾಳದಲ್ಲಿ ಬಿಜೆಪಿ ನಂಬರ್ ಒನ್/ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿಕೆ Read More »

ಅರುಣಾಚಲ ಪ್ರದೇಶ ಎಂದೆಂದಿಗೂ ನಮ್ಮದೇ/ ಚೀನಾಕ್ಕೆ ತಿರುಗೇಟು ನೀಡಿದ ಮೋದಿ

ಸಮಗ್ರ ನ್ಯೂಸ್: ಅರುಣಾಚಲ ಪ್ರದೇಶವು ಹಿಂದೆಯೂ ಭಾರತದ್ದಾಗಿತ್ತು. ಈಗಲೂ ಭಾರತದ್ದಾಗಿದೆ ಹಾಗೂ ಮುಂದೆಯೂ ಭಾರತದ್ದೇ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಆಗಿ ಚೀನಾಕ್ಕೆ ತಿರುಗೇಟು ನೀಡಿದ್ದಾರೆ. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೇಂದ್ರದ ಯೋಜನೆಗಳು ಕ್ಷಿಪ್ರವಾಗಿ ಅರುಣಾಚಲ ಪ್ರದೇಶವನ್ನು ತಲುಪುತ್ತಿವೆ. ಇದರೊಂದಿಗೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲಾಗುತ್ತಿದೆ. ವಿಕಸಿತ ಭಾರತ, ವಿಕಸಿತ ಈಶಾನ್ಯ ಎಂಬ ಯೋಜನೆ ಅನ್ವಯ ಕಳೆದ ತಿಂಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 55 ಸಾವಿರ ಕೋಟಿ

ಅರುಣಾಚಲ ಪ್ರದೇಶ ಎಂದೆಂದಿಗೂ ನಮ್ಮದೇ/ ಚೀನಾಕ್ಕೆ ತಿರುಗೇಟು ನೀಡಿದ ಮೋದಿ Read More »

ಯುಗಾದಿಯ ಸಂಭ್ರಮ/ ಕನ್ನಡದಲ್ಲಿ ಶುಭ ಹಾರೈಸಿದ ಮೋದಿ

ಸಮಗ್ರ ನ್ಯೂಸ್: ದೇಶಾದ್ಯಂತ ಹಿಂದೂಗಳು ಸಂಭ್ರಮದಿಂದ ಯುಗಾದಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲಿಯೇ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ. ಎಲ್ಲರಿಗೂ ಅಪರಿಮಿತ ಸಂತೋಷ ಹಾಗೂ ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲಿಯೂ ನಿಮಗೆ ಸಂತೋಷವನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ.

ಯುಗಾದಿಯ ಸಂಭ್ರಮ/ ಕನ್ನಡದಲ್ಲಿ ಶುಭ ಹಾರೈಸಿದ ಮೋದಿ Read More »

“ಜೀವನದ ಪಯಣದಲ್ಲಿ ಹೊಸ ವರುಷ ತರಲಿ ಹರುಷ”

ಸಮಗ್ರ ವಿಶೇಷ: ಯುಗಾದಿ ಚೈತ್ರಮಾಸದ ಮೊದಲ ದಿನ. ಇಂದು ಏಪ್ರಿಲ್ 9. ಈ ದಿನ ಹೊಸ ವರ್ಷದ ಮೊದಲ‌ ದಿನ. ಹೊಸ ವರ್ಷ, ಹೊಸತನ, ಹೊಸ‌ ವರುಷದ ಆರಂಭ… ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸುತ್ತಾರೆ. ಭಾರತದ ಅನೇಕ ಕಡೆಗಳಲ್ಲಿ ಯುಗಾದಿಯನ್ನು ಆಚರಿಸುತ್ತಾರೆ..‌ಆದರೆ ನಮ್ಮ‌ ತುಳುನಾಡಿನಲ್ಲಿ ಬಿಸ್ಸು(ವಿಷು) ವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಕೃಷಿ ಮತ್ತು ಪ್ರಕೃತಿ ಯುಗಾದಿಯೊಂದಿಗೆ ಮಧುರ ಸಂಬಂಧವನ್ನು ಬೆಳೆಸಿಕೊಂಡಿವೆ. ಪ್ರಕೃತಿಯಲ್ಲಿ ಪರಿವರ್ತನೆಯ ಕಾಲ. ಮರಗಳು ಚಿಗುರುತ್ತವೆ. ಹೂ ಹಾಗೂ ಹಣ್ಣುಗಳು ಅರಳುವ ಪಕ್ವಕಾಲ.

“ಜೀವನದ ಪಯಣದಲ್ಲಿ ಹೊಸ ವರುಷ ತರಲಿ ಹರುಷ” Read More »

ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ?

ಸಮಗ್ರ ನ್ಯೂಸ್: ಹಿಂದೂಗಳಿಗೆ ನೂತನ ಸಂವತ್ಸರದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ. ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಶ್ರೇಯಸ್ಕರ. ಈ ಹೊಸ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಲಾಭ? ತಿಳಿಯೋಣ ಬನ್ನಿ… ಮೇಷ ರಾಶಿ: ಉದ್ಯೋಗದಲ್ಲಿ ಮಿಶ್ರಫಲ, ಕೆಲಸದಲ್ಲಿ

ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ? Read More »

ಪಾಕ್‍ನಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ/ ಯಾವುದೇ ಕಾರಣಕ್ಕೂ ಹೋಗಲ್ಲ ಎಂದ ಭಾರತ

ಸಮಗ್ರ ನ್ಯೂಸ್: 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕುರಿತು ಭಾರತದ ನಿಲುವು ದೃಢವಾಗಿದ್ದು, ಕ್ರಿಕೆಟ್ ಮತ್ತು ಭಯೋತ್ಪಾದನೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಬಾರಿ ಅಲ್ಲಿಗೆ ಹೋಗುವುದಿಲ್ಲ ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ. ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬುದಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಹೇಳುತ್ತಿದೆ. ಭಾರತವು ಪಾಕಿಸ್ತಾನದಲ್ಲಿ

ಪಾಕ್‍ನಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ/ ಯಾವುದೇ ಕಾರಣಕ್ಕೂ ಹೋಗಲ್ಲ ಎಂದ ಭಾರತ Read More »

ರೈಲ್ವೇಯಲ್ಲಿ ಭಾರೀ ಸಂಖ್ಯೆಯ ಉದ್ಯೋಗಗಳು ಖಾಲಿ ಇವೆ, ಬೇಗ ಅರ್ಜಿ ಸಾಲ್ಲಿಸಿ

ಸಮಗ್ರ ನ್ಯೂಸ್: ಇತ್ತೀಚಿನ ನೇಮಕಾತಿಯಲ್ಲಿ, ರಾಯ್‌ಪುರ ವಿಭಾಗದಡಿ ಡಿಆರ್‌ಎಂ ಕಚೇರಿಯಲ್ಲಿ 844 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಮತ್ತು ರಾಯ್‌ಪುರದ ವ್ಯಾಗನ್ ರಿಪೇರಿ ಅಂಗಡಿಯಲ್ಲಿ 269 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ವ್ಯಾಗನ್ ರಿಪೇರಿಯಲ್ಲಿ ಫಿಟ್ಟರ್-110, ವೆಲ್ಡರ್- 110, ಮೆಷಿನಿಸ್ಟ್- 15, ಟರ್ನರ್- 14, ಎಲೆಕ್ಟ್ರಿಷಿಯನ್- 14, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮರ್ ಸಹಾಯಕ- 4, ಸ್ಟೆನೋಗ್ರಾಫರ್ (ಇಂಗ್ಲಿಷ್)- 1, ಸ್ಟೆನೋಗ್ರಾಫರ್ (ಹಿಂದಿ)- 1 ಹುದ್ದೆ ಭರ್ತಿಯಾಗಲಿದೆ. ಕೊನೆಯ ದಿನಾಂಕ 19 ಏಪ್ರಿಲ್ DRM ಕಚೇರಿ ಖಾಲಿ ಹುದ್ದೆಗಳು: ವೆಲ್ಡರ್

ರೈಲ್ವೇಯಲ್ಲಿ ಭಾರೀ ಸಂಖ್ಯೆಯ ಉದ್ಯೋಗಗಳು ಖಾಲಿ ಇವೆ, ಬೇಗ ಅರ್ಜಿ ಸಾಲ್ಲಿಸಿ Read More »