April 2024

ನಂಜನಗೂಡು : ಹಾಲು ಉತ್ಪಾದಕರಿಗೆ ಹಣ ಜಮೆ ಮಾಡುವಂತೆ ಆಗ್ರಹ

ಸಮಗ್ರ ನ್ಯೂಸ್ : ಹಾಲು ಉತ್ಪಾದಕರಿಗೆ ಕೂಡಲೇ ಹಣವನ್ನು ಜಮೆ ಮಾಡುವಂತೆ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಂಪಾಪುರ ಗ್ರಾಮದ ಹಾಲು ಉತ್ಪಾದಕರು ಒತ್ತಾಯವನ್ನು ಮಾಡಿದ್ದಾರೆ. ನಂಜನಗೂಡು ನಗರದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ಇಂದು ಹಂಪಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಾಲು ಉತ್ಪಾದಕರಿಗೆ ಹಣ ಜಮೆಯಾಗಿಲ್ಲ. ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನವನ್ನು ಸರಿಯಾಗಿ ನೀಡುತ್ತಿಲ್ಲ. ಮಹಿಳಾ ಸಹಕಾರ ಸಂಘ ಆಗಿರುವುದರಿಂದ ಮಹಿಳಾ ಕಾರ್ಯದರ್ಶಿ ಕಾರ್ಯನಿರ್ವಹಿಸಬೇಕು. […]

ನಂಜನಗೂಡು : ಹಾಲು ಉತ್ಪಾದಕರಿಗೆ ಹಣ ಜಮೆ ಮಾಡುವಂತೆ ಆಗ್ರಹ Read More »

ಬಿಜಾಪುರ : ಐಇಡಿ ಸ್ಫೋಟಗೊಂಡು ಇಬ್ಬರು ವಿಶೇಷ ಕಾರ್ಯ ಪಡೆಯ ಸಿಬ್ಬಂದಿಗೆ ಗಾಯ

ಸಮಗ್ರ ನ್ಯೂಸ್‌ : ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿರುವ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಇಟ್ವಾರ್ ಗ್ರಾಮದಲ್ಲಿ ಇಂದು ನಸುಕಿನ ಜಾವ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಭದ್ರತಾ ಕಾರ್ಯಾಚರಣೆ ಸಂಬಂಧ ಸಿಬ್ಬಂದಿಯು ಆ ಸ್ಥಳಕ್ಕೆ ತೆರಳಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಶಿವಲಾಲ್ ಮಾಂಡವಿ ಮತ್ತು ಮಿಥ್ಲೇಶ್ ಮಾರ್ಕಮ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಶೋಧ

ಬಿಜಾಪುರ : ಐಇಡಿ ಸ್ಫೋಟಗೊಂಡು ಇಬ್ಬರು ವಿಶೇಷ ಕಾರ್ಯ ಪಡೆಯ ಸಿಬ್ಬಂದಿಗೆ ಗಾಯ Read More »

ಬೆಕ್ಕನ್ನು ರಕ್ಷಿಸಲು ಪಾಳು ಬಾವಿಗೆ ಇಳಿದ ಐವರು‌ ದಾರುಣ ಸಾವು

ಸಮಗ್ರ ನ್ಯೂಸ್: ಪಾಳು ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ. ಪಾಳು ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗಿದೆ. ಈ ಬಾವಿಗೆ ಬೆಕ್ಕು ಬಿದ್ದಿತ್ತು. ಬೆಕ್ಕನ್ನು ರಕ್ಷಿಸಲು ಒಬ್ಬರ ಬಳಿಕ ಒಬ್ಬರು ಬಾವಿಗೆ ಹಾರಿದ್ದಾರೆ.ಹೀಗೆ ಹಾರಿದವರು ಬಾವಿಯಲ್ಲಿ ಮೃತಪಟ್ಟಿದ್ದಾರೆ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಹಾರಿದ್ದ ಓರ್ವನನ್ನು ಪೊಲಿಸರು ರಕ್ಷಿಸಿದ್ದಾರೆ. ಒಬ್ಬರ ಬಳಿಕ ಒಬ್ಬರು ಒಟ್ಟು 6 ಜನ ಬಾವಿಗೆ ಹಾರಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದಾರೆ.

ಬೆಕ್ಕನ್ನು ರಕ್ಷಿಸಲು ಪಾಳು ಬಾವಿಗೆ ಇಳಿದ ಐವರು‌ ದಾರುಣ ಸಾವು Read More »

2 PUC Result ನೋಡುವಾಗ ಎರರ್ ಬಂದ್ರೆ ಹೀಗೆ ಮಾಡಿ, ಟೆನ್ಷನ್ ಆಗ್ಬೇಡಿ

Karnataka Second PUC Results 2024: ಬೆಂಗಳೂರು: ಕಳೆದ ಮಾರ್ಚ್‌ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು, ವಿದ್ಯಾರ್ಥಿಗಳ ಎದೆ ಈಗಿಂದಲೇ ಲಬ್‌ಡಬ್‌ ಹೊಡೆಯಲು ಆರಂಭಿಸಿದೆ. ಸಾಮಾನ್ಯವಾಗಿ ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷೆಯ ಫಲಿತಾಂಶ ಚೆಕ್ ಮಾಡೋವಾಗ ಅನೇಕರು ಎಡವುತ್ತಾರೆ. ಎಷ್ಟೇ ಬಾರಿ ರಿಸಲ್ಟ್ ಚೆಕ್ ಮಾಡಿದರೂ ಎರರ್‌ ಬಂದು ಅತ್ತ

2 PUC Result ನೋಡುವಾಗ ಎರರ್ ಬಂದ್ರೆ ಹೀಗೆ ಮಾಡಿ, ಟೆನ್ಷನ್ ಆಗ್ಬೇಡಿ Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಶೇ.81.15 ರಷ್ಟು ಮಂದಿ ಉತ್ತೀರ್ಣ| ದ.ಕ ಪ್ರಥಮ, ಉಡುಪಿ‌ ದ್ವಿತೀಯ

ಸಮಗ್ರ ನ್ಯೂಸ್: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. 11 ಗಂಟೆಗೆ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. 2024 ರ ದ್ವಿತೀಯ ಪಿಯು ಪರೀಕ್ಷೆಗೆ 3.3

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಶೇ.81.15 ರಷ್ಟು ಮಂದಿ ಉತ್ತೀರ್ಣ| ದ.ಕ ಪ್ರಥಮ, ಉಡುಪಿ‌ ದ್ವಿತೀಯ Read More »

ಈದ್ ಉಲ್ ಫಿತರ್ ಹಿನ್ನಲೆ| ದ.ಕ ಜಿಲ್ಲೆಯಲ್ಲಿ ಎ.10ಕ್ಕೆ ಸಾರ್ವತ್ರಿಕ ರಜೆ ಘೋಷಣೆ

ಸಮಗ್ರ ನ್ಯೂಸ್: ಈದುಲ್ ಫಿತ್‌ರ್ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಏ.10) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಏ.11ರಂದು ಇದ್ದ ಸಾರ್ವತ್ರಿಕ ರಜೆಯನ್ನು ಏ.10ರಂದು ನೀಡಿ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕರ್ನಾಟಕ ಸರಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ: 11-04-2024 ರಂದು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿತ್ತು. ಏ. 9 ರಂದು ಚಂದ್ರ ದರ್ಶನವಾಗಿರುವುದರಿಂದ ಎ.11ರ ಬದಲಾಗಿ ದಿನಾಂಕ: ಏ.10 ಬುಧವಾರರಂದು ರಜೆ ಘೋಷಿಸಲು

ಈದ್ ಉಲ್ ಫಿತರ್ ಹಿನ್ನಲೆ| ದ.ಕ ಜಿಲ್ಲೆಯಲ್ಲಿ ಎ.10ಕ್ಕೆ ಸಾರ್ವತ್ರಿಕ ರಜೆ ಘೋಷಣೆ Read More »

ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷಿಗಳು ಗ್ರಹಗತಿಗಳ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ಇದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯುವ ಸಂಪ್ರದಾಯ ಇದೆ. ಆದರೆ ಈ ಬಾರಿಯ ಲೋಕಸಭೆ ಅಖಾಡದಲ್ಲಿ ಏನಾಗಲಿದೆ ಎಂಬುದನ್ನು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತನ್ನಲ್ಲಿ ಅಡಕವಾದ ಡೇಟಾಗಳ ಮೂಲಕ ಭವಿಷ್ಯ ನುಡಿಯುತ್ತಿದೆ. ಈ ಹಿಂದೆ ನಡೆದ ಬೆಳವಣಿಗೆ ಹಾಗೂ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಡೇಟಾ ಪರಿಷ್ಕರಿಸಿ ಎಐ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿಯುತ್ತಿದೆ. ಇದಲ್ಲದೆ, ಚುನಾವಣೆಯಲ್ಲಿ

ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ Read More »

ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

ಸಮಗ್ರ ನ್ಯೂಸ್‌ : ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.ಸೂಪರ್ ಸ್ಟಾರ್ ಆಗಿ ಮಿಂಚಲು ಮಲೆನಾಡಿನ ಬೆಡಗಿ ದಿವ್ಯಾ ಸಜ್ಜಾಗಿದ್ದು, ಹೊಸ ಪ್ರೋಮೋ ಮೂಲಕ ನಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ನಿನಗಾಗಿ’ ಎಂಬ ಸೀರಿಯಲ್ ಮೂಲಕ ಮತ್ತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿವ್ಯಾ ಉರುಡುಗ ಅವರು ರಚನಾ ಪಾತ್ರದಲ್ಲಿ ನಟಿಸಲಿದ್ದಾರೆ. ಸ್ಟಾರ್ ಆಗಿ ಮಿಂಚುತ್ತಿರುವ ಸಿನಿಮಾ ನಾಯಕಿಯ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ಸಿನಿಮಾ ಸ್ಟಾರ್ ಆಗಿರುವ ರಚನಾ ಬಾಳಿನ

ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ Read More »

ನವದೆಹಲಿ: ಅಭ್ಯರ್ಥಿಯ ಆಸ್ತಿಯ ವಿವರ ತಿಳಿಯುವ ಹಕ್ಕು ಮತದಾರನಿಗೆ ಇಲ್ಲ;ಸುಪ್ರೀಂ

ಸಮಗ್ರ ನ್ಯೂಸ್‌ : ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯನ್ನು ತಿಳಿಯುವ ಹಕ್ಕು ಮತದಾರನಿಗೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧ ಪಡದ ಸಂಗತಿಯಲ್ಲಿ ಅಭ್ಯರ್ಥಿ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಇರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಅರುಣಾಚಲಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕಾರಿಖೋಕ ಕ್ರಿ ಅವರ ಶಾಸಕ ಸ್ಥಾನವನ್ನು ಕೋರ್ಟ್ ಎತ್ತಿಹಿಡಿದಿದೆ. ಸರಿಯಾಗಿ ಆಸ್ತಿ ಘೋಷಣೆ ಮಾಡಿಲ್ಲವೆಂದು ಕಾರಿಖೋ ಕ್ರಿ ಅವರ ಶಾಸಕ ಸ್ಥಾನವನ್ನು ಅಸಿಂಧು

ನವದೆಹಲಿ: ಅಭ್ಯರ್ಥಿಯ ಆಸ್ತಿಯ ವಿವರ ತಿಳಿಯುವ ಹಕ್ಕು ಮತದಾರನಿಗೆ ಇಲ್ಲ;ಸುಪ್ರೀಂ Read More »

ಉತ್ತರಾಖಂಡ: ವಾಹನ 150 ಅಡಿ ಆಳದ ಕಣಿವೆಗೆ ಬಿದ್ದು 8 ಜನ ಸಾವು

ಸಮಗ್ರ ನ್ಯೂಸ್‌ : ವಾಹನವೊಂದು 150 ಅಡಿ ಆಳದ ಕಣಿವೆಗೆ ಬಿದ್ದು ಏಳು ನೇಪಾಳಿ ಪ್ರಜೆಗಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ಬೆತಲ್ಘಾಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ರಾಜ್ಯ ವಿಪತ್ತು ನಿರ್ವಹಣ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಮೂವರು ಗಾಯಳುಗಳನ್ನು ರಕ್ಷಣೆ ಮಾಡಿ, ಎಂಟು ಮೃತದೇಹಗಳನ್ನು ಹೊರತೆಗೆದಿದೆ. ಗಾಯಾಳುಗಳನ್ನು

ಉತ್ತರಾಖಂಡ: ವಾಹನ 150 ಅಡಿ ಆಳದ ಕಣಿವೆಗೆ ಬಿದ್ದು 8 ಜನ ಸಾವು Read More »