April 2024

ಚಾಮರಾಜನಗರದಲ್ಲಿ ಇವಿಎಂ ಧ್ವಂಸ ಪ್ರಕರಣ: 33 ಮಂದಿ ಬಂಧನ

ಸಮಗ್ರ ನ್ಯೂಸ್: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಚುನಾವಣೆ ದಿನ ಇವಿಎಂ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್​​ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧ ಈವರೆಗೂ 33 ಮಂದಿಯನ್ನು ಬಂಧಿಸಿದ್ದೇವೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ, ಇಂಡಿಗನತ್ತ ಗ್ರಾಮದಲ್ಲಿ ಒಂದು KSRP ತುಕಡಿ, ಡಿಎಆರ್ ತುಕಡಿ ನಿಯೋಜನೆ ಮಾಡುವ ಮೂಲಕ ಪೊಲೀಸ್ ಬಿಗಿ ಬಂದೋಬಸ್ತ್​ ಒದಗಿಸಲಾಗಿದೆ ಎಂದು […]

ಚಾಮರಾಜನಗರದಲ್ಲಿ ಇವಿಎಂ ಧ್ವಂಸ ಪ್ರಕರಣ: 33 ಮಂದಿ ಬಂಧನ Read More »

ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯಿಂದ ಅಶಕ್ತ ಕುಟುಂಬಗಳಿಗೆ ಟೇಬಲ್ ಫ್ಯಾನ್ ಕೊಡುಗೆ

ಸಮಗ್ರ ನ್ಯೂಸ್: ಬಿಸಿಲಿನ ಝಳ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ, ದಿನಕೂಲಿ ನಡೆಸಿ ಜೀವನ ಸಾಗಿಸುವ ಮನೆಗಳಲ್ಲಿನ ಅಶಕ್ತರು ಮತ್ತು ಅನಾರೋಗ್ಯಗಳಿಂದ ಬಳಲುತ್ತಿರುವ, ಕನಿಷ್ಠ ಫ್ಯಾನ್ ಹೊಂದಿರದ ಕುಟುಂಬಗಳನ್ನು ಗಮನಿಸಿದ ಬಾಳುಗೋಡು ಗ್ರಾಮದ ಕಾಂಗ್ರೆಸ್ ಸಮಿತಿಯ ಸದಸ್ಯರು ಕಡುಬಡತನದಲ್ಲಿ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ, ರೇಷನ್ ಕಾರ್ಡ್ ತಿದ್ದುಪಡಿಯಾಗದೇ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಯಿಂದ ವಂಚಿತರಾದ ನಾಲ್ಕು ಮನೆಗಳನ್ನು ಗುರುತಿಸಿ ಅವರ ಮನೆಗಳಿಗೆ ಮಾನವೀಯ ನೆಲೆಯಲ್ಲಿ ಟೇಬಲ್ ಫ್ಯಾನ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಾಳುಗೋಡು

ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯಿಂದ ಅಶಕ್ತ ಕುಟುಂಬಗಳಿಗೆ ಟೇಬಲ್ ಫ್ಯಾನ್ ಕೊಡುಗೆ Read More »

ಬೆಳಗಾವಿ:ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೇ ಗೆಲುವು ಖಚಿತ|ರಾಜ್ಯಸಭಾ‌ ಸದಸ್ಯ ಈರಣ್ಣಾ ಕಡಾಡಿ

ಸಮಗ್ರ ನ್ಯೂಸ್:ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ ಇದರಿಂದ ಇದರಿಂದ ಲೋಕಾಸಭಾ ಚುಣಾವಣೆಯಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಅವರು ಕಾಗವಾಡ ಮತಕ್ಷೇತ್ರದ ಗುಂಡೆವಾಡಿ ಮತ್ತು ಮದಭಾವಿ ಗ್ರಾಮದಲ್ಲಿ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೋಲ್ಲೇ ಪ್ರಚಾರ ಸಭೆಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು ದೇಶಕ್ಕೆ ಮೋದಿ ಚಿಕ್ಕೋಡಿ ಜೋಲ್ಲೆಯ ಅವಶ್ಯಕತೆ ತುಂಬಾ ಇದೆ ಆದರಿಂದ ಎಲ್ಲರೂ ಸಹ‌ ಬಿಜೆಪಿಗೆ ಮತ

ಬೆಳಗಾವಿ:ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೇ ಗೆಲುವು ಖಚಿತ|ರಾಜ್ಯಸಭಾ‌ ಸದಸ್ಯ ಈರಣ್ಣಾ ಕಡಾಡಿ Read More »

ಅಶ್ಲೀಲ ವಿಡಿಯೋ ಪ್ರಕರಣ| ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸಮಗ್ರ ನ್ಯೂಸ್: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜಾತ್ಯತೀತ ಜನತಾದಳ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿರುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆದೇಶಿಸಿದ್ದಾರೆ. ಪ್ರಜ್ವಲ್ ರೇವಣ್ಣ ಲೈಂಗಿಕ ‌ದೌರ್ಜನ್ಯ‌ ನಡೆಸಿ ಹೆಣ್ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಈ ಕುರಿತಂತೆ ಸಂತ್ರಸ್ಥೆಯೋರ್ವರು ದೂರು ದಾಖಲಿಸಿದ್ದಾರೆ.‌ ಸದ್ಯ ತನಿಖೆಗೆ ಎಸ್ಐಟಿ‌ ರಚನೆ ಮಾಡಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ‌ ಪಡೆದುಕೊಂಡಿದೆ.

ಅಶ್ಲೀಲ ವಿಡಿಯೋ ಪ್ರಕರಣ| ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ Read More »

ವಂದೇ ಭಾರತ್ ಮೆಟ್ರೋ/ ಜುಲೈನಲ್ಲಿ ಪ್ರಾಯೋಗಿಕ ಸಂಚಾರ

ಸಮಗ್ರ ನ್ಯೂಸ್: ಭಾರತೀಯ ರೈಲ್ವೆ ಇಲಾಖೆಯು ಜುಲೈನಲ್ಲಿ ಕಡಿಮೆ ಅಂತರದ ವಂದೇ ಮೆಟ್ರೋ ರೈಲು ಮತ್ತು ಮುಂದಿನ ತಿಂಗಳು ವಂದೇ ಭಾರತ್‍ನ ಸ್ಲೀಪರ್ ಆವೃತ್ತಿಯ ಗಳ ಪ್ರಾಯೋಗಿಕ ಸಂಚಾರ ಪ್ರಾರಂಭಿಸಲಿದೆ. ಮೊದಲ ಹಂತದಲ್ಲಿ ವಂದೇ ಭಾರತ್ ಮೆಟ್ರೋ ರೈಲು ದೆಹಲಿಯಿಂದ ಸಂಚಾರ ಕೈಗೊಳ್ಳುವ ಸಾಧ್ಯತೆ ಇದೆ. ವಂದೇ ಮೆಟ್ರೋ ರೈಲುಗಳು 100-250 ಕಿ.ಮೀ. ಮಾರ್ಗಗಳಲ್ಲಿ ಸಂಚರಿಸಿದರೆ, ವಂದೇ ಭಾರತ್ ಸ್ಲೀಪರ್ ರೈಲುಗಳು 1,000 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ನಿಯೋಜಿಸಲ್ಪಡುತ್ತವೆ. ವಂದೇ ಮೆಟ್ರೋ ರೈಲುಗಳು ಸುಮಾರು 124 ನಗರಗಳನ್ನು

ವಂದೇ ಭಾರತ್ ಮೆಟ್ರೋ/ ಜುಲೈನಲ್ಲಿ ಪ್ರಾಯೋಗಿಕ ಸಂಚಾರ Read More »

ಆಪ್ ಜೊತೆ ಮೈತ್ರಿ/ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೀನಾಮೆ

ಸಮಗ್ರ ನ್ಯೂಸ್: ಆಮ್ ಆದ್ಮಿ ಪಕ್ಷ (ಆಪ್)ದ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ನೀಡಿದ್ದಾರೆ. ದೆಹಲಿಯ ಕಾಂಗ್ರೆಸ್ ಘಟಕ ಆಪ್ ಜತೆಗಿನ ಮೈತ್ರಿಗೆ ವಿರುದ್ಧವಿತ್ತು. ಆದರೂ ಪಕ್ಷದ ಹೈಕಮಾಂಡ್ ಮೈತ್ರಿ ಮಾಡಿಕೊಂಡಿದೆ. ದೆಹಲಿ ಘಟಕದ ನಾಯಕರು ಸರ್ವಾನುಮತದಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಐಸಿಸಿ ದೆಹಲಿ ಉಸ್ತುವಾರಿಯಾಗಿರುವ ದೀಪಕ್ ಬಾಬ್ರಿಯಾ ಅವರು ತಿರಸ್ಕರಿಸುತ್ತಿದ್ದಾರೆ ಎಂದು ದೂರಿ ಲವ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ

ಆಪ್ ಜೊತೆ ಮೈತ್ರಿ/ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೀನಾಮೆ Read More »

ಹೆಚ್ಚಾದ ಬಿಸಿಲಿನ ತಾಪ| ನೀರಿಲ್ಲದೆ ಕೆರೆಯಲ್ಲಿ ರಾಶಿರಾಶಿ ಮೀನುಗಳ ಮಾರಣಹೋಮ

ಸಮಗ್ರ ನ್ಯೂಸ್: ರಾಜ್ಯದೆಲ್ಲೆಡೆ ಬರ ಛಾಯೆ ತಟ್ಟಿದೆ. ನೀರಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಜನರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಾಹಾಕಾರ ಅನುಭವಿಸುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲ ಬೇಗೆ ಮೀನುಗಳಿಗೂ ತಟ್ಟಿದೆ. ಕೆರೆಯ ನೀರು ಬತ್ತಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಮಳೆ ಕೊರತೆಯಿಂದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಕೆರೆಯ ಗುಂಡಿಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೀನುಗಳು ಜೀವ ಉಳಿಸಿಕೊಂಡಿದ್ದವು. ಅದರೆ ಇತ್ತೀಚೆಗೆ ಬಿಸಿಲಿಗೆ

ಹೆಚ್ಚಾದ ಬಿಸಿಲಿನ ತಾಪ| ನೀರಿಲ್ಲದೆ ಕೆರೆಯಲ್ಲಿ ರಾಶಿರಾಶಿ ಮೀನುಗಳ ಮಾರಣಹೋಮ Read More »

ಪುತ್ತೂರು: KFDC ರಬ್ಬರ್ ತೋಟಕ್ಕೆ ಬೆಂಕಿ

ಸಮಗ್ರ ನ್ಯೂಸ್: ಕೆ.ಎಫ್ .ಡಿ.ಸಿ ಯ ರಬ್ಬರ್ ತೋಟಕ್ಕೆ ಕರೆಂಟ್ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಪುತ್ತೂರು ತಾಲೂಕಿನ ಮೊಗಪ್ಪೆ ಗ್ರಾಮದ ನೆಟ್ಟಾರಿನಲ್ಲಿ ಎ.27 ರಂದು ನಡೆದಿದೆ. ಈ ಅವಘಡವೂ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸಂಭವಿಸಿದ್ದು. ರಬ್ಬರ್ ಗುಡ್ಡೆಯಿಂದ ಬರುವ ಹೊಗೆಯ ಮೂಲಕ ತಿಳಿದು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ತೋಟದಲ್ಲಿ ರಬ್ಬರ್ ಮರಗಳಿಗೆ ಹಾನಿ‌ ಉಂಟಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು: KFDC ರಬ್ಬರ್ ತೋಟಕ್ಕೆ ಬೆಂಕಿ Read More »

ಅಸ್ತಮಿಸಿದ ದಕ್ಷಿಣದ ದಲಿತ ಸೂರ್ಯ|ಸಂಸದ ವಿ.‌ ಶ್ರೀನಿವಾಸ ಪ್ರಸಾದ್ ಇನ್ನಿಲ್ಲ|

ಸಮಗ್ರ ನ್ಯೂಸ್: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಪ್ರಸಾದ್ ಅವರಿಗೆ ಚಿಕಿತ್ಸೆ

ಅಸ್ತಮಿಸಿದ ದಕ್ಷಿಣದ ದಲಿತ ಸೂರ್ಯ|ಸಂಸದ ವಿ.‌ ಶ್ರೀನಿವಾಸ ಪ್ರಸಾದ್ ಇನ್ನಿಲ್ಲ| Read More »

ವಿಜಯಪುರ : ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್

ಸಮಗ್ರ ನ್ಯೂಸ್‌ : ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಭೇಟಿಯಾದರು. ಈ ಸಂದರ್ಭ ಶಿವಪುತ್ರಪ್ಪ ಅವರಿಂದ ಶುಭಾಶಯ ಹಾಗೂ ಅನೇಕ ಸಲಹೆಗಳನ್ನು ಆಲಗೂರರು ಪಡೆದರು. ನಿಮ್ಮ ಹಾಗೂ ಪಕ್ಷದ ಪರ ಒಳ್ಳೆಯ ವಾತಾವರಣ ಇದೆ. ಜನ ಈ ಸಲ ಬದಲಾವಣೆ ಬಯಸಿದ್ದಾರೆ. ಅವರು ಬೇಸತ್ತಿದ್ದಾರೆ. ಜನಗಳಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿದೆ. ನೀವು ಖಂಡಿತ ವಿಜಯಶಾಲಿಯಾಗುತ್ತೀರಿ ಎಂದು ದೇಸಾಯಿಯವರು ಹರಸಿದ್ದಾರೆ.

ವಿಜಯಪುರ : ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್ Read More »