April 2024

ವಿಜಯಪುರ : ನೆಮ್ಮದಿಯ ಬದುಕು ಬೇಕೋ, ಬಿಜೆಪಿಯ ಸುಳ್ಳು ಬೇಕೋ ನಿರ್ಧರಿಸಿ ಎಂದ ಅಪ್ಪಾಜಿ ನಾಡಗೌಡ

ಸಮಗ್ರ ನ್ಯೂಸ್‌ : ಮೋದಿ ಸರಕಾರದ ಸುಳ್ಳು ಭರವಸೆ, ಭಾವನೆ ಕೆರಳಿಸುವ ವಿಚಾರ ಬೇಕೋ ಕಾಂಗ್ರೆಸ್ ಪಕ್ಷದ ಕಳಕಳಿ ಯೋಜನೆಗಳು ಬೇಕೊ ನೀವೇ ನಿರ್ಧರಿಸಿ ಎಂದು ಶಾಸಕ ಹಾಗೂ ಸಾಬೂನು-ಮಾರ್ಜಕ ನಿಗಮದ ಆಧ್ಯಕ್ಷರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ಮುದ್ದೇಬಿಹಾಳ ಕ್ಷೇತ್ರದ ಮಿಣಜಗಿಯಲ್ಲಿ ಮಂಗಳವಾರ ನಡೆದ ಜಿಪಂ ವ್ಯಾಪ್ತಿಯ ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರ ನುಡಿದಂತೆ ನಡೆದುಕೊಂಡು ಹೆಣ್ಣುಮಕ್ಕಳ, ಯುವಕರ ಮನಸ್ಸು ಗೆದ್ದಿದೆ. ಕೆಲವೇ ತಿಂಗಳಲ್ಲಿ ಹೇಳಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಮೋದಿಯವರು ನೀಡಿದ್ದ ಯಾವೊಂದು ಮಾತನ್ನೂ ಉಳಿಸಿಕೊಂಡಿಲ್ಲ. […]

ವಿಜಯಪುರ : ನೆಮ್ಮದಿಯ ಬದುಕು ಬೇಕೋ, ಬಿಜೆಪಿಯ ಸುಳ್ಳು ಬೇಕೋ ನಿರ್ಧರಿಸಿ ಎಂದ ಅಪ್ಪಾಜಿ ನಾಡಗೌಡ Read More »

ಎಸ್ ಡಿಎಂ ಶಾಲೆಯ ಕಾಮುಕ ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಸಮಗ್ರ ನ್ಯೂಸ್‌ : ದ. ಕ ಜಿಲ್ಲೆಯ ಉಜಿರೆಯ ಎಸ್ ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ ಐಆರ್ ಪ್ರಕರಣ ದಾಖಲಾಗಿದೆ. ಶಿಕ್ಷಕ ವಿರಾಜ್ ಜೈನ್ ಎಂಬಾತ ಅಪ್ರಾಪ್ತ ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ತೋರಿಸಿ, ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಕಳೆದ 2023 ಜೂನ್ ನಿಂದ ಈತನ ಈ ವರ್ತನೆಯಿಂದ ಶಾಲೆಗೆ ತೆರಳಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದರು. ಪೋಷಕರು ವಿಚಾರಿಸಿದಾಗ 6ನೇ ತರಗತಿಯ ಅಪ್ರಾಪ್ತ ಬಾಲಕಿ ಅಳಲು ತೋಡಿಕೊಂಡಿದ್ದಳು.

ಎಸ್ ಡಿಎಂ ಶಾಲೆಯ ಕಾಮುಕ ಶಿಕ್ಷಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ Read More »

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.14 ಸಂಜೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು. ಈ ಭೇಟಿಯ ಅವಕಾಶ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವವಾಗಿದ್ದು, ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರಕಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಆದರೆ ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ Read More »

ಲೋಕಸಭಾ ಚುನಾವಣೆ/ ದಾಖಲೆಯ ಮೊತ್ತದ ಹಣ ಮತ್ತು ವಸ್ತುಗಳು ವಶ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದಲ್ಲಿ ಬರೋಬ್ಬರಿ 4,650 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ದೇಶದ 75 ವರ್ಷದ ಚುನಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. ಈ ಒಟ್ಟು ಅಕ್ರಮದಲ್ಲಿ 2069 ಕೋಟಿ ರು. ಮೌಲ್ಯದ ಮಾದಕ ವಸ್ತುಗಳು (ಡ್ರಗ್ಸ್) ಕೂಡ ಸೇರಿವೆ ಎಂದು ಅದು ಹೇಳಿದೆ.

ಲೋಕಸಭಾ ಚುನಾವಣೆ/ ದಾಖಲೆಯ ಮೊತ್ತದ ಹಣ ಮತ್ತು ವಸ್ತುಗಳು ವಶ Read More »

ಮತದಾನ‌ ದಿನ ರಜೆ ಕಂಪನಿಗಳು ನೀಡದಿದ್ದರೆ ಕಠಿಣ ಕ್ರಮ – ಮನೋಜ್ ಕುಮಾ ಮೀನಾ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. ಏಪ್ರಿಲ್​ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡೂ ದಿನ ಸರ್ಕಾರ ರಜೆ ಘೋಷಣೆ ಮಾಡಿದೆ. ಈ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ

ಮತದಾನ‌ ದಿನ ರಜೆ ಕಂಪನಿಗಳು ನೀಡದಿದ್ದರೆ ಕಠಿಣ ಕ್ರಮ – ಮನೋಜ್ ಕುಮಾ ಮೀನಾ Read More »

ವೋಟರ್ ಸ್ಲಿಪ್‍ಗಳಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್/ ಚುನಾವಣಾ ಆಯೋಗದ ನೂತನ ಪ್ರಯೋಗ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಮನೆ ಮನೆಗೆ ಹಂಚುವ ವೋಟರ್ ಸ್ಲಿಪ್‍ಗಳಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆಯ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಮಾಡಿರುವ ಪ್ರಯೋಗ ಇದಾಗಿದ್ದು, ರಾಜ್ಯದ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸೌಲಭ್ಯ ಜಾರಿಯಾಗಿದೆ. ನಗರದ ನಿವಾಸಿಗಳು ಕ್ಯೂಆರ್ ಕೋಡ್ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ

ವೋಟರ್ ಸ್ಲಿಪ್‍ಗಳಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್/ ಚುನಾವಣಾ ಆಯೋಗದ ನೂತನ ಪ್ರಯೋಗ Read More »

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ| ಹೃದಯಾಘಾತದಿಂದ ಕಳಚಿದ ಸ್ಯಾಂಡಲ್ ವುಡ್ ಕೊಂಡಿ

ಸಮಗ್ರ ನ್ಯೂಸ್: ಕನ್ನಡ ಚಿತ್ರ ರಂಗದ ಹಿರಿಯ ನಟ ದ್ವಾರಕೀಶ್‌(81) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಹಲವು ಖ್ಯಾತ ನಟರೊಂದಿಗೆ ನಟಿಸಿರುವ ದ್ವಾರಕೀಶ್‌ ಅವರು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟ ದ್ವಾರಕೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿ ಮಲಗಿದ್ದ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ| ಹೃದಯಾಘಾತದಿಂದ ಕಳಚಿದ ಸ್ಯಾಂಡಲ್ ವುಡ್ ಕೊಂಡಿ Read More »

ಮೈತ್ರಿ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ಹೈಡ್ರಾಮಾ| ದೇವೇಗೌಡರ ವಿರುದ್ಧ ಧಿಕ್ಕಾರ ಘೋಷಣೆ

ಸಮಗ್ರ ನ್ಯೂಸ್: ನಿನ್ನೆ ತುಮಕೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಅವರಿದ್ದ ವೇದಿಕೆಗೆ ನುಗ್ಗಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕರ್ತೆಯರು, ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ತುಮಕೂರಿನ ಕುಂಚಿಟಿಗರ ಸಭಾಭವನದಲ್ಲಿ ನಡೆಯುತ್ತಿದ್ದ ಮೈತ್ರಿ ಸಮಾವೇಶದಲ್ಲಿ ಕಾರ್ಯಕರ್ತೆಯರ ಸೋಗಿನಲ್ಲಿ ಬಂದು ಸಭೆಯಲ್ಲಿ ಕೂತಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು, ಗ್ಯಾರಂಟಿಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ

ಮೈತ್ರಿ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ಹೈಡ್ರಾಮಾ| ದೇವೇಗೌಡರ ವಿರುದ್ಧ ಧಿಕ್ಕಾರ ಘೋಷಣೆ Read More »

ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಮಗು ಬಲಿ| ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಸಮಗ್ರ ನ್ಯೂಸ್: ಬೆಂಗಳೂರಿನ ಸುಲ್ತಾನ್ ಪಾಳ್ಯ ಅಪಾರ್ಟ್​​ಮೆಂಟ್​​ನ ಕೊಠಡಿಯೊಂದರಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಗಂಡು ಮಗು ಅನೂಪ್ ಬಲಿಯಾಗಿದೆ. ಸುಲ್ತಾನ್ ಪಾಳ್ಯ ಬಳಿಯಿರುವ ರಿಯಾನ್ ವುಡ್ ಅಪಾರ್ಟ್​ಮೆಂಟ್​​ನ ನಾಲ್ಕನೇ‌ ಮಹಡಿಯಲ್ಲಿರುವ ಮನೆಯೊಂದರಲ್ಲಿ ನೇಪಾಳ ಮೂಲದ ಪೂರಾನ್ ಖಂಡಕ್‌ ಹಾಗೂ ಇವರ ಪತ್ನಿ ಲಕ್ಷ್ಮೀ ವಾಸವಿದ್ದರು. ಘಟನೆ ನಡೆದ ಅಪಾರ್ಟ್​​ಮೆಂಟ್​​ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸಹ ಅಪಾರ್ಟ್​ಮೆಂಟ್​​ನಲ್ಲಿ ಹೌಸ್‌ ಕೀಪಿಂಗ್ ಆಗಿ ಕೆಲಸ‌ ಮಾಡುತ್ತಿದ್ದರು. ಇವರು ನಿತ್ಯ ಮಧ್ಯಾಹ್ನ ಮಗುವನ್ನ ಮಲಗಿಸಿ

ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಮಗು ಬಲಿ| ಮುಗಿಲು ಮುಟ್ಟಿದ ಪೋಷಕರ ಆಕ್ರಂದನ Read More »

ಪ್ರಚಾರದಲ್ಲಿ ಭಾಗಿಯಾದ ಮಹಿಳೆಯರಿಗೆ ಹಣ ಹಂಚಿದ ಕಾಂಗ್ರೆಸ್ ಮುಖಂಡರು

ಸಮಗ್ರ ನ್ಯೂಸ್: ಸಂಸತ್ ಸಮರದ ಅಖಾಡದಲ್ಲಿ ಈಗ ಕಾಂಚಾಣದ ಸದ್ದು ಜೋರಾಗಿದೆ. ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಸಚಿವರು, ಅಭ್ಯರ್ಥಿ, ಮುಖಂಡರು ರ್ಯಾಲಿ ನಡೆಸಿದರು ಈ ರ್ಯಾಲಿಯಲ್ಲಿ ಭಾಗಿಯಾದ ಮಹಿಳೆಯರಿಗೆ ಸ್ಥಳೀಯ ಮುಖಂಡನೊಬ್ಬ ಹಣ ಹಂಚುತ್ತಿದ್ದಾನೆ. ಆತನಿಂದ ಬಂಜಾರಾ ಸಮುದಾಯಕ್ಕೆ ಸೇರಿದ ಮಹಿಳೆಯರು ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಮುಖಂಡ ಎಲ್ಲ ಮಹಿಳೆಯರಿಗೆ ಮತ್ತು ಪುರುಷರಿಗೆ ಹಣ ಹಂಚಿರುವುದು ಬೆಳಕಿಗೆ ಬಂದಿದೆ. ಪ್ರಚಾರದ

ಪ್ರಚಾರದಲ್ಲಿ ಭಾಗಿಯಾದ ಮಹಿಳೆಯರಿಗೆ ಹಣ ಹಂಚಿದ ಕಾಂಗ್ರೆಸ್ ಮುಖಂಡರು Read More »