April 2024

ಹೈದರಾಬಾದ್: ಅಮ್ಮ ಬೀಡಿ ಕಾರ್ಮಿಕೆ: ಮಗ ಯುಪಿಎಸ್ಸಿಯಲ್ಲಿ 27ನೇ ರ್‍ಯಾಂಕ್

ಸಮಗ್ರ ನ್ಯೂಸ್ : ಯುಪಿಎಸ್ಸಿ ಸಿವಿಲ್ಸ್ ಅಂತಿಮ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ತೆಲುಗು ರಾಜ್ಯಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಈ ಪರೀಕ್ಷೆಗಳಲ್ಲಿ, ಬಡ ಕುಟುಂಬದ ಅನೇಕ ಜನರು ರ್ಯಾಂಕ್ ಪಡೆದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಬೀಡಿ ಕಾರ್ಮಿಕೆಯ ಮಗ ಸಾಯಿಕಿರಣ್ ಯುಪಿಎಸ್ಸಿಯಲ್ಲಿ 27ನೇ ರ್ಯಾಂಕ್ ಪಡೆಯುವ ಮೂಲಕ ಬಡತನವನ್ನು ಮೆಟ್ಟಿ ನಿಂತಿರುವ ಘಟನೆ ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದ ವೆಲಿಚಲ ಗ್ರಾಮದಲ್ಲಿ ನಡೆದಿದೆ. ಕಾಂತ ರಾವ್ ಮತ್ತು ಲಕ್ಷ್ಮಿ ದಂಪತಿ ಮಗ ಸಾಯಿಕಿರಣ್ ಮತ್ತು ಶ್ರವಂತಿ […]

ಹೈದರಾಬಾದ್: ಅಮ್ಮ ಬೀಡಿ ಕಾರ್ಮಿಕೆ: ಮಗ ಯುಪಿಎಸ್ಸಿಯಲ್ಲಿ 27ನೇ ರ್‍ಯಾಂಕ್ Read More »

ಯುಪಿಎಸ್ಸಿ ಫಲಿತಾಂಶ ಪ್ರಕಟ| ಕರ್ನಾಟಕದ ‌15ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್

ಸಮಗ್ರ ನ್ಯೂಸ್: 2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರೀಕ ಸೇವಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಕರ್ನಾಟಕದ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ 2023ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗವು 1016 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನಿಸಿತ್ತು, ಇದಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಅಂತಿಮವಾಗಿ ಆದಿತ್ಯಾ ಶ್ರೀವಾಸ್ತವ ಮೊದಲೇ ರ್ಯಾಂಕ್​ ಪಡೆದರೆ, ಅನಿಮೇಶ್​ ಪ್ರಧಾನ್​ ದ್ವಿತೀಯ ರ್ಯಾಂಕ್​, ದೋರೂರು ಅನನ್ಯ

ಯುಪಿಎಸ್ಸಿ ಫಲಿತಾಂಶ ಪ್ರಕಟ| ಕರ್ನಾಟಕದ ‌15ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್ Read More »

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ತಡಮಾಡದೆ ಅರ್ಜಿ ಹೀಗೆ ಸಲ್ಲಿಸಿ

ಸಮಗ್ರ ಉದ್ಯೋಗ: ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 48 ಇಂಡಿಯನ್ ಎಕನಾಮಿಕ್ ಸರ್ವೀಸ್/ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಎಕ್ಸಾಮಿನೇಶನ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹುದ್ದೆಯ ಮಾಹಿತಿ:ಇಂಡಿಯನ್ ಎಕನಾಮಿಕ್ ಸರ್ವೀಸ್ – 18ಇಂಡಿಯನ್ ಸ್ಟಾಟಿಸ್ಟಿಕಲ್

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ತಡಮಾಡದೆ ಅರ್ಜಿ ಹೀಗೆ ಸಲ್ಲಿಸಿ Read More »

Lokasabha election; ಬಲ್ಲವರ‌ ಜಿಲ್ಲೆಯಲ್ಲಿ ಬಿಲ್ಲವರೇ ನಿರ್ಣಾಯಕ| ಒಗ್ಗಟ್ಟು ಪ್ರದರ್ಶಿಸಿದರೆ ಒಡೆಯಲಿದೆ ಬಿಜೆಪಿ ಭದ್ರಕೋಟೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಮತಗಳೇ ನಿರ್ಣಾಯಕವಾಗಿದ್ದು, ಬಿಲ್ಲವ ವೋಟ್ ಛಿದ್ರವಾಗದಂತೆ ಮತಗಳನ್ನು ಭದ್ರಪಡಿಸಲು ಬಿಜೆಪಿ – – ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಇದೇ ಸ್ಟ್ರಾಟಜಿಯನ್ನು ಮುಂದುವರಿಸಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರಿಂದ ರೋಡ್ ಶೋನಲ್ಲಿ ನಾರಾಯಣ ಗುರುಗಳಿಗೆ ಗೌರವ ಸಹ ನೀಡಲಾಗಿದೆ. ಬಿಜೆಪಿಗೆ ಬಿಲ್ಲವ ಸಮಾಜದ ಪ್ರಭಾವಿ ನಾಯಕ ಪದ್ಮರಾಜ್ ಕಾಂಗ್ರೆಸ್ ನ

Lokasabha election; ಬಲ್ಲವರ‌ ಜಿಲ್ಲೆಯಲ್ಲಿ ಬಿಲ್ಲವರೇ ನಿರ್ಣಾಯಕ| ಒಗ್ಗಟ್ಟು ಪ್ರದರ್ಶಿಸಿದರೆ ಒಡೆಯಲಿದೆ ಬಿಜೆಪಿ ಭದ್ರಕೋಟೆ Read More »

ಪುತ್ತೂರು ಜಾತ್ರೆ ಹಿನ್ನಲೆ| ಮದ್ಯ ಮಾರಾಟ ನಿಷೇಧಿಸಿದ‌ ಡಿಸಿ

ಸಮಗ್ರ ನ್ಯೂಸ್: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 10 ರಿಂದ ಏಪ್ರಿಲ್ 20ರವರೆಗೆ ವರ್ಷಾವಧಿ ಜಾತ್ರೆಯೂ ನಡೆಯುತ್ತಿದ್ದು, ಜಾತ್ರೋತ್ಸವದ ಸಮಯದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇರುತ್ತದೆ. ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಅಹಿತಕರ ಘಟನೆಗಳಿಗೆ ಕಾರಣರಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ವೈನ್ ಶಾಪ್‍ಗಳನ್ನು ಏಪ್ರಿಲ್

ಪುತ್ತೂರು ಜಾತ್ರೆ ಹಿನ್ನಲೆ| ಮದ್ಯ ಮಾರಾಟ ನಿಷೇಧಿಸಿದ‌ ಡಿಸಿ Read More »

ಎಪ್ರಿಲ್ 20 ರಂದು ಕರುನಾಡಿಗೆ ನಮೋ| ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಚಾರ, ರ್ಯಾಲಿಗಳು ನಡೆಯುತ್ತಿದ್ದು, ಮೊನ್ನೆಯಷ್ಟೆ ಕರುನಾಡಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು. ಮೈಸೂರು ಮಂಗಳೂರಿನಲ್ಲಿ ಸಮಾವೇಶ ಕೈಗೊಂಡಿದರು. ಇದೀಗ ಮತ್ತೊಮ್ಮೆ ಕರುನಾಡಿಗೆ ನಮೋ ಎಂಟ್ರಿ ಕೊಡಲಿದ್ದಾರೆ. ಇದೇ ಶನಿವಾರ ಎಪ್ರಿಲ್ 20 ರಂದು ನಮೋ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮೋಡಿ ಮಾಡಲಿದ್ದಾರೆ. ಏಪ್ರಿಲ್‌ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ

ಎಪ್ರಿಲ್ 20 ರಂದು ಕರುನಾಡಿಗೆ ನಮೋ| ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ Read More »

Health Tips|ವಾರಕ್ಕೆ ಇಷ್ಟು ಸಲ ಮಾತ್ರ ತಲೆಗೆ ಸ್ನಾನ ಮಾಡಬೇಕಂತೆ!

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಜನರು ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ಹೇರ್ ವಾಶ್ ಅನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಲಾಗುತ್ತದೆ. ಹೆಚ್ಚು ಪ್ರಯಾಣ ಮಾಡುವವರು, ಧೂಳು, ಧೂಳು ಮತ್ತು ಕಲುಷಿತ ವಾತಾವರಣದಲ್ಲಿ ಕೆಲಸ ಮಾಡುವವರು ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ನೀವು ವಾರಕ್ಕೆ ಎಷ್ಟು ಬಾರಿ ಕೂದಲು ಸ್ನಾನ ಮಾಡಬೇಕು ಎಂದು ನೀವು ಕೇಳಿದರೆ, ನಿಮಗೆ ವಿವಿಧ ಉತ್ತರಗಳು ಸಿಗುತ್ತವೆ. ಸ್ನಾನ ಮಾಡುವಾಗ ಅನೇಕ ಜನರು ದಿನನಿತ್ಯದ ವೇಳಾಪಟ್ಟಿಯನ್ನು ಅನುಸರಿಸುತ್ತಾರೆ. ಹೇಗಾದರೂ, ಕೂದಲಿನ ಪ್ರಕಾರ ಮತ್ತು

Health Tips|ವಾರಕ್ಕೆ ಇಷ್ಟು ಸಲ ಮಾತ್ರ ತಲೆಗೆ ಸ್ನಾನ ಮಾಡಬೇಕಂತೆ! Read More »

ಸುಳ್ಯ: ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಮಗ್ರ ನ್ಯೂಸ್: ಕಾರೊಂದು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ಎ.17ರ ಮುಂಜಾನೆ ಸಂಭವಿಸಿದೆ. ಇಲ್ಲಿನ ಸರಕಾರಿ ಬಸ್ಸು ನಿಲ್ದಾಣದ ಬಳಿಯಲ್ಲಿ ಘಟನೆ ನಡೆದಿದ್ದು, ನಗರದ ಜಟ್ಟಿಪಳ್ಳ ಎಂಬಲ್ಲಿನ ಗೋಪಾಲ ಎಂಬುವರು ಮೃತಪಟ್ಟಿದ್ದಾಗಿ‌ ತಿಳಿದುಬಂದಿದೆ. ಅಪಘಾತಕ್ಕೆ ಕಾರಣವಾದ ಕಾರು ಕೇರಳ ಮೂಲದ್ದು‌ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ‌ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುಳ್ಯ: ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು Read More »

ಬಿಜೆಪಿಗೆ ಗುಡ್ ಬೈ ಹೇಳಿದ ಸಂಗಣ್ಣ ಕರಡಿ| ಇಂದು ಕಾಂಗ್ರೆಸ್‌ ಸೇರ್ಪಡೆ?

ಸಮಗ್ರ ನ್ಯೂಸ್: ಚುನಾವಣೆಗೆ ಇನ್ನೇನೂ ದಿನಗಣನೆ ಬಾಕಿ ಇದೇ ಇದೇ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ ಅವರು ಲೋಕಸಭಾ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಇಂದು (ಎ.17) ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಅವರ ಬದಲಿಗೆ ಡಾ‌. ಬಸವರಾಜ ಕ್ಯಾವಟೋರ್ ಅವರಿಗೆ ಟಿಕೆಟ್‌ ನೀಡಿದ್ದರಿಂದ ಅಸಮಾಧಾನ ಇತ್ತು. ಮಾಜಿ

ಬಿಜೆಪಿಗೆ ಗುಡ್ ಬೈ ಹೇಳಿದ ಸಂಗಣ್ಣ ಕರಡಿ| ಇಂದು ಕಾಂಗ್ರೆಸ್‌ ಸೇರ್ಪಡೆ? Read More »

ನವದೆಹಲಿ: ಸುರ್ಜೇವಾಲಾ ಬಿಜೆಪಿ ಸಂಸದೆ ವಿರುದ್ದ ಅವಹೇಳನಕಾರಿ ಹೇಳಿಕೆ: 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

ಸಮಗ್ರ ನ್ಯೂಸ್‌ : ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರನ್ನು 2 ದಿನಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧಿಸಲಾಗಿದೆ. ರಣದೀಪ್ ಸುರ್ಜೇವಾಲಾ ಅವರು ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಭಾರತೀಯ ಚುನಾವಣಾ ಆಯೋಗ ಮಂಗಳವಾರ ಈ ಕ್ರಮ ತೆಗೆದುಕೊಂಡಿದೆ. ಇಸಿಐ ಆದೇಶದ ಪ್ರಕಾರ, ಸುರ್ಜೇವಾಲಾ ಅವರು ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಸಾರ್ವಜನಿಕ ಸಭೆಗಳನ್ನು ನಡೆಸಲು ನಿಷೇಧ ಹೇರಲಾಗಿದೆ. ಭಾರತದ ಸಂವಿಧಾನದ 324

ನವದೆಹಲಿ: ಸುರ್ಜೇವಾಲಾ ಬಿಜೆಪಿ ಸಂಸದೆ ವಿರುದ್ದ ಅವಹೇಳನಕಾರಿ ಹೇಳಿಕೆ: 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ Read More »