April 2024

ಕಲಬುರಗಿ: ಕೊನೆಗೂ ಮೈತ್ರಿಕೂಟಕ್ಕೆ ಜೈ ಎಂದ ಶಾಸಕ ಕಂದಕೂರ

ಸಮಗ್ರ ನ್ಯೂಸ್‌ : ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪ ಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸ್ಪಷ್ಟ ಪಡಿಸಿದ್ದಾರೆ. ತಮ್ಮ ಗೃಹ ಕಚೇರಿಯಲ್ಲಿ ಕೈಗೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪೂರ ವಿಧಾನಸಭೆ ಅಭ್ಯರ್ಥಿ ರಾಜುಗೌಡ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದು, ಹಾಗೆ ನಮ್ಮ ರಾಜ್ಯ ಜೆಡಿಎಸ್ […]

ಕಲಬುರಗಿ: ಕೊನೆಗೂ ಮೈತ್ರಿಕೂಟಕ್ಕೆ ಜೈ ಎಂದ ಶಾಸಕ ಕಂದಕೂರ Read More »

ಕಲಬುರಗಿ: ಪರೀಕ್ಷಾ ಅಕ್ರಮ ಹಗರಣ ಆರೋಪಿ ಮನೆಗೆ ಡಾ.ಉಮೇಶ್ ಜಾಧವ್ ಭೇಟಿ

ಸಮಗ್ರ ನ್ಯೂಸ್‌ : ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆಸಿ ಜೈಲುಪಾಲಾಗಿರುವ ಆರ್‌ಡಿ ಪಾಟೀಲ್ ಮನೆಗೆ ಬುಧವಾರ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಪಿಎಸ್‌ಐ ಪರೀಕ್ಷೆ ವೇಳೆ ಅಕ್ರಮ ಮಾಡಲು ಯತ್ನಿಸಿ ಸಿಕ್ಕಿಬಿದ್ದು, ಜೈಲುಪಾಲಾಗಿರುವ ಆರ್‌ಡಿ ಪಾಟೀಲ್ ಮನೆಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಭೇಟಿ ನೀಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಘಜಲಪುರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಡಿ ಪಾಟೀಲ್ ಅನ್ನು

ಕಲಬುರಗಿ: ಪರೀಕ್ಷಾ ಅಕ್ರಮ ಹಗರಣ ಆರೋಪಿ ಮನೆಗೆ ಡಾ.ಉಮೇಶ್ ಜಾಧವ್ ಭೇಟಿ Read More »

ಬಿಜೆಪಿ ವಿರುದ್ಧವೇ ಗುಡುಗಿದ ಎಚ್.ಡಿ ದೇವೇಗೌಡ| ಕಾವೇರಿ ಹೋರಾಟ ಕುರಿತು ಅಸಮಾಧಾನ

ಸಮಗ್ರ ನ್ಯೂಸ್: ಮೈತ್ರಿ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಬಿಜೆಪಿ ವಿರುದ್ಧವೇ ಗುಡುಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಕಾವೇರಿ ಹೋರಾಟದ ದಿನಗಳನ್ನು ನೆನೆದ ದೇವೇಗೌಡರು, ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿದ ಘಟನೆ ಕೊರಟಗೆರೆಯಲ್ಲಿ ನಡೆದ ಮೈತ್ರಿ ಸಭೆಯಲ್ಲಿ ನಡೆದಿದೆ. ಕಾವೇರಿ ಹೋರಾಟಕ್ಕೆ ಬಿಜೆಪಿಯ 17 ಜನ ಸಂಸದರು ನನಗೆ ಬೆಂಬಲ ನೀಡಲಿಲ್ಲ. ಲೋಕಸಭೆಯಲ್ಲಿ ಒಬ್ಬ ದೇವೇಗೌಡ, 17 ಜನ ಬಿಜೆಪಿ ಸಂಸದರು ಇದ್ದರು. ಆದರೆ, ನನಗೆ ಬೆಂಬಲ ನೀಡಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಂದು ರಾಜ್ಯದ

ಬಿಜೆಪಿ ವಿರುದ್ಧವೇ ಗುಡುಗಿದ ಎಚ್.ಡಿ ದೇವೇಗೌಡ| ಕಾವೇರಿ ಹೋರಾಟ ಕುರಿತು ಅಸಮಾಧಾನ Read More »

ಚಾಮರಾಜನಗರ: ಸರ್ಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದ ಅಕ್ರಮವಾಗಿ ಗೋರಿ ನಿರ್ಮಾಣ ಮಾಡಿಲ್ಲ- ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟನೆ

ಸಮಗ್ರ ನ್ಯೂಸ್ : ಸರ್ಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಯಾವುದೇ ಗೋರಿಗಳನ್ನು ನಿರ್ಮಾಣ ಮಾಡಿಲ್ಲ ಎಂದು ಸೆಂಟ್ ಪೀಟರ್ಸ್ ಲೂಥರನ್ ಚರ್ಚ್‍ನ ಫಾದರ್ ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು. ಪಟ್ಟಣದ ಸೆಂಟ್ ಪೀಟರ್ಸ್ ಚರ್ಚ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿಜಯಪುರ ಸರ್ವೆ ನಂಬರ್ 102, 62, 61 ಮತ್ತು 105 ರ ಮಧ್ಯೆ ಇರುವ ಸರ್ಕಾರಿ ರಸ್ತೆ ಮತ್ತು ರಾಜ ಕಾಲುವೆಯಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು

ಚಾಮರಾಜನಗರ: ಸರ್ಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದ ಅಕ್ರಮವಾಗಿ ಗೋರಿ ನಿರ್ಮಾಣ ಮಾಡಿಲ್ಲ- ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟನೆ Read More »

ಪುತ್ತೂರು: ಬೈಕ್ ಗೆ ಡಿಕ್ಕಿ ಹೊಡೆದ ಜೀಪ್| ಬೈಕ್ ಸವಾರ ಸಾವು, ಮಕ್ಕಳು ಗಂಭೀರ

ಸಮಗ್ರ ನ್ಯೂಸ್: ಬೈಕ್‍ ಗೆ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ತಡ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ. ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಬಡಕ್ಕೋಡಿ ಕಡ್ಯ ನಿವಾಸಿ ಲೋಕೇಶ್(48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಲೋಕೇಶ್ ಅವರು

ಪುತ್ತೂರು: ಬೈಕ್ ಗೆ ಡಿಕ್ಕಿ ಹೊಡೆದ ಜೀಪ್| ಬೈಕ್ ಸವಾರ ಸಾವು, ಮಕ್ಕಳು ಗಂಭೀರ Read More »

ಲೋಕಸಭಾ ಚುನಾವಣೆ/ ನಾಳೆ ದೇಶದ 102 ಕ್ಷೇತ್ರಗಳಲ್ಲಿ ಮತದಾನ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದ್ದು, 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣಾ ಪ್ರಚಾರವು ಬುಧವಾರ ಮಧ್ಯಾಹ್ನ 3 ಗಂಟೆಗೆ ಈಶಾನ್ಯದಲ್ಲಿ ಮುಕ್ತಾಯಗೊಂಡಿತು. ಇತರ ಪ್ರದೇಶಗಳಲ್ಲಿ ಸಂಜೆ 6 ಗಂಟೆಗೆ ಮುಕ್ತಾಯವಾಯಿತು ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣೆ/ ನಾಳೆ ದೇಶದ 102 ಕ್ಷೇತ್ರಗಳಲ್ಲಿ ಮತದಾನ Read More »

ಚುನಾವಣಾ ಅಭ್ಯರ್ಥಿಗಳೀಗೆ ಪತ್ರ ಬರೆದ ಮೋದಿ/ ಅಣ್ಣಾಮಲೈಗೆ ಶ್ಲಾಘನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎನ್‍ಡಿಎ ಮೈತ್ರಿಕೂಟದ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ವೈಯಕ್ತಿಕ ಪತ್ರ ಬರೆದಿದ್ದು, ತಮ್ಮ ಕ್ಷೇತ್ರಗಳ ಮತದಾರರಿಗೆ ತಮ್ಮ ಸಂದೇಶವನ್ನು ತಲುಪಿಸುವಂತೆ ಒತ್ತಾಯಿಸಿದ್ದಾರೆ. ಕೊಯಮತ್ತೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಪ್ಪುಸ್ವಾಮಿ ಅಣ್ಣಾಮಲೈ ಅವರಿಗೆ ಬರೆದಿರುವ ಪತ್ರದಲ್ಲಿ, ಕೆಲಸ ತೊರೆದು ಸರ್ಕಾರಿ ಸೇವೆಗೆ ಸೇರುವ ಅಣ್ಣಾಮಲೈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ನಿಮ್ಮ ಪ್ರತಿಷ್ಠಿತ ಉದ್ಯೋಗವನ್ನು ತೊರೆದು ಜನರ ಸೇವೆಗೆ ನೇರವಾಗಿ ನಿಮ್ಮನ್ನು ತೊಡಗಿಸಿಕೊಳ್ಳುವ ನಿಮ್ಮ ನಿರ್ಧಾರಕ್ಕೆ ಅಭಿನಂದನೆಗಳು.

ಚುನಾವಣಾ ಅಭ್ಯರ್ಥಿಗಳೀಗೆ ಪತ್ರ ಬರೆದ ಮೋದಿ/ ಅಣ್ಣಾಮಲೈಗೆ ಶ್ಲಾಘನೆ Read More »

ಇಂದು ಮಂಡ್ಯದಲ್ಲಿ ನಟ ದರ್ಶನ್ ಪ್ರಚಾರ/ ಕಾಂಗ್ರೆಸ್ ಪರ ನಿಂತ ಚಾಲೆಂಜಿಂಗ್ ಸ್ಟಾರ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಭ್ಯರ್ಥಿ ಸ್ಟ್ರಾರ್ ಚಂದ್ರು ಪರ ನಟ ದರ್ಶನ್ ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬೆಳಗ್ಗೆ 9:30ಕ್ಕೆ ಮಂಡ್ಯ ಜಿಲ್ಲೆ ಹಲಗೂರು ಪಟ್ಟಣದಿಂದ ಮತಯಾಚನೆಗೆ ಪ್ರಚಾರ ಆರಂಭಿಸಲಿದ್ದಾರೆ. ಈ ಹಿಂದೆ ದರ್ಶನ್ ಅವರು ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಸುಮಲತಾ ಅಂಬರೀಶ್ ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಎನ್‍ಡಿಎ ಅಭ್ಯರ್ಥಿಯಾಗಿ ಮಾಜಿ

ಇಂದು ಮಂಡ್ಯದಲ್ಲಿ ನಟ ದರ್ಶನ್ ಪ್ರಚಾರ/ ಕಾಂಗ್ರೆಸ್ ಪರ ನಿಂತ ಚಾಲೆಂಜಿಂಗ್ ಸ್ಟಾರ್ Read More »

ಏ.24ರಂದು ಮಡಿಕೇರಿಗೆ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ಸ್ಟಾರ್ ಪ್ರಚಾರಕರಾದ ಯೋಗಿ ಆದಿತ್ಯನಾಥ್ ಏಪ್ರಿಲ್ 24 ರಂದು ಮಡಿಕೇರಿಗೆ ಭೇಟಿ. ಮಡಿಕೇರಿಯ ಗಾಂಧಿಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಚುನಾವಣಾ ಪ್ರಚಾರ ನಡೆಸಲಿರುವ ಯೋಗಿ ಆದಿತ್ಯನಾಥ್. ಕಾರ್ಯಕ್ರಮದ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾಹಿತಿ.

ಏ.24ರಂದು ಮಡಿಕೇರಿಗೆ ಯೋಗಿ ಆದಿತ್ಯನಾಥ್ Read More »

ರೈಲ್ ವಿಕಾಸ್ ನಿಗಮದಲ್ಲಿ 2.80 ಲಕ್ಷ ಸಂಬಳದ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜನರಲ್ ಮ್ಯಾನೇಜರ್(ಸಿವಿಲ್​) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 27, 2024 ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ರೈಲ್ವೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವಿದ್ಯಾರ್ಹತೆ:ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ ನೇಮಕಾತಿ

ರೈಲ್ ವಿಕಾಸ್ ನಿಗಮದಲ್ಲಿ 2.80 ಲಕ್ಷ ಸಂಬಳದ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ Read More »