April 2024

ವರ್ಕ್ ಫ್ರಮ್ ಜೈಲ್‍ಗೆ ಅವಕಾಶ/ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್

ಸಮಗ್ರ ನ್ಯೂಸ್: ಮದ್ಯ ನೀತಿ ಹಗರಣದ ಆರೋಪದಲ್ಲಿ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ವರ್ಕ್ ಪ್ರಮ್ ಜೈಲ್‍ಗೆ ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯನ್ನು ವಕೀಲ ಶ್ರೀಕಾಂತ್ ಪ್ರಸಾದ್ ಅವರು ಹೈಕೋರ್ಟ್‍ಗೆ ಸಲ್ಲಿಸಿದ್ದಾರೆ. ಜೈಲಿನಿಂದ ಸರ್ಕಾರ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ತಿಹಾರ್ ಜೈಲಿನ ಡಿಜಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರ್ಟ್‍ಗೆ ಒತ್ತಾಯಿಸಿದ್ದು, ಅರ್ಜಿಯ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ನ್ಯಾಯಾಲಯ ಇನ್ನೂ […]

ವರ್ಕ್ ಫ್ರಮ್ ಜೈಲ್‍ಗೆ ಅವಕಾಶ/ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್ Read More »

ವಿಜಯಪುರ : ಸಿಡಿಲು ಬಡಿದು ಐತಿಹಾಸಿಕ ಮೆಹತರ ಮಹಲ್ ಗೆ ಹಾನಿ

ಸಮಗ್ರ ನ್ಯೂಸ್‌ : ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಸಿಡಿಲು ಸಹಿತ ಮಳೆಗೆ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೆಹತರ ಮಹಲ್ ಗೆ ಸ್ವಲ್ಪ ಹಾನಿಯಾಗಿದ್ದು, ಒಂದು ಕಾರು, ಎರಡು ಬೈಕುಗಳು ಜಖಂ ಗೊಂಡಿವೆ. ಸಂಜೆ ಗಾಳಿ, ಗುಡುಗು ಮತ್ತು ಸಿಡಿಲು ಸಹಿತ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಮೆಹತರ ಮಹಲ್ ನ ಮಿನಾರ್ ವೊಂದರ ಮೇಲ್ಭಾಗದಲ್ಲಿ ಮಿಂಚು ಸಹಿತ ಸಿಡಿಲು ಬಡಿದಿದ್ದು, ಆ ಭಾಗದ ಕಲ್ಲುಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ಸ್ಮಾರಕದ ಎದುರು ನಿಲ್ಲಿಸಲಾಗಿದ್ದ ಒಂದು

ವಿಜಯಪುರ : ಸಿಡಿಲು ಬಡಿದು ಐತಿಹಾಸಿಕ ಮೆಹತರ ಮಹಲ್ ಗೆ ಹಾನಿ Read More »

ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ/ ಸೆರೆಸಿಕ್ಕಿದ ನರಹಂತಕ ಕರಡಿ ಕಾಡಾನೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಮಲೆನಾಡ ಭಾಗದಲ್ಲಿ ಉಪಟಳ ನೀಡುತ್ತಿರು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದ್ದು, ಕಾಡಾನೆ ಸೆರೆ ಇಂದಿನಿಂದ ಆರಂಭವಾಗಿದ್ದು, ಏ. 24 ವರೆಗೆ ನಡೆಯಲಿದೆ. ಇಂದು ಮೊದಲ ದಿನದ ಕಾರ್ಯಾಚರಣೆಯಲ್ಲಿ ನರಹಂತಕ ಕರಡಿ ಕಾಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾಡಾನೆ ಕಾರ್ಯಾಚರಣೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ವಾಟೀಹಳ್ಳಿಯಲ್ಲಿ ಗ್ರಾಮದ ಐಬಿಸಿ. ಎಸ್ಟೇಟ್‍ನಲ್ಲಿ ಸೆರೆಸಿಕ್ಕ ನರಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ಏಳು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ

ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ/ ಸೆರೆಸಿಕ್ಕಿದ ನರಹಂತಕ ಕರಡಿ ಕಾಡಾನೆ Read More »

ಬೀದರ್: ಕಾಂಗ್ರೆಸ್‌ನವರು ನಪುಂಸಕರು, ಷಂಡರು ಎಂದು ಬಿಜೆಪಿಯ ಎಸ್‌.ಕೆ. ಬೆಳ್ಳುಬ್ಬಿ ಆರೋಪ

ಸಮಗ್ರ ನ್ಯೂಸ್‌ : ಕಾಂಗ್ರೆಸ್‌ನವರು ನಪುಂಸಕರು, ಷಂಡರು ಎಂದು ಬಿಜೆಪಿ ಹಿರಿಯ ಮುಖಂಡ ಎಸ್‌.ಕೆ. ಬೆಳ್ಳುಬ್ಬಿ ಹೇಳಿದರು. ನಗರದ ಗಣೇಶ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು ಭಾರತ ದೇಶವನ್ನು ಮೂರು ಭಾಗ ಮಾಡಿದವರು ಈ ಕಾಂಗ್ರೆಸ್ಸಿನವರು. ಈಗ ಆ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವುದೇಕೆ? ಅಖಂಡ ಭಾರತ, ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದರು.

ಬೀದರ್: ಕಾಂಗ್ರೆಸ್‌ನವರು ನಪುಂಸಕರು, ಷಂಡರು ಎಂದು ಬಿಜೆಪಿಯ ಎಸ್‌.ಕೆ. ಬೆಳ್ಳುಬ್ಬಿ ಆರೋಪ Read More »

ಚೆನ್ನೈ: ಕತ್ತೆಗಳ ಮೂಲಕ ಬೂತ್ಗಳಿಗೆ ಇವಿಎಂ ಸಾಗಾಟ ವಿಡಿಯೋ ವೈರಲ್‌

ಸಮಗ್ರ ನ್ಯೂಸ್‌ : ಬೂತ್ಗಳಿಗೆ ಇವಿಎಂ ಯಂತ್ರಗಳನ್ನು ಮತದಾನದ ಒಂದು ದಿನ ಮುಂಚಿತವಾಗಿ ಕತ್ತೆಗಳ ಮೂಲಕ ದೂರದ ಪ್ರದೇಶಗಳಿಗೆ ಸಾಗಿಸಿದ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ನಥಮ್ ಪ್ರದೇಶದ ಹಳ್ಳಿಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಈ ಘಟನೆ ರಸ್ತೆ ಮೂಲಸೌಕರ್ಯದ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಥಳೀಯರು ಇವಿಎಂಗಳನ್ನು ಲೋಡ್ ಮಾಡುವುದನ್ನು ಮತ್ತು ನಂತರ ಇವಿಎಂಗಳನ್ನು ಕತ್ತೆಗಳಿಗೆ ಕಟ್ಟುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊ ಮುಂದುವರಿಯುತ್ತಿದ್ದಂತೆ, ಕತ್ತೆಗಳು ಬಿಗಿ ಭದ್ರತೆಯಲ್ಲಿ ಇವಿಎಂಗಳನ್ನು ಹೊತ್ತುಕೊಂಡು

ಚೆನ್ನೈ: ಕತ್ತೆಗಳ ಮೂಲಕ ಬೂತ್ಗಳಿಗೆ ಇವಿಎಂ ಸಾಗಾಟ ವಿಡಿಯೋ ವೈರಲ್‌ Read More »

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌| ಸಾಲಗಾರರ ಕಾಟಕ್ಕೆ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು ತಾನು ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು, ಹೆಂಡತಿ, ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ನರಸಿಂಹ ಎಂಬಾತ ಈ ಕೃತ್ಯವೆಸಗಿದ್ದಾನೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ದೀಪಿಕಾ (1) ಮೃತ ದುರ್ದೈವಿ. ಅಸ್ವಸ್ಥನಾಗಿರುವ ನರಸಿಂಹನನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದ ನರಸಿಂಹ ಬೆಟ್ಟಂಗ್‌ನ ಹಿಂದೆ

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌| ಸಾಲಗಾರರ ಕಾಟಕ್ಕೆ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು ತಾನು ಆತ್ಮಹತ್ಯೆ Read More »

ಬೆಳಗಾವಿ:ಬಾವಿಗೆ ಕಾಲು ಜಾರಿ ಬಿದ್ದ ಎತ್ತು ಕಾಪಾಡಿದ ಅಥಣಿ ಅಗ್ನಿಶಾಮಕ ಸಿಬ್ಬಂದಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದಲ್ಲಿ ಹಣಮಂತ ಸಿದ್ರಾಮ ಸಂಭೋಜಿ ಎಂಬುವವರ ಬಾವಿಯೊಂದರಲ್ಲಿ ಅದೆ ಗ್ರಾಮದ ತುಳಜಪ್ಪ ನಿಂಗಪ್ಪ ಬಡಕೆ ಎಂಬವರ ಗೂಳಿ (ಎತ್ತು) ಮೇಯುತ್ತ ಹೋಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ತಕ್ಷಣ ಮೊಳೆ ಗ್ರಾಮದ ನಡೆದಿದೆ. ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಅಗ್ನಿಶಾಮಕರವರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿಗಳೊಂದಿಗೆ ಆಗಮಿಸಿ 80 ಅಡಿ ಅಳತೆಯ 35×35 ವಿಸ್ತೀಣ೯ದ

ಬೆಳಗಾವಿ:ಬಾವಿಗೆ ಕಾಲು ಜಾರಿ ಬಿದ್ದ ಎತ್ತು ಕಾಪಾಡಿದ ಅಥಣಿ ಅಗ್ನಿಶಾಮಕ ಸಿಬ್ಬಂದಿ Read More »

ಚೀಟಿ ಹಣ ಎತ್ತಿಕೊಂಡು ದಂಪತಿ ಪರಾರಿ| ಹಣ ವಾಪಸ್ ಕೊಡಿಸುವಂತೆ ಪೋಲಿಸ್ ಠಾಣೆ ಮುಂದೆ ಚೀಟಿದಾರರ ದೌಡು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಚೀಟಿ ಹಣ ಗುಳುಂ ಮಾಡಿ ಇಡೀ ಕುಟುಂಬವೇ ಪರಾರಿ ಆದ ಘಟನೆ ನಡೆದಿದೆ. ಮಧ್ಯಮ ವರ್ಗದವರನ್ನೇ ಟಾರ್ಗೆಟ್‌ ಮಾಡುತ್ತಿದ್ದ ವಂಚಕ ದಂಪತಿ ಮಾತುಗಳಿಂದಲೆ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದರು. ನಂತರ ಲಕ್ಷಾಂತರ ರೂಪಾಯಿ ಚೀಟಿ ಹೆಸರಿನಲ್ಲಿ ಹಾಕಿಸಿಕೊಂಡು ಪರಾರಿಯಾಗುತ್ತಿದ್ದರು. ಈಗ ಚೀಟಿ ಹಣ ವಾಪಸ್‌ ಕೊಡಿಸುವಂತೆ ಚೀಟಿದಾರರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ಮುಂದೆ 50ಕ್ಕೂ ಹೆಚ್ಚು ಜನ ಜಮಾಯಿಸಿ ಪ್ರತಿಭಟಿಸಿದ್ದಾರೆ. ಸಿದ್ದಲಿಂಗಯ್ಯ ಎಂಬಾತ ಶ್ರೀ ಸಾಯಿ ಲಕ್ಷ್ಮಿ ಕೃಪೆ ಚಿಟ್ಸ್‌

ಚೀಟಿ ಹಣ ಎತ್ತಿಕೊಂಡು ದಂಪತಿ ಪರಾರಿ| ಹಣ ವಾಪಸ್ ಕೊಡಿಸುವಂತೆ ಪೋಲಿಸ್ ಠಾಣೆ ಮುಂದೆ ಚೀಟಿದಾರರ ದೌಡು Read More »

ರಾಮನವಮಿಯಂದು ಮಜ್ಜಿಗೆ ಹಾಗೂ ಪಾನಕ ಸೇವಿಸಿದ್ದ 45 ಜನ ಅಸ್ವಸ್ಥ

ಸಮಗ್ರ ನ್ಯೂಸ್: ನಿನ್ನೆ ರಾಮನವಮಿ ಸಂಭ್ರಮ. ಇದೇ ಸಂದರ್ಭದಲ್ಲಿ ಮಜ್ಜಿಗೆ ಹಾಗೂ ಪಾನಕ ಸೇವಿಸಿದ್ದ 45 ಜನರು ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ನಿನ್ನೆ ತುಮಕೂರಿನ ಸುಬ್ರಹ್ಮಣ್ಯ ದೇಗುಲದಲ್ಲಿ ಮಜ್ಜಿಗೆ, ಪಾನಕವನ್ನ ಗ್ರಾಮಸ್ಥರು ಸೇವಿಸಿದ್ದರು. ಬಳಿಕ ಮಧ್ಯರಾತ್ರಿಯಿಂದ ವಾಂತಿ-ಭೇದಿ ಶುರುವಾಗಿದೆ. ಇವರೆಲ್ಲ ಬೆಳಗ್ಗೆ ಎಡೆಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ, ಆರೋಗ್ಯ ಸುಧಾರಿಸದ ಹಿನ್ನೆಲೆ ಕುಣಿಗಲ್ ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ರಾಮನವಮಿಯಂದು ಮಜ್ಜಿಗೆ ಹಾಗೂ ಪಾನಕ ಸೇವಿಸಿದ್ದ 45 ಜನ ಅಸ್ವಸ್ಥ Read More »

ಮಲ್ಪೆಯಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು| ಓರ್ವ ಮೃತ್ಯು, ಇಬ್ಬರ ರಕ್ಷಣೆ

ಸಮಗ್ರ ನ್ಯೂಸ್‌ : ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂರು ಜನರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಹಾಸನ ಜಿಲ್ಲೆಯ ದಾಬೆಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬೆಬೇಲೂರಿನಿಂದ 20 ಜನರು ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ

ಮಲ್ಪೆಯಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು| ಓರ್ವ ಮೃತ್ಯು, ಇಬ್ಬರ ರಕ್ಷಣೆ Read More »