April 2024

ನಂಜನಗೂಡು: ಸರ್ಕಾರದ ಬೊಕ್ಕಸಕ್ಕೆ ಟೋಪಿ ಹಾಕಿ ಟೆಂಡರ್ ಇಲ್ಲದೆ ನಡೆಯುತ್ತಿದೆ 20 ಲಕ್ಷ ರೂಗಳ ಅಂಗಡಿ ಮಳಿಗೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಸಂದರ್ಭವನ್ನೇ ಬಳಸಿಕೊಂಡು ಗ್ರಾಮ ಪಂಚಾಯಿತಿಯ 15ನೇಯ ಹಣಕಾಸಿನ ಅನುದಾನದಲ್ಲಿ ಯಾವುದೇ ಟೆಂಡರ್ ಕರೆಯದೆ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣವನ್ನು ವಂಚಿಸಿ ಬರೋಬರಿ 4 ಅಂಗಡಿ ಮಳಿಗೆಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಈರಯ್ಯ 20 ಲಕ್ಷದ ಮೊತ್ತದ ಕಾಮಗಾರಿಗೆ ಯಾವುದೇ ಟೆಂಡರ್ ಕರೆಯದೆ ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕಿ ಕಾಮಗಾರಿ ನಿರ್ಮಾಣ […]

ನಂಜನಗೂಡು: ಸರ್ಕಾರದ ಬೊಕ್ಕಸಕ್ಕೆ ಟೋಪಿ ಹಾಕಿ ಟೆಂಡರ್ ಇಲ್ಲದೆ ನಡೆಯುತ್ತಿದೆ 20 ಲಕ್ಷ ರೂಗಳ ಅಂಗಡಿ ಮಳಿಗೆ Read More »

ಉಡುಪಿ: ಮುಸಲ್ಮಾನರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ ಎಂದ ಸುನಿಲ್ ಕುಮಾರ್

ಸಮಗ್ರ ನ್ಯೂಸ್‌ : ರಾಜ್ಯದಲ್ಲಿ ಮುಸಲ್ಮಾನರು ದೊಡ್ಡ ಪ್ರಮಾಣದಲ್ಲಿ ವಿಜೃಂಭಿಸಲು ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಮುಸಲ್ಮಾನರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆಯೇ ಮುಖ್ಯ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು. ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೇಹಾ ಕುಟುಂಬಕ್ಕೆ ಸಾಂತ್ವಾನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಹೇಳುತ್ತಾರೆ. ಮುಖ್ಯಮಂತ್ರಿಯಾದವರು

ಉಡುಪಿ: ಮುಸಲ್ಮಾನರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ ಎಂದ ಸುನಿಲ್ ಕುಮಾರ್ Read More »

ಗುಂಡ್ಲುಪೇಟೆ: ಹುಲಿದಾಳಿಗೆ ಮೃತಪಟ್ಟ ಮೂರು ತಿಂಗಳ ಕಂದನಿಗಾಗಿ ತಾಯಿ ಆನೆ ಚೀರಾಟ

ಸಮಗ್ರ ನ್ಯೂಸ್ : ಕಂದನಿಗಾಗಿ ಗಂಟೆಗಟ್ಟಲೆ ರಸ್ತೆ ಬದಿಯಲ್ಲೇ ನಿಂತು ಮೃತಪಟ್ಟ ಕರುಳ ಬಳ್ಳಿಗಾಗಿ ತಾಯಿಯಾನೆ ಚೀರಾಟ, ಇತ್ತ ಸುಮಾರು 4 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತ ಈ ಮನಕಲಕುವ ದೃಶ್ಯ ಕಂಡುಬಂದಿದ್ದು ಗುಂಡ್ಲುಪೇಟೆ ತಾಲೂಕಿನ ಪ್ರತಿಷ್ಠಿತ ವನ್ಯಜೀವಿ ತಾಣ ಬಂಡೀಪುರದಲ್ಲಿ ಮರಿಯನ್ನ ಕಳೆದುಕೊಂಡ ತಾಯಿ ಆನೆ ರೋಧನೆಯನ್ನ ಕಣ್ಣಾರೆ ಕಂಡ ಜನರು ಮರುಗಿದ್ದಾರೆ. ಈ ದೃಶ್ಯ ಕಂಡುಬಂದಿದ್ದು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ, ಮೂರು ತಿಂಗಳ ಮರಿಯಾನೆ ಮೇಲೆ ಎರಗಿದ ಹುಲಿ ಭೀಕರ ದಾಳಿ

ಗುಂಡ್ಲುಪೇಟೆ: ಹುಲಿದಾಳಿಗೆ ಮೃತಪಟ್ಟ ಮೂರು ತಿಂಗಳ ಕಂದನಿಗಾಗಿ ತಾಯಿ ಆನೆ ಚೀರಾಟ Read More »

ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ|ನಾಲ್ವರ ರಕ್ಷಣೆ,

ಸಮಗ್ರ ನ್ಯೂಸ್‌ : ಭಟ್ಕಳದಲ್ಲಿ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿರುವ ಘಟನೆ ನಡೆದಿದೆ. ಅಬ್ಬರದ ಮಳೆಗೆ ಓಂ ಗಣೇಶ್ ಹೆಸರಿನ ಮಹಾದೇವ ಖಾರ್ವಿ ಎಂಬವರಿಗೆ ಸೇರಿದ ಬೋಟ್ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ನಾಲ್ಕು ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಭಟ್ಕಳ ಭಾಗದಲ್ಲಿ ಗುಡುಗು ಸಹಿತ ಮಳೆ ಪ್ರಾರಂಭವಾಗಿದ್ದು, ಬಿಸಿಲಿನ ಅಬ್ಬರಕ್ಕೆ ಇದೇ ಮೊದಲ ಬಾರಿಗೆ ವರುಣ ಕರಾವಳಿ ಭಾಗದಲ್ಲಿ ತಂಪೆರೆದಿದ್ದಾನೆ.

ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ|ನಾಲ್ವರ ರಕ್ಷಣೆ, Read More »

ಮುಂಬೈ: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವಿಡಿಯೋ ವೈರಲ್

ಸಮಗ್ರ ನ್ಯೂಸ್ : ಮಹಿಳೆಯೊಬ್ಬಳು ಕೋಳಿ ಅಂಗಡಿಯಲ್ಲಿ ಮೊಟ್ಟೆ ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಕೋಳಿ ಅಂಗಡಿಯೊಳಗೆ ನಿಂತಿರುವುದನ್ನು ಕಾಣಬಹುದು. ಅಂಗಡಿ ಮಾಲೀಕನು ಇನ್ನೊಂದು ಕಡೆ ಮುಖ ಮಾಡಿ ಕೋಳಿ ಕತ್ತರಿಸುವುದರಲ್ಲಿ ನಿರತರಾಗಿದ್ದಾಗ ಆತನಿಗೆ ತಿಳಿಯದಂತೆ ಆತನ ಬೆನ್ನ ಹಿಂದೆ ಮಹಿಳೆ ಮೊಟ್ಟೆಗೆ ಕನ್ನ ಹಾಕಿದ್ದಾರೆ. ಮಹಿಳೆಯ ವರ್ತನೆ ಅನುಮಾನಾಸ್ಪಾದವಾಗಿ ಕಂಡುಬಂದ ಹಿನ್ನಲೆಯಲ್ಲಿ ಮಾಲೀಕ ಅವಳ ಬ್ಯಾಗ್ ಅನ್ನು

ಮುಂಬೈ: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವಿಡಿಯೋ ವೈರಲ್ Read More »

ವಿಜಯಪುರ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಭೆ

ಸಮಗ್ರ ನ್ಯೂಸ್‌ : ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ (ಬ್ಯಾಡಗಿ) ಇವರ ಅಧ್ಯಕ್ಷತೆಯಲ್ಲಿ ವಿಜಯಪುರ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸರಕಾರದಿಂದ ನಾಮನಿರ್ದೇಶನಗೊಂಡು ಜಿಲ್ಲಾ ಅನುಷ್ಠಾನ ಸಮಿತಿ ಹಾಗೂ ತಾಲೂಕಾ ಸಮಿತಿಗಳ ಸಭೆಯನ್ನು ಕರೆಯಲಾಗಿತ್ತು. ಸಭೆಯನ್ನುದ್ದೇಶಿಸಿ ಎಸ್.ಆರ್. ಪಾಟೀಲ (ಬ್ಯಾಡಗಿ) ಇವರು ಮಾತನಾಡುತ್ತಾ ೨೦೨೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೫ ಗ್ಯಾರಂಟಿಗಳನ್ನು ಘೋಷಿಸಿದ್ದರು. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ

ವಿಜಯಪುರ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಭೆ Read More »

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್ ಪತ್ತೆ

ಸಮಗ್ರ ನ್ಯೂಸ್: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್‌ ಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ಚಂದ್ರಶೇಖರ್‌ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಶೇಖರ್‌ ಅವರು ಎ. 19ರಂದು ಸ್ಥಳೀಯ ನಿವಾಸಿಗಳೊಂದಿಗೆ ಕಾಡಿಗೆ ಸೌದೆ ತರಲು ತೆರಳುವ ವೇಳೆ ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಷದಲ್ಲಿರುವ ರಕ್ಷಿತಾರಣ್ಯದಲ್ಲಿ ತೆರಳುತ್ತಿದ್ದಾಗ ದಾರಿಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಬ್ಯಾಗ್‌ ಕಂಡುಬಂದಿತ್ತು. ಸ್ವಲ್ಪ

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್ ಪತ್ತೆ Read More »

ಉಡುಪಿ: ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಆತಂಕ; ಬಿ.ವೈ ವಿಜಯೇಂದ್ರ

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿರುವುದರ ಪರಿಣಾಮ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗೆ ಹಿಂದು ಯುವತಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಸಿಎಂ, ಗೃಹ ಸಚಿವರು ವೈಯಕ್ತಿಕ ಕಾರಣ ಎಂದು ಹೇಳುತ್ತಿರುವುದು ವಿಪರ್ಯಾಸ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಯುವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರಿನಲ್ಲಿ ಮೋದಿ ಹಾಡು ಹಾಡಿದ್ದಕ್ಕೆ ಪುಂಡರು, ದೇಶದ್ರೋಹಿಗಳು ಬಿಜೆಪಿ ಕಾರ್ಯಕರ್ತರ ಮೇಲೆ

ಉಡುಪಿ: ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಆತಂಕ; ಬಿ.ವೈ ವಿಜಯೇಂದ್ರ Read More »

ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ CCB ಇನ್ಸ್​ಪೆಕ್ಟರ್ ಅಮಾನತು

ಸಮಗ್ರ ನ್ಯೂಸ್: ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಅಪರಾಧ ಕೇಂದ್ರ ವಿಭಾಗ (CCB)ಯ ರೌಡಿ ನಿಗ್ರಹದಳದ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಇವರನ್ನು ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ, ವರದಿ ನೀಡುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಹಾಗೆ ಅಧಿಕಾರಿಗಳು ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವನ ಬಗ್ಗೆ ವರದಿ ಕೇಳಿದ್ದರು. ಆದರೆ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ಅವರು ರೌಡಿಶೀಟರ್ ರೋಹಿತ್ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ, ವರದಿ ನೀಡಿರಲಿಲ್ಲ. ಹೀಗಾಗಿ ಸಿಸಿಬಿ

ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ CCB ಇನ್ಸ್​ಪೆಕ್ಟರ್ ಅಮಾನತು Read More »

ಮಣಿಪುರ: ಮತದಾನ ವೇಳೆ ಗುಂಡಿನ ದಾಳಿ- ಮೂವರು ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾದ ನಡೆದಿದ್ದು, ಈ ವೇಳೆ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡದಿರುವ ಘಟನೆ ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಕಂಪು ಸಜೆಬ್‌ನಲ್ಲಿ ನಡೆದಿದೆ. ಗುಂಡಿನ ದಾಳಿಯ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಮದ್ದುಗುಂಡು ಮತ್ತು 1.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸದ್ಯ

ಮಣಿಪುರ: ಮತದಾನ ವೇಳೆ ಗುಂಡಿನ ದಾಳಿ- ಮೂವರು ಪೊಲೀಸರ ವಶಕ್ಕೆ Read More »