April 2024

ಉಡುಪಿ : ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತ್ಯು

ಸಮಗ್ರ ನ್ಯೂಸ್‌ : ಖಾಸಗಿ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಇಂದು ಸಂಜೆ ನಡೆದಿದೆ. ಉಡುಪಿಯಿಂದ ಬ್ರಹ್ಮಾವರ ಕಡೆ ಹೋಗುತ್ತಿದ್ದ ಖಾಸಗಿ ಬಸ್, ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಚಕ್ರ ಹರಿದಿದ್ದು, ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರ […]

ಉಡುಪಿ : ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತ್ಯು Read More »

ಮಧ್ಯಪ್ರದೇಶ: ಕೃಷ್ಣನ ಮೂರ್ತಿಯನ್ನು ತನ್ನ ಗಂಡನೆಂದು ಸ್ವೀಕರಿಸಿದ ಯುವತಿ

ಸಮಗ್ರ ನ್ಯೂಸ್ : ಮಹಿಳೆಯೊಬ್ಬಳು ಶ್ರೀಕೃಷ್ಣನ ಮೂರ್ತಿಯನ್ನೇ ವಿವಾಹವಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈಕೆ ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದವಳು. ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾಳೆ. ಗ್ವಾಲಿಯರ್ ನಗರದ ನ್ಯೂ ಬ್ರಜ್ ವಿಹಾರ್ ಕಾಲೋನಿಯ ಶಿವಾನಿ ಪರಿಹಾರ್ (23) ಮದುವೆಯಾದ ಯುವತಿ. ತಂದೆ ರಾಮ್ ಪ್ರತಾಪ್ ಪರಿಹಾರ್ ಮತ್ತು ತಾಯಿ ಮೀರಾ ಪರಿಹಾರ್. ಏಪ್ರಿಲ್

ಮಧ್ಯಪ್ರದೇಶ: ಕೃಷ್ಣನ ಮೂರ್ತಿಯನ್ನು ತನ್ನ ಗಂಡನೆಂದು ಸ್ವೀಕರಿಸಿದ ಯುವತಿ Read More »

ವಿಜಯಪುರ: ಬಿಜೆಪಿ ಶಕ್ತಿಕೇಂದ್ರ ಮಟ್ಟದ ಪಥ ಸಭೆಗೆ ನಾಯಕರ ನಿಯೋಜನೆ- ಆರ್.ಎಸ್.ಪಾಟೀಲ್

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಬೂತ್ ಮಟ್ಟದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಏ.19 ಮತ್ತು 20 ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ವಿಜಯಪುರ ಜಿಲ್ಲೆಯ ಎಲ್ಲಾ ಎಂಟು ಮತಕ್ಷೇತ್ರಗಳ ಒಟ್ಟು 428 ಶಕ್ತಿಕೇಂದ್ರಗಳಿಗೆ ನಾಯಕರುಗಳನ್ನು ಪಕ್ಷದಿಂದ ನಿಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ್ ಕುಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ 52 ಶಕ್ತಿಕೇಂದ್ರಗಳಿಗೆ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ದೇವರ

ವಿಜಯಪುರ: ಬಿಜೆಪಿ ಶಕ್ತಿಕೇಂದ್ರ ಮಟ್ಟದ ಪಥ ಸಭೆಗೆ ನಾಯಕರ ನಿಯೋಜನೆ- ಆರ್.ಎಸ್.ಪಾಟೀಲ್ Read More »

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಚೇತನರ ಬೈಕ್ ರ್ಯಾಲಿ

ಸಮಗ್ರ ನ್ಯೂಸ್ : ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯಿಂದ ವಿಶೇಷ ಚೇತನರ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಅವರು ವಿಶೇಷ ಚೇತನರ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಈ ರ್ಯಾಲಿಯು ಕೆ.ಸಿ.ಡಿ ವೃತ್ತದಿಂದ ಪ್ರಾರಂಭವಾಗಿ ಸಪ್ತಾಪೂರ ಬಾವಿ, ಜಯನಗರ ಕ್ರಾಸ್, ಕೆ.ಯು.ಡಿ ವೃತ್ತ, ಶ್ರೀನಗರ ವೃತ್ತ ಮಾರ್ಗದ ಮೂಲಕ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತ್ತು. ಮೇ 7 ರಂದು

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಚೇತನರ ಬೈಕ್ ರ್ಯಾಲಿ Read More »

ಬಿಜೆಪಿಯಿಂದ ಮನೆಮನೆಯಲ್ಲಿ ಆಣೆ – ಪ್ರಮಾಣ| ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರೋಪ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ತಿಳಿದಿರುವುದರಿಂದ ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿದ್ದು ಮನೆಮನೆಗಳಿಗೆ ತೆರಳಿ ಆಣೆ-ಪ್ರಮಾಣ ಮಾಡಿಸುತ್ತಿದ್ದಾರೆ. ಕಾರ್ಯಕರ್ತರು ಇದಕ್ಕೆ ತಲೆಕೆಡಿಸಿಕೊಳ್ಳದೆ ಪ್ರೀತಿಯಿಂದ ಚುನಾವಣೆಯನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಸಲಹೆ ನೀಡಿದರು. ಸುಳ್ಯ ತಾಲೂಕಿನ ಸಂಪಾಜೆಯಿಂದ ಕಲ್ಲುಗುಂಡಿವರೆಗೆ ನಡೆದ ರೋಡ್ ಶೋ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸಂಸದರಾಗಿದ್ದ 33 ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿಲ್ಲ. ಕಾಂಗ್ರೆಸ್ ಸಂಸದರಿದ್ದಾಗ ಆಗಿದ್ದ ಅಭಿವೃದ್ಧಿ ಕೆಲಸಗಳು

ಬಿಜೆಪಿಯಿಂದ ಮನೆಮನೆಯಲ್ಲಿ ಆಣೆ – ಪ್ರಮಾಣ| ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರೋಪ Read More »

ಸುಳ್ಯ: ಪಯಸ್ವಿನಿಯಲ್ಲಿ ಮುಳುಗಿ ಯುವಕ ಸಾವು

ಸಮಗ್ರ ನ್ಯೂಸ್: ಸ್ನಾನ ಮಾಡುವ ವೇಳೆ ಮಂಡೆಕೋಲು ಗ್ರಾಮದ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಎ.17ರಂದು ಸಂಜೆ ಬಳಿಕ ಸಂಭವಿಸಿದೆ. ಮೃತನನ್ನು ಈಶ್ವರಮಂಗಲದ ಪ್ರವೀಣ್‌(38) ಎಂದು ಗುರುತಿಸಲಾಗಿದೆ. ಪ್ರವೀಣ್‌ ಅವರು ಎ.17ರಂದು ತನ್ನ ಸ್ನೇಹಿತರೊಂದಿಗೆ ಮಂಡೆಕೋಲು ಗ್ರಾಮದ ಪರಪೆಗಮಂನ್‌ ಗಾಯ ಎಂಬಲ್ಲಿ ಹರಿಯುವ ಪಯಸ್ವಿನಿ ನದಿಗೆ ಮೀನು ಹಿಡಿಯಲು ತೆರಳಿದ್ದವರು, ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಪ್ರವೀಣ್‌ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಅಲ್ಲಿದ್ದವರು ಇತರರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ

ಸುಳ್ಯ: ಪಯಸ್ವಿನಿಯಲ್ಲಿ ಮುಳುಗಿ ಯುವಕ ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿಮ್ಮ ರಾಶಿಗಳಿಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಏಪ್ರಿಲ್ 21ರಿಂದ 27ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ:ಆರೋಗ್ಯದಲ್ಲಿನ ತೊಂದರೆಯು ಮರೆಯಾಗುತ್ತದೆ. ಕುಟುಂಬದ ಹಣಕಾಸಿನ ಸಮಸ್ಯೆ ಕ್ರಮೇಣ ಸುಧಾರಿಸುತ್ತದೆ. ಬಹುದಿನದಿಂದ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆವೊದಕ್ಕೆ ಪರಿಹಾರ ದೊರೆಯಲಿದೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ಹೊರುವಿರಿ. ಸೋದರಿಯ ಆಗಮನ ಹೊಸ ಚೈತನ್ಯವನ್ನು ನೀಡುತ್ತದೆ. ದಾಂಪತ್ಯ ಜೀವನ ಸಂತಸದಿಂದ ಕೂಡಿರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಉದ್ಯೋಗಸ್ಥರು ಒತ್ತಡಕ್ಕೆ ಒಳಗಾಗುತ್ತಾರೆ. ಬುದ್ದಿವಂತಿಕೆಯ ನಿರ್ಧಾರದಿಂದ ಮಕ್ಕಳಿಗೆ ಅಧಿಕಾರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ವಿಜಯಪುರ: ನೇಹಾಳ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿಭಟನೆ

ಸಮಗ್ರ ನ್ಯೂಸ್ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಪಯಾಜ್ ಎಂಬಾತ ಮಾಡಿರುವ ಭೀಕರ ಹತ್ಯೆಯನ್ನು ಖಂಡಿಸಿ ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಲಾಯಿತು. ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನೇಹಾ ಹಿರೇಮಠಳನ್ನು ಭೀಕರ ಹತ್ಯೆಯನ್ನು ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಕ್ರೂರ ಮನಸ್ಥಿತಿಯ ಪಯಾಜ್ ಎಂಬಾತ

ವಿಜಯಪುರ: ನೇಹಾಳ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿಭಟನೆ Read More »

ವಿಜಯನಗರ: ಏ29ರಂದು ಕೂಡ್ಲಿಗೆ ಸಿದ್ದರಾಮಯ್ಯ, ಡಿಕೆಶಿ ಆಗಮನ-ಎನ್.ಟಿ.ಶ್ರೀನಿವಾಸ್

ಸಮಗ್ರ ನ್ಯೂಸ್ : ಏ29ರಂದು ಪಟ್ಟಣಕ್ಕೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಪರ ಪ್ರಚಾರ, ಹಾಗೂ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ರವರ ಪರ ಮತಯಾಚನೆ ಮಾಡಲು ಇವರು ಆಗಮಿಸಲಿದ್ದಾರೆಂದು ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ರವರು, ಪಕ್ಷದ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ಜರುಗುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ, ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಸಿಎಂ

ವಿಜಯನಗರ: ಏ29ರಂದು ಕೂಡ್ಲಿಗೆ ಸಿದ್ದರಾಮಯ್ಯ, ಡಿಕೆಶಿ ಆಗಮನ-ಎನ್.ಟಿ.ಶ್ರೀನಿವಾಸ್ Read More »

ಕುಡಿದು ಮದುವೆ ಮಂಟಪಕ್ಕೆ ಬಂದ ವರ| ಬೇಸರದಿಂದ ಮದುವೆ ನಿರಾಕರಿಸಿದ ವಧು

ಸಮಗ್ರ ನ್ಯೂಸ್: ತನ್ನ ಮದುವೆಗೆ ವರನೇ ಕುಡಿದು ಬಂದು ಅವಾಂತರ ಸೃಷ್ಟಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ. ಭಿಂಡ್ ಜಿಲ್ಲೆಯ ಲಹಾರ್ ಮೂಲದ ವೀರೇಂದ್ರ ರಾಜಾವತ್ ಅವರ ಮಗನ ಮದುವೆಯ ಮೆರವಣಿಗೆ ಬ್ಯಾಂಡ್ ವಾದ್ಯಗಳ ಮೂಲಕ ವಧುವಿನ ಮನೆಯ ಬಾಗಿಲಿಗೆ ಬಂದಿತ್ತು. ಆದರೆ ವರ ಕುಡಿದ ಮತ್ತಿನಲ್ಲಿದ್ದ. ಕುದುರೆಯಿಂದ ಇಳಿಯುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಅಲ್ಲಿದ್ದವರು ವರನನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ಆದರೆ ಆತನಡೆಯುವಾಗ ಮತ್ತೆ ಎಡವಿ

ಕುಡಿದು ಮದುವೆ ಮಂಟಪಕ್ಕೆ ಬಂದ ವರ| ಬೇಸರದಿಂದ ಮದುವೆ ನಿರಾಕರಿಸಿದ ವಧು Read More »