April 2024

ಬೆಳ್ತಂಗಡಿ :ಕೆರೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆ

ಸಮಗ್ರ ನ್ಯೂಸ್ : ಕೊಯ್ಯೂರು ಗ್ರಾಮದ ಬದ್ಯಾರು ಎಂಬಲ್ಲಿ ಕೃಷಿಕರೊಬ್ಬರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹ ಕಂಡುಬಂದ ಘಟನೆ ನಡೆದಿದೆ. ಕಾಡುಕೋಣದ ಮೃತ ದೇಹವನ್ನು ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಹಾಗೂ ಸ್ಥಳೀಯರು ಸೇರಿ ಸೋಮವಾರ ಕೆರೆಯಿಂದ ಮೇಲೆತ್ತಿದರು. ನೀರು ಅರಸಿಕೊಂಡು ಬಂದ ಸುಮಾರು 6 ವರ್ಷ ಪ್ರಾಯದ ಕಾಡುಕೋಣ ನೀರು ಕುಡಿದ ಬಳಿಕ ಕೆರೆಯ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾರದೆ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಕುರಿತು […]

ಬೆಳ್ತಂಗಡಿ :ಕೆರೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆ Read More »

ಮಂಗಳೂರು: ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು- ಸುರ್ಜೆವಾಲಾ ಕಿಡಿ

ಸಮಗ್ರ ನ್ಯೂಸ್‌ : ಮಂಗಳೂರಿನಲ್ಲಿ ಚೊಂಬು ಹಿಡಿದುಕೊಂಡೆ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು. ಕರ್ನಾಟಕ ನ್ಯಾಯ ಕೇಳಿದಾಗ ಮೋದಿ ನೀಡೋದು ಚೊಂಬು. ಜನರು 15 ಲಕ್ಷ ಕೇಳಿದಾಗ ಮೋದಿ ನೀಡೋದು ಚೊಂಬು. ಜನ ಸ್ಮಾರ್ಟ್ ಸಿಟಿ ಕೇಳಿದಾಗ ಮೋದಿ ಕೊಡೋದು ಚೊಂಬು ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರಕಾರ ಕನ್ನಡಿಗರಿಗೆ , ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ. ಕಳೆದ ವಿಧಾನ ಸಭಾ ಚುನಾವಣೆ ಬಿಜೆಪಿಗೆ

ಮಂಗಳೂರು: ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು- ಸುರ್ಜೆವಾಲಾ ಕಿಡಿ Read More »

ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಟಿ.ಎ.ಶರವಣ ದೂರು

ಸಮಗ್ರ ನ್ಯೂಸ್: ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಲಂಚ ಹಾಗೂ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂಎಲ್‌ಸಿ ಟಿ.ಎ.ಶರವಣ ಅವರ ನೇತೃತ್ವದಲ್ಲಿ ಜೆಡಿಎಸ್‌ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಾಂಗ್ರೆಸ್ ಹಲವಾರು ಭರವಸೆಗಳು ಮತ್ತು ಆಶ್ವಾಸನೆಗಳನ್ನು ಘೋಷಿಸುವ ಮೂಲಕ ಸಮಾಜದ ವಿವಿಧ ಗುಂಪುಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇದು ಗ್ಯಾರಂಟಿ ಕಾರ್ಡ್‌ಗಳು ಚುನಾವಣಾ ಆಮಿಷವಾಗಿದ್ದು, ಇಂತಹವುಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಎಂಎಲ್‌ಸಿ ಟಿ.ಎ.ಶರವಣ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಟಿ.ಎ.ಶರವಣ ದೂರು Read More »

ಉಡುಪಿ:1 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ; ಆರೋಪಿಯ ಬಂಧನ

ಸಮಗ್ರ ನ್ಯೂಸ್‌ : ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ಬಿಹಾರಕ್ಕೆ ಸಾಗಿಸುತ್ತಿದ್ದ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಕೋಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಈತ ಎ.20ರಂದು ಕೇರಳದ ಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದು ಬಿಹಾರಕ್ಕೆ ಸಾಗಿಸುತ್ತಿದ್ದನು. ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಪೊಲೀಸರು ಮೂರ್ಕೈ ಸಮೀಪ ಶನಿವಾರ ಸಂಜೆ

ಉಡುಪಿ:1 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ; ಆರೋಪಿಯ ಬಂಧನ Read More »

ಬಿಜೆಪಿಯಿಂದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಸಮಗ್ರ ನ್ಯೂಸ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಬಿಜೆಪಿಯಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ

ಬಿಜೆಪಿಯಿಂದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ Read More »

ಬೆಳಗಾವಿಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಮಧ್ಯೆ ಮಾರಾಮಾರಿ

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬಿಲ್ ವಿಚಾರವಾಗಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ. ನೀರಿನ ಸಮಸ್ಯೆ ಪರಿಹರಿಸಲು ಈ ಸಭೆಯನ್ನು ಕರೆಯಲಾಗಿತ್ತು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸದಸ್ಯರು ಕೊಳವೆಬಾವಿ ಕೊರಿಸಿದ್ದರು. ಆದರೆ ಬಿಲ್ ಮಂಜೂರಾತಿಗೆ ಅಧ್ಯಕ್ಷ ಒಪ್ಪಿಗೆ ನೀಡದ ಹಿನ್ನೆಲೆ ಸದಸ್ಯರು ವಾಗ್ವಾದ ನಡೆಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಸದಸ್ಯರು ಹಾಗೂ ಅಧ್ಯಕ್ಷರ ಮಧ್ಯೆ ಮಾರಾಮಾರಿ ನಡೆದಿದೆ.

ಬೆಳಗಾವಿಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಮಧ್ಯೆ ಮಾರಾಮಾರಿ Read More »

ಕಲಬುರಗಿ: ಮುಸ್ಲಿಮರು ನಿಮ್ಮ ಕಾಲೋನಿಗೆ ಬಂದರೆ ಕಲ್ಲಿನಿಂದ ಹೊಡೆಯಿರಿ ಎಂದ ಯತ್ನಾಳ್ 

ಸಮಗ್ರ ನ್ಯೂಸ್‌ : ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕಲಬುರಗಿಯ ಗಂಜ್‌ ಕಾಲೋನಿಯಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಯತ್ನಾಳ್‌, ಮುಸ್ಲಿಮರು ನಿಮ್ಮ ಕಾಲೋನಿಗೆ ಬಂದರೆ ಕಲ್ಲಿನಿಂದ ಹೊಡೆಯಿರಿ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ನಿಮ್ಮ ಮನೆ ಮೇಲೆ ಕಲ್ಲು ಸಂಗ್ರಹ ಮಾಡಿ ಇಟ್ಟುಕೊಂಡಿರಿ. ಮುಸ್ಲಿಮರು ನಿಮ್ಮ ಕಾಲೋನಿಗೆ ಗಾಡಿ ಗೊಗೊಂಡು ಬರ್ತಾರೆ. ಅವರು ಬಂದರೆ ಕಲ್ಲಿನಲ್ಲಿ ಹೊಡೆಯಿರಿ ಎಂದು ಹೇಳಿದ್ದಾರೆ. ನೆಹರೂ ಬಗ್ಗೆ ಮಾತು ಶುರು ಮಾಡಿದ ಯತ್ನಾಳ್,

ಕಲಬುರಗಿ: ಮುಸ್ಲಿಮರು ನಿಮ್ಮ ಕಾಲೋನಿಗೆ ಬಂದರೆ ಕಲ್ಲಿನಿಂದ ಹೊಡೆಯಿರಿ ಎಂದ ಯತ್ನಾಳ್  Read More »

ತುಮಕೂರು : ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಕಾಂಗ್ರೆಸ್‌ ಚೊಂಬಿನ ಪ್ರತೀಕ-ಆರ್.ಅಶೋಕ್‌

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಸರ್ಕಾರ ಬಂದ ಮೇಲೆ‌ ಹಿಂದುಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ಅವರ ಜಾಹೀರಾತಿನಲ್ಲಿ ಏನು ಚೊಂಬು ಕೊಟ್ಟಿದ್ದಾರೆ, ಅದರಲ್ಲಿ ಪೂರ್ತಿ ರಕ್ತ ತುಂಬಿದೆ. ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಅವರ ಚೊಂಬಿನ ಪ್ರತೀಕ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ನೇಹಾ ಹತ್ಯೆ ಖಂಡಿಸಿ ನಗರದಲ್ಲಿ ಬಿಜೆಪಿ-ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು, ನಂತರ ಮಾತನಾಡಿದ ಅವರು, ಕಾಂಗ್ರೆಸ್ ಬಂತು ಭಯೋತ್ಪಾದನೆ ಬಂತು, ಕಾಂಗ್ರೆಸ್ ಬಂತು ನಕ್ಸಲ್ ಬಂತು, ಕಾಂಗ್ರೆಸ್ ಬಂತು ಲವ್

ತುಮಕೂರು : ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಕಾಂಗ್ರೆಸ್‌ ಚೊಂಬಿನ ಪ್ರತೀಕ-ಆರ್.ಅಶೋಕ್‌ Read More »

ಉತ್ತರ ಪ್ರದೇಶ: ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು ಬಾಲಕ 100 ಕಿಲೋ ಪ್ರಯಾಣ -ವಿಡಿಯೋ ವೈರಲ್‌

ಸಮಗ್ರ ನ್ಯೂಸ್‌ : ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ ಬಾಲಕನನ್ನು ರೈಲ್ವೇ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಯ್ ಎಂಬ ಹೆಸರಿನ ಬಾಲಕ ಗೂಡ್ಸ್ ರೈಲಿನ ಟೈರ್‌ಗಳ ನಡುವೆ ಕುಳಿತುಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದಾನೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ರೈಲ್ವೇ

ಉತ್ತರ ಪ್ರದೇಶ: ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು ಬಾಲಕ 100 ಕಿಲೋ ಪ್ರಯಾಣ -ವಿಡಿಯೋ ವೈರಲ್‌ Read More »

ಬೀದರ್: ಎದೆಯ ಮೇಲೆ ಸಚಿವ ಈಶ್ವರ ಖಂಡ್ರೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಸಮಗ್ರ ನ್ಯೂಸ್‌ : ನೆಚ್ಚಿನ ರಾಜಕೀಯ ನಾಯಕ, ಸಿನಿಮಾ ನಟ-ನಟಿಯರ ಪ್ರೀತಿ, ಅಭಿಮಾನಕ್ಕಾಗಿ ಹಲವು ಅಭಿಮಾನಿಗಳು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಉದಾಹರಣೆಗಳಿವೆ. ಅಭಿಮಾನ ತೋರಿಸಿಕೊಳ್ಳಲು ಅಭಿಮಾನಿಗಳು ನಾನಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಅಭಿಮಾನಿ ತಮ್ಮ ಎದೆಯ ಮೇಲೆ ನೆಚ್ಚಿನ ನಾಯಕರಾದ ಅರಣ್ಯ, ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಬೀದರ್‌ ತಾಲೂಕಿನ ಕಮಠಾಣ ಶಿವಾಜಿ ಗಾಯಕವಾಡ ಎಂಬುವರು ತಮ್ಮ ಎದೆಯ ಎಡ ಭಾಗದ

ಬೀದರ್: ಎದೆಯ ಮೇಲೆ ಸಚಿವ ಈಶ್ವರ ಖಂಡ್ರೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ Read More »