April 2024

ಇಂದು ಬೆಂಗಳೂರಿಗರ ನೆರಳು ಕಾಣೆಯಾಗಲಿದೆ!! ಏನಿದು ಪ್ರಕೃತಿ ವಿಸ್ಮಯ?

ಸಮಗ್ರ ನ್ಯೂಸ್: ಬೆಂಗಳೂರಿನ ನಿವಾಸಿಗಳು ಬುಧವಾರ ಅಪರೂಪದ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇಂದು (ಎ.24) ‘ಶೂನ್ಯ ನೆರಳು ದಿನ’ದ ಸಮಯದಲ್ಲಿ ತಮ್ಮ ನೆರಳುಗಳು ಕ್ಷಣಿಕವಾಗಿ ಕಣ್ಮರೆಯಾಗುವುದರಿಂದಈ ವಿಶಿಷ್ಟ ಖಗೋಳ ಘಟನೆಯನ್ನು ಏಪ್ರಿಲ್ 24 ರಂದು ಮಧ್ಯಾಹ್ನ 12:17 ರಿಂದ 12:23 ರ ಅನುಭವಿಸಬಹುದಾಗಿದೆ. ಬೆಂಗಳೂರಿನ ಅದೇ ಅಕ್ಷಾಂಶದಲ್ಲಿರುವ ಸ್ಥಳಗಳಲ್ಲಿ ಇದನ್ನು ವೀಕ್ಷಿಸಬಹುದು. 13.0 ಡಿಗ್ರಿ ಉತ್ತರ ಅಕ್ಷಾಂಶದಲ್ಲಿರುವ ಬೆಂಗಳೂರು ವರ್ಷಕ್ಕೆ ಎರಡು ಬಾರಿ ಈ ವಿದ್ಯಮಾನವನ್ನು ಅನುಭವಿಸುತ್ತದೆ, ಸಾಮಾನ್ಯವಾಗಿ ಏಪ್ರಿಲ್ 24/25 ಮತ್ತು ಆಗಸ್ಟ್ 18 ರ ಸುಮಾರಿಗೆ […]

ಇಂದು ಬೆಂಗಳೂರಿಗರ ನೆರಳು ಕಾಣೆಯಾಗಲಿದೆ!! ಏನಿದು ಪ್ರಕೃತಿ ವಿಸ್ಮಯ? Read More »

ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ| ಗ್ರಾಹಕರು ಫುಲ್ ಖುಷ್

ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸತತ 2ನೇ ದಿನವೂ ಇಳಿಕೆ ದಾಖಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಮಂಗಳವಾರ ಒಂದೇ ದಿನ 1,450 ರೂ.ಗಳ ಇಳಿಕೆಯೊಂದಿಗೆ 10 ಗ್ರಾಂಗೆ 72,200 ರೂ.ಗಳಾಗಿದೆ. ಬೆಳ್ಳಿ ಬೆಲೆಯೂ ಕೆ.ಜಿ.ಗೆ 2,300 ರೂ.ಗಳಷ್ಟು ಕಡಿಮೆಯಾಗಿದ್ದು, ಕೆ.ಜಿ. ಬೆಳ್ಳಿಗೆ 83,500 ರೂ.ಗಳಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆಯು 10 ಗ್ರಾಂಗೆ 1,530ರಷ್ಟು ಕಡಿಮೆಯಾಗಿ 72,160 ರೂ.ಗಳಿಗೆ ತಲುಪಿದೆ. ಬೆಳ್ಳಿ ಬೆಲೆಯು 2,500 ರೂ.ಗಳಷ್ಟು ಕಡಿಮೆಯಾಗಿ ಕೆ.ಜಿ.ಗೆ 83,000 ರೂ.ಗಳಿಗೆ

ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ| ಗ್ರಾಹಕರು ಫುಲ್ ಖುಷ್ Read More »

ವಿಟ್ಲ: ಬಾವಿಗೆ ರಿಂಗ್ ಹಾಕುವ ವೇಳೆ ದುರಂತ| ಉಸಿರುಗಟ್ಟಿ‌ ಇಬ್ಬರು ಕಾರ್ಮಿಕರು ಸಾವು

ಸಮಗ್ರ ನ್ಯೂಸ್: ಬಾವಿಗೆ ರಿಂಗ್ ಹಾಕುವ ವೇಳೆ ಆಮ್ಲಜನಕದ ಕೊರತೆಯುಂಟಾಗಿ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ ಮತ್ತು ಮಲಾರ್ ನಿವಾಸಿ ಆಲಿ ಸಾವನ್ನಪ್ಪಿದವರು. ಅಳಕೆ ಸಮೀಪ ಪಡಿಬಾಗಿಲಿನಲ್ಲಿ ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಕೆಳಗಿಳಿದವರು ಮೇಲೆರಲಾರದೆ ಒದ್ದಾಟ ನಡೆಸುತ್ತಿರುವುದನ್ನು

ವಿಟ್ಲ: ಬಾವಿಗೆ ರಿಂಗ್ ಹಾಕುವ ವೇಳೆ ದುರಂತ| ಉಸಿರುಗಟ್ಟಿ‌ ಇಬ್ಬರು ಕಾರ್ಮಿಕರು ಸಾವು Read More »

ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ| 10 ಮಂದಿ ಸಾವು

ಸಮಗ್ರ ನ್ಯೂಸ್: ಎ. 23ರಂದು ಮಲೇಷ್ಯಾ ಸಶಸ್ತ್ರ ಪಡೆಗಳ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ಹತ್ತು ಮಂದಿ ಸಾವನ್ನಪ್ಪಿದ್ದ ಭೀಕರ ಘಟನೆ ನಡೆದಿದೆ. ಇದು ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ ನೆಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಸೋಶೀಯಲ್‌ ಮೀಡಿಯಾದಲ್ಲಿ ಈ ವೀಡಿಯೊ ವೈರಲ್ ಆಗಿದೆ. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ. ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಚಾಲಕರು ತರಬೇತಿ ಪಡೆಯುತ್ತಿದ್ದವರಾಗಿದ್ದರು. ಕೆಲವು ತರಬೇತಿ

ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ| 10 ಮಂದಿ ಸಾವು Read More »

ಸುಬ್ರಹ್ಮಣ್ಯ: ಬಸ್ ನಿಂದ ಬಿದ್ದು ಪ್ರಯಾಣಿಕ ಸಾವು

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ಸಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ. ಬೆಂಗಳೂರು ಮೂಲದ ಸುಂಕದಕಟ್ಟೆಯ ಮಂಜುನಾಥ ಮೃತರು. ಎ. 22ರಂದು ಮಂಜುನಾಥ ಅವರು ಪತ್ನಿ ಜತೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಯಾಣಿಸಿದ್ದರು. ಬಸ್‌ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲಪುವಾಗ ಚಾಲಕ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಮತ್ತು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೇ ಇದ್ದುದರಿಂದ ಮಂಜುನಾಥ ಅವರು ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ

ಸುಬ್ರಹ್ಮಣ್ಯ: ಬಸ್ ನಿಂದ ಬಿದ್ದು ಪ್ರಯಾಣಿಕ ಸಾವು Read More »

ಪ್ರಚಾರದ ವೇಳೆ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಕಿರಿಕಿರಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅಬ್ಬರದ ಪ್ರಚಾರವನ್ನು ಎಲ್ಲಾ ಪಕ್ಷಗಳು ನಡೆಸುತ್ತಿದೆ. ಅದರಂತೆ ಇಂದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ರೋಡ್​ ಶೋ ನಡೆಸಿದ್ದು, ಈ ವೇಳೆ ಕಿರಿಕ್ ಉಂಟಾಗಿದೆ. ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ರೋಡ್​ ಶೋಗೆ ರಸ್ತೆಯಲ್ಲಿ ಜನ ಜಮಾಯಿಸಿದ್ಧರು. ಈ ವೇಳೆ ಕಾರಿನಲ್ಲಿ ಬಂದ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್​.ಎನ್​ನಾರಾಯಣಸ್ವಾಮಿ ಎದುರು ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆ ಕಾರಿನಿಂದ

ಪ್ರಚಾರದ ವೇಳೆ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಕಿರಿಕಿರಿ Read More »

ಬೈಕ್ – ಬಸ್ ನಡುವೆ ಭೀಕರ ಅಪಘಾತ|ಇಬ್ಬರು ಸಾವು

ಸಮಗ್ರ ನ್ಯೂಸ್: ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ನಡೆದು, ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ನಡೆದಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್, ಬೈಕ್‌ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ರಸ್ತೆಯಲ್ಲೇ ಚಾಲಕ ಬಸ್ ನಿಲ್ಲಿಸಿದ್ದು, ಬಸ್‌ನಿಂದ ಕೆಳಗಿಳಿದು

ಬೈಕ್ – ಬಸ್ ನಡುವೆ ಭೀಕರ ಅಪಘಾತ|ಇಬ್ಬರು ಸಾವು Read More »

ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಮಧ್ಯಮಾರಾಟ ನಿಷೇಧ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ – 2024ನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಸುವ್ಯವಸ್ಧೆಯನ್ನು ಕಾಪಾಡುವ ದೃಷ್ಟಿಯಿಂದ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ವೆಂಕಟ್ ರಾಜಾ ಅವರು ಜಿಲ್ಲಾದ್ಯಂತ ಮಧ್ಯ ಮಾರಾಟ ನಿಷೇಧ ಆದೇಶ ಹೊರಡಿಸಿದ್ದಾರೆ. ಎ.24 ರಂದು ಸಂಜೆ 5 ಗಂಟೆಯಿಂದ ಎ.26 ರ ಮಧ್ಯರಾತ್ರಿ 12 ಗಂಟೆವರೆಗೆ ಮತ್ತು ಜೂ.3 ರಂದು ಸಂಜೆ 5 ಗಂಟೆಯಿಂದ ಜೂ.4 ರ ಮಧ್ಯರಾತ್ರಿ 12 ಗಂಟೆವರೆಗೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮಧ್ಯಗಳ ಸಾಗಣಿಕೆ, ಶೇಕರಣೆ

ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಮಧ್ಯಮಾರಾಟ ನಿಷೇಧ Read More »

ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಮೈಕ್ರೋವೇವ್​ ಟ್ಯೂಬ್​ ರಿಸರ್ಚ್ & ಡೆವಲಪ್​ಮೆಂಟ್ ಸೆಂಟರ್, ಡಿಫೆನ್ಸ್​ ರಿಸರ್ಚ್ & ಡೆವಲಪ್​ಮೆಂಟ್​ ಆರ್ಗನೈಜೇಶನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜೂನಿಯರ್ ರಿಸರ್ಚ್​ ಫೆಲೋ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2024 ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುತ್ತದೆ. ಸರ್ಕಾರಿ ಕೆಲಸ ಹುಡುಕ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಶೈಕ್ಷಣಿಕ ಅರ್ಹತೆ:ಮೈಕ್ರೋವೇವ್​ ಟ್ಯೂಬ್​

ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಈಗಲೇ ಅಪ್ಲೈ ಮಾಡಿ Read More »

BHELನಲ್ಲಿ ಉದ್ಯೋಗ ಅವಕಾಶ, ತಿಂಗಳಿಗೆ 95,000 ಸಂಬಳ!

ಸಮಗ್ರ ಉದ್ಯೋಗ: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಮೆಡಿಕಲ್ ಪ್ರಾಕ್ಟೀಕಷನರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 6, 2024 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವಿದ್ಯಾರ್ಹತೆ:ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್

BHELನಲ್ಲಿ ಉದ್ಯೋಗ ಅವಕಾಶ, ತಿಂಗಳಿಗೆ 95,000 ಸಂಬಳ! Read More »