April 2024

ಉಡುಪಿ: ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು-ರಕ್ಷಿತ್ ಶೆಟ್ಟಿ

ಸಮಗ್ರ ನ್ಯೂಸ್‌ : ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ವೋಟ್ ಮಾಡ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದರು. ಉಡುಪಿ ಕುಕ್ಕಿಕಟ್ಟೆ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ನೋಡಿ ವೋಟ್ ಹಾಕುತ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ […]

ಉಡುಪಿ: ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು-ರಕ್ಷಿತ್ ಶೆಟ್ಟಿ Read More »

ಹುಬ್ಬಳ್ಳಿ: ನೇಹಾ ಹಿರೇಮಠ ಮನೆಗೆ ಮಾಜಿ ಸಿಎಂ ಭೇಟಿ|ಕುಟುಂಬಕ್ಕೆ ಸಾಂತ್ವನ

ಸಮಗ್ರ ನ್ಯೂಸ್‌ : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿತಪ್ಪಿದೆ. ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದಿದ್ದರೆ, ಈಗಲೂ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇಂದು ನಿರಂಜನ ಹಿರೇಮಠ ಅವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವ ಕುರಿತು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನೇಹಾ ಹಿರೇಮಠಗೆ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿರಂಜನ್

ಹುಬ್ಬಳ್ಳಿ: ನೇಹಾ ಹಿರೇಮಠ ಮನೆಗೆ ಮಾಜಿ ಸಿಎಂ ಭೇಟಿ|ಕುಟುಂಬಕ್ಕೆ ಸಾಂತ್ವನ Read More »

ನಂಜನಗೂಡು: ಮತಗಟ್ಟೆ ಕೇಂದ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಭೇಟಿ

ಸಮಗ್ರ ನ್ಯೂಸ್‌ : ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಮತಗಟ್ಟೆ ಕೇಂದ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಭೇಟಿ ನೀಡಿದರು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಮಾಹಿತಿ ಪಡೆದರು. ಕಾರ್ಯಕರ್ತರ ಜೊತೆ ಕೆಲವು ಸಮಯ ಮಾತುಕತೆ ನಡೆಸಿ ತೆರಳಿದ್ದಾರೆ.

ನಂಜನಗೂಡು: ಮತಗಟ್ಟೆ ಕೇಂದ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಭೇಟಿ Read More »

ಉಡುಪಿ: ಮತದಾನದಿಂದ ದೂರ ಉಳಿದವರಿಗೆ ಪೌರತ್ವ ಕೊಡಬಾರದು- ಪೇಜಾವರ ಶ್ರೀ

ಸಮಗ್ರ ನ್ಯೂಸ್‌ : ನಮಗೆ ಬೇಕಾಗಿರುವ ಸರಕಾರ ರೂಪಿಸುವ ದೊಡ್ಡ ಬದ್ಧತೆ ಪ್ರಜೆಗಳ ಮೇಲೆ ಇದೆ. ಹೀಗಾಗಿ ಎಲ್ಲಾ ಪ್ರಜೆಗಳು ತಪ್ಪದೇ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡಿ ತುಂಬಾ ಹೆಮ್ಮೆ ಅನಿಸುತ್ತಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಾಗ ಅನುಭವಿಸಿದ ಧನ್ಯತಾಭಾವ ಈಗಲೂ ಅನುಭವಿಸಿದ್ದೇವೆ. ದೇಶದಲ್ಲಿ ಎಲ್ಲಾ ಬಗೆಯ ಜನ ಎಲ್ಲಾ ಕಾಲಕ್ಕೂ ಇರುತ್ತಾರೆ.

ಉಡುಪಿ: ಮತದಾನದಿಂದ ದೂರ ಉಳಿದವರಿಗೆ ಪೌರತ್ವ ಕೊಡಬಾರದು- ಪೇಜಾವರ ಶ್ರೀ Read More »

ಉಡುಪಿ-ಚಿಕ್ಕಮಗಳೂರು ಕ್ಷೇತ್ರ| ಸಂಜೆ 5ಗಂಟೆಗೆ ಶೇ. 72.13ರಷ್ಟು ಮತದಾನ

ಸಮಗ್ರ ನ್ಯೂಸ್‌ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಸಂಜೆ 5ಗಂಟೆಯ ವೇಳೆ ಶೇ. 72.13 ರಷ್ಟು ಮತದಾನವಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 73.53, ಕಾಪುವಿನಲ್ಲಿ ಶೇ.74.50, ಕುಂದಾಪುರದಲ್ಲಿ ಶೇ.74.28, ಉಡುಪಿಯಲ್ಲಿ ಶೇ.72.52, ಚಿಕ್ಕಮಗಳೂರಿನಲ್ಲಿ ಶೇ. 66.13, ಮೂಡುಗೆರೆಯಲ್ಲಿ ಶೇ. 73.48, ಶೃಂಗೇರಿಯಲ್ಲಿ ಶೇ. 75.02 ಹಾಗೂ ತರೀಕೆರೆಯಲ್ಲಿ ಶೇ. 69.06ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ತಿಳಿದುಬಂದಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರ| ಸಂಜೆ 5ಗಂಟೆಗೆ ಶೇ. 72.13ರಷ್ಟು ಮತದಾನ Read More »

ತುಮಕೂರು:ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ದಿಢೀರ್‌ ಹೃದಯಾಘಾತ

ಸಮಗ್ರ ನ್ಯೂಸ್‌ : ಮತ ಚಲಾಯಿಸಿ ಮನೆಗೆ ಬಂದವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ನಡೆದಿದೆ. 54 ವರ್ಷದ ರಮೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರಿಗೆ ತುಮಕೂರು ನಗರದಲ್ಲಿ ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು. ರಮೇಶ್ ಅವರು ಇಂದು ಬೆಳಗ್ಗೆ ತುಮಕೂರು ನಗರದ ಎಸ್.ಎಸ್ ಪುರಂನಲ್ಲಿರುವ ಮತಗಟ್ಟೆಗೆ ತೆರಳಿದ್ದರು. ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಹೋಗಿದ್ದ ರಮೇಶ್ ಅವರು ಮತ ಚಲಾಯಿಸಿ ಬಂದಿದ್ದರು. ಬಟ್ಟೆ ವ್ಯಾಪಾರಿ ರಮೇಶ್

ತುಮಕೂರು:ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ದಿಢೀರ್‌ ಹೃದಯಾಘಾತ Read More »

ಚಿತ್ರದುರ್ಗ:ಚುನಾವಣೆಯ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾವು

ಸಮಗ್ರ ನ್ಯೂಸ್‌ : ಚುನಾವಣಾ ಕರ್ತವ್ಯದ ವೇಳೆ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮೇಗಳ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ. ಸಾವನ್ನಪ್ಪಿದ ಸಿಬ್ಬಂದಿಯನ್ನು APRO ಯಶೋಧ (55) ಎಂದು ಗುರುತಿಸಲಾಗಿದೆ. ಯಶೋಧ ಮತಗಟ್ಟೆ ಸಂಖ್ಯೆ 202 ರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದರು. ಈ ವೇಳೆ APRO ಯಶೋದಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಯಶೋಧಮ್ಮ ಬೊಮ್ಮಸಮುದ್ರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ಯಶೋಧಮ್ಮ ಮೃತದೇಹ ರವಾನಿಸಲಾಗಿದೆ.

ಚಿತ್ರದುರ್ಗ:ಚುನಾವಣೆಯ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾವು Read More »

‘ನೋಟಾ’ಗೆ ಹೆಚ್ಚು ಮತಬಿದ್ದರೆ ಮರುಚುನಾವಣೆ ನಡೆಸಿ| ಚು.ಆಯೋಗಕ್ಕೆ ಸುಪ್ರೀಂ ನೊಟೀಸ್

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ಚುನಾವಣೆಯಲ್ಲಿ ನೋಟಾಗೆ ಅತಿ ಹೆಚ್ಚು ಮತ ಬಂದರೆ, ಆ ಕ್ಷೇತ್ರದಲ್ಲಿ ಹೊಸದಾಗಿ ಮರುಚುನಾವಣೆ ನಡೆಸಬೇಕು ಹಾಗೂ ನೋಟಾಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಯನ್ನು ಮರು ಚುನಾವಣೆಗೆ ನಿಷೇಧಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ನೋಟಾಗೆ ಹೆಚ್ಚು ಮತ

‘ನೋಟಾ’ಗೆ ಹೆಚ್ಚು ಮತಬಿದ್ದರೆ ಮರುಚುನಾವಣೆ ನಡೆಸಿ| ಚು.ಆಯೋಗಕ್ಕೆ ಸುಪ್ರೀಂ ನೊಟೀಸ್ Read More »

ತುಮಕೂರಿನಲ್ಲಿ ವೋಟ್ ಹಾಕಿದವರಿಗೆ 1 ರೂಪಾಯಿಗೆ ಟೀ ಮಾರಾಟ

ಸಮಗ್ರ ನ್ಯೂಸ್‌ : ತುಮಕೂರಿನ ಶೆಟ್ಟಿಹಳ್ಳಿ ಟೀ ಸ್ಟಾಲ್ ನಲ್ಲಿ ವೋಟ್ ಹಾಕಿದವರಿಗೆ ಮಾಲೀಕ ಬರೀ ಒಂದು ರೂಪಾಯಿಗೆ ಟೀ ನೀಡುತ್ತಿದ್ದಾರೆ. ಟೀ ಅಂಗಡಿ ಮಾಲಕ ಉಮೇಶ್ ಕುಮಾರ್ ಎಂಬವರು ಒಂದು ರೂಪಾಯಿ ಇಂದು ಟೀ ಮಾರಾಟ ಮಾಡುತ್ತಿದ್ದಾರೆ. ಯುವ ಮತದಾರರನ್ನು ಸೆಳೆಯುವ ಸಲುವಾಗಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಟೀ ಅಂಗಡಿ ಮಾಲೀಕ ಸ್ವಯಂ ಪ್ರೇರಿತ ಸೇವೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಮತ ಹಾಕಿ ಟೀ ಬಂದ ಮತದಾರರು ಇಲ್ಲಿ ಟೀ ಕುಡಿಯುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ

ತುಮಕೂರಿನಲ್ಲಿ ವೋಟ್ ಹಾಕಿದವರಿಗೆ 1 ರೂಪಾಯಿಗೆ ಟೀ ಮಾರಾಟ Read More »

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ| ಬೈಕ್ ಸವಾರ‌ ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಸಮೀಪದ ದೇವರಕೊಲ್ಲಿ ಬಳಿ ಕಾರು ಮತ್ತು ಬೈಕ್ ಮಧ್ಯೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣವನ್ನಪ್ಪಿದ ಘಟನೆ ಇಂದು (ಎ.26) ನಡೆದಿದೆ. ಮಡಿಕೇರಿಯಿಂದ ವಿಟ್ಲಕ್ಕೆ ಮತ ಚಲಾಯಿಸಲು ಬರುತ್ತಿದ್ದ ದೀಕ್ಷಿತ್ ಶೆಟ್ಟಿ ಎಂಬವರು ಚಲಾಯಿಸುತ್ತಿದ್ದ ಕಾರು ದೇವರಕೊಲ್ಲಿಯ ಗಾರೆಮುರಿ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ಕಳೆದು ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಡಿಕೇರಿಯ ಚೇರಂಬಾಣೆ ನಿವಾಸಿ

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ| ಬೈಕ್ ಸವಾರ‌ ಸ್ಥಳದಲ್ಲೇ ದುರ್ಮರಣ Read More »