ಸಮಗ್ರ ನ್ಯೂಸ್: ಹಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಟಿ20 ವಿಶ್ವಕಪ್ಗೆ(T20 World Cup 2024) ಟೀಮ್ ಇಂಡಿಯಾ ಪ್ರಕಟ ಯಾವಾಗ? ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ಇಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಭಾರತ ತಂಡವನ್ನು ಪ್ರಕಟಿಸಿದ್ದಾರೆ. ತಂಡವನ್ನು ರೋಹಿತ್ ಶರ್ಮ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಉಪನಾಯನಾಗಿದ್ದಾರೆ. ಆದರೆ ಇದರಲ್ಲಿ ಮುಖ್ಯವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಅವಕಾಶ ಸಿಕ್ಕಿಲ್ಲ.
ಪಂತ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಆಲ್ರೌಂಡರ್ ಕೋಟದಲ್ಲಿ ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಅವಕಾಶ ಸಿಕ್ಕಿದೆ. ರಿಷಭ್ ಪಂತ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, 2ನೇ ಕೀಪರ್ ಆಗಿ ಸಂಜು ಆಯ್ಕೆಯಾಗಿದ್ದಾರೆ.
ಟೀ- 20 ವಿಶ್ವಕಪ್ ಗೆ ಭಾರತದ ತಂಡ
ರೋಹಿತ್ ಶರ್ಮಾ (ನಾಯಕ)
ಹಾರ್ದಿಕ್ ಪಾಂಡ್ಯ ( ಉಪನಾಯಕ)
ವಿರಾಟ್ ಕೊಹ್ಲಿ
ಸೂರ್ಯಕುಮಾರ್ ಯಾದವ್
ರಿಷಭ್ ಪಂತ್
ಸಂಜು ಸ್ಯಾಮ್ಸನ್
ಶಿವಂ ದುಬೆ
ರವೀಂದ್ರ ಜಡೇಜಾ
ಚಾಹಲ್
ಅಕ್ಷರ್ ಪಟೇಲ್
ಕುಲದೀಪ್ ಯಾದವ್
ಯುಜ್ವೇಂದ್ರ ಚಾಹಲ್
ಅರ್ಶದೀಪ್ ಸಿಂಗ್,
ಜಸ್ಪ್ರೀತ್ ಬುಮ್ರಾ,
ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್