ರಾಮನಗರ: ಈಜಲು ಹೋಗಿದ್ದ ಐವರು ನೀರುಪಾಲು

ಸಮಗ್ರ ನ್ಯೂಸ್: ಈಜಲು ಹೋಗಿದ್ದ ಐವರು ಪ್ರವಾಸಿಗರು ನೀರುಪಾಲದ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ನಡೆದಿದೆ.

Ad Widget ... ..

ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹರ್ಷಿತಾ (18), ತೇಜಸ್ (19), ವರ್ಷಾ (18), ಸ್ನೇಹಾ (19), ಅಭಿಶೇಕ್ (19) ಮೃತರು. ಕಾವೇರಿ ನದಿಯಿಂದ ಅಗ್ನಿಶಾಮಕ ದಳ ಶವಗಳನ್ನ ಹೊರತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡಿದಿದೆ. ಅರಣ್ಯಾಧಿಕಾರಿಗಳು, ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Ad Widget

Leave a Comment

Your email address will not be published. Required fields are marked *