ಸಮಗ್ರ ನ್ಯೂಸ್ : ಪವಾಡ ಪುರುಷ ಮಲೆ ಮಹದೇಶ್ವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 34 ದಿನಗಳ ಅಂತರದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ, ಮೂರು ಕೋಟಿ ನಾಲ್ಕು ಲಕ್ಷದ ಐವತ್ತೇಳು ಸಾವಿರದ ಇನ್ನೂರು ನಲವತ್ತಾರು ರೂಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ, ಸಾಲೂರು ಬೃಹ್ಮನ್ಮಠಾಧಿಪತಿ ಶ್ರೀಶಾಂತ ಮಲ್ಲಿಕಾರ್ಜುನಸ್ವಾಮಿ ಸಾನಿಧ್ಯದಲ್ಲಿ ಹುಂಡಿ ಏಣಿಕೆ ಸೋಮವಾರ ಬೆಳಗ್ಗೆ 7 ಗಂಟೆಯಿಂದ ತಡರಾತ್ರಿ ತನಕ ನಡೆಯಿತು.
ಹುಂಡಿಯಲ್ಲಿ ಸಿಂಗಪೂರ್ ದೇಶದ 52 ಡಾಲರ್, ಡಿರಹ್ಮಸ್ 27 ಸೇರಿದಂತೆ, ಮೂರು ಕೋಟಿ ನಾಲ್ಕು ಲಕ್ಷದ ಐವತ್ತೇಳು ಸಾವಿರದ ಇನ್ನೂರು ನಲವತ್ತಾರು ರೂಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಜೊತೆಗೆ ಅಮಾನ್ಯಗೊಂಡ ಎರಡು ಸಾವಿರ ಮುಖ ಬೆಲೆಯ 22 ನೋಟುಗಳು, ಇ-ಹುಂಡಿಯಿಂದ 3 ಲಕ್ಷದ 53 ಸಾವಿರದ 441 ರೂಗಳು, 115 ಗ್ರಾಂ ಚಿನ್ನ, 2 ಕೆಜಿ 964 ಗ್ರಾಂ ಬೆಳ್ಳಿ ಆಭರಣಗಳು ಹುಂಡಿಯಲ್ಲಿ ದೊರೆತ್ತಿದೆ.
ಈ ವೇಳೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರ ನಾಗೇಶ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಮುಜರಾಯಿ ಶಾಖೆಯ ಸಂಗೀತ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.