ಟಿ20 ವಿಶ್ವಕಪ್/ ಇಬ್ಬರು ಮಕ್ಕಳಿಂದ ನ್ಯೂಜಿಲೆಂಡ್ ತಂಡ ಪ್ರಕಟ

ಸಮಗ್ರ ನ್ಯೂಸ್: ಜೂ.1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ 15 ಆಟಗಾರರ ತಂಡವನ್ನು ಪ್ರಕಟಿಸಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಮಕ್ಕಳಿಂದ ತಂಡವನ್ನು ಪ್ರಕಟಿಸಿದೆ. ಇಬ್ಬರೂ ಸುದ್ದಿಗೋಷ್ಠಿಗೆ ಆಗಮಿಸಿ ಆಟಗಾರರ ಹೆಸರನ್ನು ಘೋಷಿಸುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

Ad Widget ... ..

6ನೇ ಬಾರಿ ಟಿ20 ವಿಶ್ವಕಪ್‍ಗೆ ಆಯ್ಕೆಯಾಗಿರುವ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವ ವಹಿಸಲಿದ್ದು, ಟಿಮ್ ಸೌಥಿ 7ನೇ ಬಾರಿ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಫಿನ್ ಆಲೆನ್, ಬೌಲ್ಟ್, ಮೈಕಲ್ ಬ್ರೇಸ್‍ವೆಲ್, ಮಾರ್ಕ್ ಚಾಪ್ಮನ್, ಡೆವೋನ್ ಕಾನ್‍ವೇ, ಲಾಕಿ ಫಗ್ರ್ಯೂಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬೆನ್ ಸೀರ್ಸ್ ತಂಡದಲ್ಲಿದ್ದಾರೆ.

Ad Widget

ಕಳೆದ ಏಕದಿನ ವಿಶ್ವಕಪ್‍ಗೆ ಆಟಗಾರರ ಕುಟುಂಬಸ್ಥರಿಂದ ಕಿವೀಸ್ ತಂಡವನ್ನು ಪ್ರಕಟಿಸಲಾಗಿತ್ತು. ಇನ್ನು, ಈ ಬಾರಿ ಟಿ20 ವಿಶ್ವಕಪ್‍ಗೆ ನ್ಯೂಜಿಲೆಂಡ್‍ನ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗಿದೆ.

Leave a Comment

Your email address will not be published. Required fields are marked *