Ad Widget .

ಬಿಹಾರ: ಲೋಕಸಭಾ ಚುನಾವಣೆ ಪ್ರಚಾರ- ಪವನ್​ ಸಿಂಗ್​ ಕಾರಿನ ಗ್ಲಾಸ್​ ಪುಡಿ ಪುಡಿ

ಸಮಗ್ರ ನ್ಯೂಸ್‌ : 2024ರ ಲೋಕಸಭಾ ಚುನಾವಣೆಗೆ ಭೋಜ್​ಪುರಿ ಸೂಪರ್​ಸ್ಟಾರ್ ​ಪವನ್​ ಸಿಂಗ್​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಹಾರದ ಕರಕಟ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಟ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ರೋಡ್​ ಶೋ ನಡೆಸಿದ್ದಾರೆ.

Ad Widget . Ad Widget .

ರೋಡ್​ ಶೋ ವೇಳೆ ನಟನನ್ನು ಕಾಣಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಆದರೆ ಈ ವೇಳೆ ಅಭಿಮಾನಿಯೊಬ್ಬ ಪವನ್​ ಸಿಂಗ್​ ಕಾರು ಗ್ಲಾಸ್​ ಮೇಲೆ ಏರಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆದರೆ ಸೆಲ್ಫಿ ತೆಗೆಯುವ ಅವಾಂತರದಲ್ಲಿ ಪವನ್​ ಸಿಂಗ್​ ಪ್ರಚಾರದ ಕಾರಿನ ಗ್ಲಾಸ್​ ಪುಡಿ ಪುಡಿಯಾಗಿದೆ.

Ad Widget . Ad Widget .

ಕಾರಿನ ಗ್ಲಾಸ್​ ಪುಡಿಯಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ಹರಿದಾಡುತ್ತಿದೆ.

Leave a Comment

Your email address will not be published. Required fields are marked *