Ad Widget .

ಪ್ರತಿ ವರ್ಷ ಎನ್‍ಸಿಆರ್‍ಟಿ ಪಠ್ಯ ಪುಸ್ತಕ ಪರಿಷ್ಕರಣೆ/ ಕೇಂದ್ರ ಶಿಕ್ಷಣ ಇಲಾಖೆ ಸಲಹೆ

ಸಮಗ್ರ ನ್ಯೂಸ್: ಕೇಂದ್ರ ಶಿಕ್ಷಣ ಇಲಾಖೆಯು, ಶಿಕ್ಷಣದಲ್ಲಿ ನಿರಂತರ ಬದಲಾವಣೆಯ ಕಾರಣಕ್ಕಾಗಿ ಪ್ರತಿ ವರ್ಷ ಎನ್‍ಸಿಆರ್‍ಟಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಹೊಸ ವಿಚಾರಗಳನ್ನು ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಸಲಹೆ ನೀಡಿದೆ.

Ad Widget . Ad Widget .

ಹಿಂದಿನಿಂದಲೂ ಎನ್‍ಸಿಆರ್‍ಟಿ ಪಠ್ಯ ಕ್ರಮದಲ್ಲಿ ಕಾಲಕಾಲಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯಂತಹ ಪದ್ಧತಿ ಇರಲಿಲ್ಲ. ಆದರೆ ಇದೀಗ ಕಾಲ ವೇಗಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದು, ಪಠ್ಯಪುಸ್ತಕದಲ್ಲಿ ಬದಲಾವಣೆ ತರುವುದು ಅವಶ್ಯಕವೆಂದು ಇಲಾಖೆ ಹೇಳಿದೆ.

Ad Widget . Ad Widget .

ಒಮ್ಮೆ ಮುದ್ರಿಸಿದ ಪುಸ್ತಕವನ್ನು ಸುದೀರ್ಘ ವರ್ಷದ ತನಕ ಇಟ್ಟುಕೊಳ್ಳುವುದು ಸೂಕ್ತವಲ್ಲ. ಪ್ರತಿವರ್ಷ ಪುಸ್ತಕ ಮುದ್ರಿಸುವ ಮುನ್ನ ಪರಿಶೀಲಿಸಿ. ಕೃತಕ ಬುದ್ಧಿಮತ್ತೆಯಂತಹ ವಿಷಯಗಳು ವಿಕಸನಗೊಳ್ಳುವುದಕ್ಕೆ ನೆರವಾಗುತ್ತದೆ.

ಈ ವರ್ಷದಿಂದಲೇ ಆ ನಿಯಮವನ್ನು ಜಾರಿಗೆ ತರಲು ಸಲಹೆ ನೀಡಿದೆ. ಆದರೆ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಕಳೆದ ವರ್ಷದ ಪಠ್ಯಕ್ರಮಗಳ ಆಧಾರದಲ್ಲಿಯೇ ಪ್ರಸ್ತಕ ಸಾಲಿನ ಪಠ್ಯ ಪುಸ್ತಕಗಳನ್ನು ಈಗಾಗಲೇ ಸಿದ್ಧಪಡಿಸಿದೆ. ಹೀಗಾಗಿ ಮೂಲಗಳ, ಪ್ರಕಾರ ಪರಿಷ್ಕರಿಸಿದ ಹೊಸ ಪಠ್ಯಪುಸ್ತಕಗಳು 2026 ರ ವೇಳೆಗೆ ಸಿದ್ಧವಾಗಲಿದೆ .

Leave a Comment

Your email address will not be published. Required fields are marked *