Ad Widget .

ಕೆಲಸ ಹುಡುಕುತ್ತಾ ಇರುವ ಹೆಣ್ಮಕ್ಕಳಿಗೆ ಗುಡ್ ನ್ಯೂಸ್! ಇಲ್ಲಿದೆ ಬಂಪರ್ ಆವಕಾಶ

ಸಮಗ್ರ ಉದ್ಯೋಗ: ಕೆಲಸ ಹುಡುಕ್ತಿರೋ ಹೆಣ್ಣುಮಕ್ಕಳೇ ಇಲ್ಲಿದೆ ನೋಡಿ ಗುಡ್​ನ್ಯೂಸ್. ನೀವು 10ನೇ ತರಗತಿ, ಪಿಯುಸಿ, ಡಿಗ್ರಿ ಮುಗಿಸಿದ್ರೆ ಈ ಕೆಲಸ ನಿಮಗೇ ಫಿಕ್ಸ್ ಅಂತ ಅನ್ಕೊಳಿ. ಬಿಡದಿಯ ಅಂತರಾಷ್ಟ್ರೀಯ ಕಾರು ಉತ್ಪಾದನಾ ಘಟಕದಲ್ಲಿ ಹೆಣ್ಣುಮಕ್ಕಳಿಗೆ ಸುವರ್ಣಾಕಾಶವಿದೆ. ಅವರೇ ನಿಮಗೆ ಉಚಿತ ತರಬೇತಿ ನೀಡಿ, ಅವರೇ ಉದ್ಯೋಗ ಸೃಷ್ಟಿ ಮಾಡಿಕೊಡುತ್ತಾರೆ. ಈ ಅವಕಾಶ ಹೆಣ್ಣುಮಕ್ಕಳಿಗೆ ಮಾತ್ರ. ತಡಮಾಡದೇ ಈಗಲೇ ಅರ್ಜಿ ಹಾಕಿ.

Ad Widget . Ad Widget .

ಹೌದು, ಬೆಂಗಳೂರಿಗೆ ಸಮೀಪದಲ್ಲಿರುವ ಬಿಡದಿಯಲ್ಲಿ ಟೊಯೋಟಾ ಕಿರ್ಲೋಸ್ಕರ್​ ಅಂತರಾಷ್ಟ್ರೀಯ ಕಾರು ಉತ್ಪಾದನಾ ಘಟಕ ಮಹಿಳೆಯರಿಗೆ ಉಚಿತವಾಗಿ 2 ವರ್ಷಗಳ ಕೌಶಲ್ಯ ತಾಂತ್ರಿಕ ತರಬೇತಿಯನ್ನು ನೀಡುತ್ತಿದೆ. 2030ರೊಳಗೆ ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿಸಲು ಮಹಿಳೆಯರಿಗಾಗಿಯೇ ಉಚಿತ ತರಬೇತಿ ನೀಡಲು ಟೊಯೋಟಾ ಸಂಸ್ಥೆಯು ಮುಂದಾಗಿದೆ. ಸ್ತ್ರೀ ಸಬಲೀಕರಣದ ಭಾಗವಾಗಿ ಈ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.

Ad Widget . Ad Widget .

2 ವರ್ಷಗಳ ಕಾಲ ಉಚಿತ ಕೌಶಲ್ಯ ತಾಂತ್ರಿಕ ತರಬೇತಿಗೆ ಸೇರಿಕೊಂಡರೆ ಕೆಲವು ಲಾಭಗಳೂ ಸಹ ಇವೆ. ಅಭ್ಯರ್ಥಿಗಳಿಗೆ ಉಚಿತ ಊಟದ ಜೊತೆಗೆ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಇದಲ್ಲದೇ ESI & PF ಸೌಲಭ್ಯ ಕೂಡ ಇರುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ:
ಇನ್ನು, ಈ ತರಬೇತಿಗೆ ಸೇರಬಯಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ ದ್ವಿತೀಯ ಪಿಯುಸಿ/ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ/ಸ್ಟೈಪೆಂಡ್
ಇಲ್ಲಿ ತರಬೇತಿಗೆ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ ಮೊದಲ ವರ್ಷ ಪ್ರತಿ ತಿಂಗಳು 14,500 ಮತ್ತು 2ನೇ ವರ್ಷ ಪ್ರತಿ ತಿಂಗಳು 15,500 ರೂ. ಸ್ಟೈಪೆಂಡ್ ಕೊಡಲಾಗುತ್ತದೆ.

ಪ್ರಮುಖ ಸೂಚನೆ:
ಇಲ್ಲಿ ತರಬೇತಿ ಪಡೆದ ಕೆಲವು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ 1 ವರ್ಷ ಬೇರೆ ತರಬೇತಿ ನೀಡಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳು ತಮ್ಮ ಉತ್ತಮ ಕೌಶಲ್ಯವನ್ನು ತೋರಿಸಿದರೆ, ಅಂತಹವರನ್ನು ಟೊಯೋಟಾ ಕಿರ್ಲೋಸ್ಕರ್ ಕಂಪನಿಯವರೇ ಉದ್ಯೋಗಕ್ಕಾಗಿ ವಿದೇಶಕ್ಕೆ ಕಳುಹಿಸಿಕೊಡುತ್ತಾರೆ. ಮತ್ಯಾಕೆ ತಡ? ಆಸಕ್ತರು ಈಗಲೇ ಅರ್ಜಿ ಹಾಕಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 8431872105, 7022871540 ಗೆ ಸಂಪರ್ಕಿಸಬಹುದು.

(ಇಲ್ಲಿ ನೀಡಿರುವ ಮಾಹಿತಿಯು ಸಾರ್ವಜನಿಕ ಆಸಕ್ತಿ ಮೇಲೆ‌ ಪ್ರಕಟಿಸಲಾಗಿದೆ. ಅದಾಗ್ಯೂ ಇದರ ನಿಖರತೆಯನ್ನು ಸಮಗ್ರ ಸಮಾಚಾರ ಖಾತರಿ ಪಡಿಸುವುದಿಲ್ಲ – ಸಂ)

Leave a Comment

Your email address will not be published. Required fields are marked *