Ad Widget .

ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯಿಂದ ಅಶಕ್ತ ಕುಟುಂಬಗಳಿಗೆ ಟೇಬಲ್ ಫ್ಯಾನ್ ಕೊಡುಗೆ

ಸಮಗ್ರ ನ್ಯೂಸ್: ಬಿಸಿಲಿನ ಝಳ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ, ದಿನಕೂಲಿ ನಡೆಸಿ ಜೀವನ ಸಾಗಿಸುವ ಮನೆಗಳಲ್ಲಿನ ಅಶಕ್ತರು ಮತ್ತು ಅನಾರೋಗ್ಯಗಳಿಂದ ಬಳಲುತ್ತಿರುವ, ಕನಿಷ್ಠ ಫ್ಯಾನ್ ಹೊಂದಿರದ ಕುಟುಂಬಗಳನ್ನು ಗಮನಿಸಿದ ಬಾಳುಗೋಡು ಗ್ರಾಮದ ಕಾಂಗ್ರೆಸ್ ಸಮಿತಿಯ ಸದಸ್ಯರು ಕಡುಬಡತನದಲ್ಲಿ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ, ರೇಷನ್ ಕಾರ್ಡ್ ತಿದ್ದುಪಡಿಯಾಗದೇ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಯಿಂದ ವಂಚಿತರಾದ ನಾಲ್ಕು ಮನೆಗಳನ್ನು ಗುರುತಿಸಿ ಅವರ ಮನೆಗಳಿಗೆ ಮಾನವೀಯ ನೆಲೆಯಲ್ಲಿ ಟೇಬಲ್ ಫ್ಯಾನ್ ಕೊಡುಗೆ ನೀಡಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿಕುಮಾರ್ ಕಿರಿಭಾಗ, ದಯಾನಂದ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ, ರಾಮಕೃಷ್ಣ ಕಟ್ಟೆಮನೆ, ಚೇತನ್ ಕಜೆಗದ್ದೆ, ಮಂಜುನಾಥ ಕಿರಿಭಾಗ, ಭಾಸ್ಕರ್ ದೋಲ್ಪಾಡಿ, ಶೇಷಪ್ಪ ಗೋರ್ತಿಲ ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *