Ad Widget .

ಬೀದರ್ : 5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಸಮಗ್ರ ನ್ಯೂಸ್ : ಅಬಕಾರಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಗರದ ಮಾಂಗರವಾಡಿ ಗಲ್ಲಿಯ ಮನೆಯೊಂದರ ಮೇಲೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ದಾಳಿ ನಡೆಸಿ 1.5 ಲಕ್ಷ ಮೌಲ್ಯದ ನಶೆ ಗುಳಿಗೆಯನ್ನು ವಶಕ್ಕೆ ಪಡೆದಿದೆ.

Ad Widget . Ad Widget .

ಮಾಂಗರವಾಡಿಯ ಅಶೋಕ ಮತ್ತು ವಿಕಾಸ್ ಮನೆಯ ಮೇಲೆ ದಾಳಿ ಮಾಡಿ 3065 ನಶೆ ಬರೋ ಡ್ರೆಮಿಡಾಲ್ ಕ್ಯಾಪಸೂಲ್ ವಶಕ್ಕೆ ಪಡೆದಿದೆ.

Ad Widget . Ad Widget .

ದಾಳಿ ಸಂಧರ್ಭದಲ್ಲಿ ಆರೋಪಿ ಅಶೋಕ ಮತ್ತು ವಿಕಾಸ ಪರಾರಿಯಾಗಿದ್ದಾರೆ. ಮನೆ ಪರಿಶೀಲನೆ ನಡೆಸಿದ ಅಬಕಾರಿ ಅಧಿಕಾರಿಗಳು 3065 ನಶೆ ಮಾತ್ರೆ ಜಪ್ತಿ ಮಾಡಿದ್ದಾರೆ.

ದಾಳಿಯಲ್ಲಿ ಅಬಕಾರಿ ಡಿಸಿ ಆಯುಕ್ತ ಸಂಗನಗೌಡ ಹೊಸಳ್ಳಿ, ಅಬಕಾರಿ ಉಪ ಆಯುಕ್ತರಾದ ರವಿ ಮುರಗೋಡ್,ಹಣಮಂತ ಗುತ್ತೆದಾರ ಹಾಗೂ ಅಬಕಾರಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಅಬಕಾರಿ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *