ತೆಲಂಗಾಣ : ಐಪಿಎಲ್ ಬೆಟ್ಟಿಂಗ್ನಲ್ಲಿ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಐಪಿಎಲ್ ಬೆಟ್ಟಿಂಗ್ನಿಂದ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Ad Widget ... ..

ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ವಿನೀತ್ ಎಂದು ಗುರುತಿಸಲಾಗಿದೆ. ವಿನೀತ್ ಬಿಟೆಕ್ ವಿದ್ಯಾರ್ಥಿಯಾಗಿದ್ದು, ಸದಾಶಿವಪೇಟೆಯ ಸಂಗರೆಡ್ಡಿ ಜಿಲ್ಲೆಯವನಾಗಿದ್ದಾನೆ. ಈತ ಆನ್ಲೈನ್ ಐಪಿಎಲ್ ಬೆಟ್ಟಿಂಗ್ನಲ್ಲಿ 10 ಲಕ್ಷ ಕಳೆದುಕೊಂಡಿದ್ದನು.

Ad Widget

ಐಪಿಎಲ್ ಬೆಟ್ಟಿಂಗ್ಗಾಗಿ ವಿನೀತ್ ಲೋನ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದನು. ಆದರೆ ಐಪಿಎಲ್ ಗೋಜಿಗೆ ಬಿದ್ದು ಬೆಟ್ಟಿಂಗ್ ಮೇಲೆ ಬೆಟ್ಟಿಂಗ್ ಕಟ್ಟುತ್ತಾ ಕೊನೆಗೆ 10 ಲಕ್ಷದವರೆಗೆ ಸಾಲ ಮಾಡಿದ್ದಾನೆ.

ಕೊನೆಗೆ ಸಾಲ ತೀರಿಸಲು ಹಣವಿಲ್ಲದೆ ವಿನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *