Ad Widget .

ಚಂಡಿಗಢ : ಮನೆಯ ಶ್ವಾನ ನಾಪತ್ತೆ- ಬೇಸರದಿಂದ 12 ವರ್ಷದ ಬಾಲಕಿ ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಪ್ರೀತಿಯ ಶ್ವಾನ ನಾಪತ್ತೆಯಾಗಿದೆ ಎಂದು ಬೇಸರ ಗೊಂಡು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

Ad Widget . Ad Widget .

ನಿನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊರಗೆ ಹೋಗಿದ್ದ ತಾಯಿ ಬಂದ ಕೂಡಲೇ ಇದನ್ನು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆ ಆಕೆ ಮೃತಪಟ್ಟಿದ್ದಳು

Ad Widget . Ad Widget .

ಶ್ವಾನ ನಾಪತ್ತೆಯಾಗಿದೆ ಎಂದು ಕೆಲವು ದಿನಗಳಿಂದ ಆಕೆ ಕೊರಗುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಐದು ದಿನಗಳ ಹಿಂದೆ ನಮ್ಮ ಸಾಕು ನಾಯಿ ಕಾಣೆಯಾಗಿತ್ತು. ಈ ಶ್ವಾನ ಮತ್ತು ಬಾಲಕಿಯ ಮಧ್ಯೆ ಸುಮಾರು 3 ತಿಂಗಳಿಂದ ಉತ್ತಮ ಬಾಂಧವ್ಯ ವಿತ್ತು. ಶ್ವಾನ ಕಾಣೆಯಾದಾಗಿನಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಬಳಿಕ ತೀವ್ರ ಚಿಂತೆಗೆ ಒಳಗಾಗಿದ್ದ ಅವಳು ಸರಿಯಾಗಿ ಆಹಾರವನ್ನೂ ಸೇವಿಸುತ್ತಿರಲಿಲ್ಲ. ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ನಾಯಿಮರಿಯನ್ನು ಕಳೆದುಕೊಂಡ 6ನೇ ತರಗತಿಯ ವಿದ್ಯಾರ್ಥಿನಿಯ ದುಃಖವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ನಿನ್ನೆ ನಾನು ತರಕಾರಿ ಖರೀದಿಗಾಗಿ ಹೊರ ಹೋಗಿದ್ದೆ. ಈ ವೇಳೆ ನಮ್ಮ ನೆರೆಯವರು ಕರೆ ಮಾಡಿ ಕೂಡಲೇ ಆಗಮಿಸುವಂತೆ ಹೇಳಿದ್ದರು. ಕೂಡಲೇ ಮನೆಗೆ ಧಾವಿಸಿ ಬಂದಿದ್ದೆ. ಈ ವೇಳೆ ಆಕೆ ಮೃತಪಟ್ಟಿದ್ದಳುʼʼ ಎಂದು ಬಾಲಕಿ ತಾಯಿ ನೋವಿನಿಂದ ಹೇಳಿದ್ದಾರೆ.

Leave a Comment

Your email address will not be published. Required fields are marked *