ವಿಜಯಪುರ : ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್

ಸಮಗ್ರ ನ್ಯೂಸ್‌ : ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಭೇಟಿಯಾದರು.

Ad Widget ... ..

ಈ ಸಂದರ್ಭ ಶಿವಪುತ್ರಪ್ಪ ಅವರಿಂದ ಶುಭಾಶಯ ಹಾಗೂ ಅನೇಕ ಸಲಹೆಗಳನ್ನು ಆಲಗೂರರು ಪಡೆದರು. ನಿಮ್ಮ ಹಾಗೂ ಪಕ್ಷದ ಪರ ಒಳ್ಳೆಯ ವಾತಾವರಣ ಇದೆ. ಜನ ಈ ಸಲ ಬದಲಾವಣೆ ಬಯಸಿದ್ದಾರೆ. ಅವರು ಬೇಸತ್ತಿದ್ದಾರೆ. ಜನಗಳಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿದೆ. ನೀವು ಖಂಡಿತ ವಿಜಯಶಾಲಿಯಾಗುತ್ತೀರಿ ಎಂದು ದೇಸಾಯಿಯವರು ಹರಸಿದ್ದಾರೆ.

Ad Widget

ಹಾಗೆಯೇ ಅಂದಿನ ದಿನಗಳ ರಾಜಕಾರಣವನ್ನು ಅವರು ಮೆಲುಕು ಹಾಕಿದರು. ನೀವು ಸಂಸದರಾಗಿ ಆಯ್ಕೆಯಾದರೆ ಜನಹಿತ ಕಾಪಾಡಿ ಎಂದು ಕಿವಿ ಮಾತನ್ನು ಹೇಳಿದರು. ಗುಂಡಕನಾಳ ಶ್ರೀಗಳು, ಶಾಸಕರಾದ ಅಪ್ಪಾಜಿ ನಾಡಗೌಡ, ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ.ಮಹಾಂತೇಶ ಬಿರಾದಾರ ಸೇರಿದಂತೆ ಅನೇಕರು ಈ ವೇಳೆ ಇದ್ದರು.

Leave a Comment

Your email address will not be published. Required fields are marked *