7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಕಾಮುಕರಿಂದ ಅತ್ಯಾಚಾರಕ್ಕೆ ಯತ್ನ… ಸ್ಥಳೀಯರಿಂದ ರಕ್ಷಣೆ

ಸಮಗ್ರನ್ಯೂಸ್:ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಸ್ಥಳೀಯರಿಗೆ ಮಾಹಿತಿ ಗೊತ್ತಾಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಇಬ್ಬರು ಯುವಕರಿಗೆ ಧರ್ಮದೇಟು ನೀಡಿದ್ದಾರೆ. ಒಬ್ಬ ಆರೋಪಿ ಮಾತ್ರ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.ಇನ್ನೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Ad Widget ... ..

ಈ ಘಟನೆ ಬೆಂಗಳೂರಿನ ಕಾಡುಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕೋಲೆಟ್ ಮತ್ತು ಬೊಂಬೆ ಕೊಡಿಸುತ್ತೇನೆ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಈ ಕಾಮುಕರು ಕರೆದೊಯ್ದಿದ್ದಾರೆ. ಮನೆಯಲ್ಲಿ ಹೆಣ್ಣುಮಗಳನ್ನು ವಿವಸ್ತ್ರಗೊಳಿಸಿದ್ದರು. ಆದರೆ, ಈ ಯುವಕರ ವರ್ತನೆಯನ್ನು ದೂರದಿಂದಲೇ ಗಮನಿಸಿದ್ದ ಸ್ಥಳೀಯರಿಗೆ ಇವರ ಮೇಲೆ ಅನುಮಾನ ಬಂದಿದು, ಯಾವಾಗ ಈ ಯುವಕರು ಆ ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡರೋ ಆ ತಕ್ಷಣ ಸ್ಥಳೀಯರು ಆ ಮನೆಗೆ ದೌಡಾಯಿಸಿದ್ದಾರೆ. ಮನೆ ಬಾಗಿಲು ಬಡಿದು ಹೊರಗೆ ಬರುವಂತೆ ಕೂಗಿದ್ದಾರೆ .

Ad Widget

ಆದರೆ ಎಷ್ಟೇ ಬಾಗಿಲು ಬಡಿದರೂ ಯುವಕರು ಕೆಲ ಸಮಯ ಬಾಗಿಲು ತೆಗೆಯಲಿಲ್ಲ. ಕೊನೆಗೆ ಬಾಗಿಲು ಒಡೆಯುವ ಬೆದರಿಕೆಯನ್ನೂ ಒಡ್ಡಲಾಯಿತು. ಸ್ವಲ್ಪ ಸಮಯದ ಬಳಿಕ ಯುವಕರು ಬಾಗಿಲು ತೆಗೆದಿದ್ದಾರೆ. ಆಗ ಯುವಕರನ್ನು ಹಿಡಿದುಕೊಂಡ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಅಷ್ಟರಲ್ಲಿ ಒಬ್ಬ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇವರಿಬ್ಬರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *