Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದೆ, ಈ ವಾರ ಏಪ್ರಿಲ್ 27ರಿಂದ ಮೇ 4 ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

Ad Widget . Ad Widget .

ಮೇಷ ರಾಶಿ:
ಮೇ ತಿಂಗಳ ಮೊದಲ‌ ವಾರ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭವಿದೆ. ನಿಮ್ಮ ರಾಶಿಯಲ್ಲಿ ಉಚ್ಚನಾಗಿ ರವಿ ಇರುವುದು ನಿಮಗೆ ಶುಭ.‌ ವ್ಯಾವಹಾರಿಕವಾದ ಪ್ರಗತಿ ಇರುವುದು. ದ್ವಿತೀಯ ರಾಶಿಗೆ ಗುರುವಿನ ಪ್ರವೇಶವು ಆಗಲಿದೆ. ಸಂಪತ್ತಿನ ಸಮೃದ್ಧಿಯು ಸಿಗಲಿದೆ. ಸಂಪತ್ತು ಸಿಗುವ ಕಡೆ ನಿಮ್ಮ‌ ಪ್ರಯಾಣ ಇರಲಿದೆ. ಬುಧನು ನೀಚನಾಗಿ ವ್ಯಯದಲ್ಲಿ ಇರುವ ಕಾರಣ ದೈಹಿಕ‌ ತೊಂದರೆ‌ ಕಾಣಿಸುವುದು. ದೇಹಪೀಡೆಯನ್ನು ಔಷಧೋಪಚಾರದಿಂದ ಕಡಿಮೆ‌ಮಾಡಿಕೊಳ್ಳಿ. ಸುಬ್ರಹ್ಮಣ್ಯನು ಸಕಲ ಇಷ್ಟಾರ್ಥವನ್ನು ಕೊಡುವನು.

Ad Widget . Ad Widget .

ವೃಷಭ ರಾಶಿ:
ಮೇ ತಿಂಗಳ ಮೊದಲ ವಾರವು ರಾಶಿ ಚಕ್ರದ ಎರಡನೇ ರಾಶಿಗೆ ಸಾಧಾರಣವಾಗಿ ಇರಲಿದೆ. ಗುರುವು ನಿಮ್ಮ ರಾಶಿಗೇ ಬರುವ ಕಾರಣ ಮಾನಸಿಕವಾದ ನೆಮ್ಮದಿ ಇದ್ದರೂ ಕಾರ್ಯಗಳು ಕೈಗೂಡದು.‌ ಅಂದುಕೊಂಡಿದ್ದನ್ನು ಸುಲಭವಾಗಿ ಪೂರೈಸಲಾಗದು. ತಂದೆಯ ಕಾರಣದಿಂದ ಧನನಷ್ಟವಾಗುವ ಸಂಭವವು ಇದೆ. ಉದ್ಯೋಗಕ್ಕೆ ತೆರಳಲು ಆಸಕ್ತಿ ಇರದು. ಎಲ್ಲ ವನ್ನೂ ಸ್ವತಂತ್ರವಾಗಿ ಮಾಡುತ್ತೇನೆ ಎಂಬ ಹುಂಬುತನ ಬೇಡ. ಮಕ್ಕಳಿಂದ ಕಿರಿಕಿರಿ ಆಗುವುದು ಅಥವಾ ಮಕ್ಕಳಿಲ್ಲ‌ ಎಂಬ ಕಿರಿಕಿರಿಯೂ ಇರುವುದು. ಸಂತಾನ ಲಕ್ಷ್ಮಿಯ ಉಪಾಸನೆ ಮಾಡಿ.

ಮಿಥುನ ರಾಶಿ:
ರಾಶಿ ಚಕ್ರದ ಮೂರನೇ ರಾಶಿಯವರಿಗೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗುರುವು ಏಕಾದಶದಿಂದ ದ್ವಾದಶ ಸ್ಥಾನಕ್ಕೆ ಬರಲಿದ್ದಾನೆ. ಬೇಡ ವಿಚಾರಕ್ಕೆ ತಲೆ ಹಾಕುವುದು ಸಹಜವಾಗಿರುವುದು. ಉದ್ಯೋಗದಲ್ಲಿಯೂ ನಿಮಗೆ ಹಿನ್ನಡೆ, ಬೇಸರವು ಕಾಣಿಸುವುದು. ಬಂಧುಗಳಿಂದ ನಿಮಗೆ ಸಹಕಾರವಾದಂತೆ ಅನ್ನಿಸುತ್ತದೆ. ಹಿತಶತ್ರುಗಳಿಂದ ದೂರವಿರಬೇಕಾಗಿದ್ದರೂ ಇರಲಾಗದು. ಸಂಗಾತಿಯ ಅಲಕ್ಷ್ಯಕ್ಕೆ ಗುರಿಯಾಗುವಿರಿ. ಸಜ್ಜನರ ಸಹವಾಸವೂ ಸಿಗದೇಹೋಗುವುದು. ದೇವತಾರಾಧನೆಗೆ ಹೆಚ್ಚು ಒತ್ತುಕೊಟ್ಟು ನಿಮ್ಮ ಸಂಕಟವನ್ನು ಕಡಿಮೆ ಮಾಡಿಕೊಳ್ಳಿ.

ಕಟಕ ರಾಶಿ:
ಮೇ ತಿಂಗಳ ಮೊದಲನೇ ವಾರವು ರಾಶಿ ಚಕ್ರದ ನಾಲ್ಕನೆಯ ರಾಶಿಯವರಿಗೆ ಉತ್ತಮ ಫಲವು ಇರಲಿದೆ. ಗುರುವು ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ನಿಮ್ಮ ಜೀವನದ ದಿಕ್ಕು ಬದಲಾವಣೆಯ ಕಡೆ ತಿರುಗಲಿದೆ.‌ ಕಷ್ಟಗಳಿಂದ ಮುಕ್ತಿ ಹಾಗೂ ಇಷ್ಟಗಳ ಪ್ರಾಪ್ತಿಯಾಗುವ ಸಮಯ. ಅತಿಯಾದ ಉತ್ಸಾಹ, ಹುಂಬುತನ ತೋರದೇ ಸಾವಧಾನತೆಯಿಂದ ಹೆಜ್ಜೆ ಇಡಿ. ಹೂಡಿಕೆಯಲ್ಲಿ ನಿಮಗೆ ಆಸಕ್ತಿ ಹೆಚ್ಚು ಇರುವುದು. ಗೌರವಾದಿಗಳು ಬಯಸಿದರೂ ಈ ವಾರ ಪಡೆದುಕೊಳ್ಳುವುದು ಕಷ್ಟ. ಮಹಾವಿಷ್ಣುವಿನ ಉಪಾಸನೆಯನ್ನು ಅಗತ್ಯವಾಗಿ ಮಾಡಿ.

ಸಿಂಹ ರಾಶಿ:
ಈ ವಾರ ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲವು ಪ್ರಾಪ್ತಿಯಾಗಲಿದೆ. ಬುಧನು ನೀಚನಾಗಿದ್ದುದರಿಂದ ರೋಗಗಳು ಕಾಣಿಸಿಕೊಳ್ಳುವುದು. ಸರ್ಕಾರದ ಕಡೆಯಿಂದ ಆಗುವ ಕೆಲಸಕ್ಕೆ ಯಾರದ್ದಾದರೂ ಸಹಕಾರ ನಿಮಗೆ ಸಿಗಲಿದೆ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಹಣವನ್ನು ಖರ್ಚು ಮಾಡುವಾಗ ಯೋಚನೆ ಇರಲಿ.‌ ಪುನಃ ಹಣವು ಬರುವ ಕಡೆ ನಿಮ್ಮ ಗಮನ ಇರಲಿ. ವೈವಾಹಿಕ ಜೀವನವು ಹದ ತಪ್ಪುವ ಸಾಧ್ಯತೆ ಇದ್ದು, ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ನಿಮಗೆ ಗೊತ್ತಾಗಲಿದೆ. ಶಿವಕವಚವನ್ನು ಪಠಿಸಿ, ಬರಬಹುದಾದ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಿ.

ಕನ್ಯಾ ರಾಶಿ:
ರಾಶಿ ಚಕ್ರದ ಆರನೇ ರಾಶಿಯಾಗಿರುವವರಿಗೆ ಶುಭ ವಾರ್ತೆಗಳನ್ನು ಕೇಳುವ ದಿನಗಳು ಆರಂಭವಾಗಲಿವೆ. ವಿವಾಹಾದಿಗಳಿಗೆ ಸದ್ಯ ತೊಂದರೆಗಳಿದ್ದರೂ ಅದು ಕ್ಷಣಿಕವಾಗಿದೆ. ನೆಮ್ಮದಿಗೆ ಪೂರಕವಾದ ವಾತಾವರಣವು ನಿಮಗೆ ಸಂತೋಷವನ್ನು ಕೊಡುವುದು. ಗುರುವು ಅಷ್ಟಮದಿಂದ‌ ನವಮಸ್ಥಾನಕ್ಕೆ ಬರುತ್ತಿರುವುದು ನಿಮಗೆ ಶುಭವೇ ಆಗಲಿದೆ. ಪೂರ್ವಾರ್ಜಿತ ಪುಣ್ಯವು ಫಲಿಸಲಿದ್ದು, ನೆಮ್ಮದಿ, ಗೌರವ, ಸಂಪತ್ತುಗಳಿಂದ ಸಂತೋಷಪಡುವಿರಿ. ಹಿರಿತನಕ್ಕೆ ಯೋಗ್ಯತೆಯೂ ಬರಲಿದೆ. ವಿವಾಹಕ್ಕೆ ಬೇಕಾದಂತೆ ಸ್ವಯಂ ವರಪಾರ್ವತಿಯ ಸ್ತೋತ್ರವನ್ನು ಮಾಡಿ.

ತುಲಾ ರಾಶಿ:
ಮೇ ತಿಂಗಳ ಮೊದಲ ವಾರದಲ್ಲಿ ರಾಶಿ ಚಕ್ರದ ಏಳನೇ ರಾಶಿಗೆ ಮಿಶ್ರಫಲವು ಕಾಣಿಸುವುದು. ರವಿ ಹಾಗು ಶುಕ್ರರು ಸಪ್ತಮದಲ್ಲಿ ಇದ್ದುದು ಸಂಗಾತಿಯ ವಿಚಾರದಲ್ಲಿ ಅನೇಕ‌ ಗೊಂದಲಗಳು ಕಾಣಿಸುವುದು.‌ ವಿವಾಹವಾಗಲು ಬಯಸಿದರೆ ಯಾರಿಂದಲಾದರೂ ಪ್ರತಿಬಂಧಕ ಆಗುವ ಸಾಧ್ಯತೆಯೇ ಹೆಚ್ಚು. ಗುರುಬಲವು ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗುವಿಕೆಯನ್ನು ಆರಂಭದಲ್ಲಿಯೇ ನೋಡಬಹುದು. ಬಂಧುಗಳೇ ನಿಮಗೆ ಶತ್ರುಗಳೂ ಆಗುವರು. ದುರ್ಗಾರ್ತಿನಾಶಿನಿಯಾದ ದುರ್ಗಾಪರಮೇಶ್ವರಿಯನ್ನು ಅನನ್ಯ ಭಕ್ತಿಯಿಂದ ಪೂಜಿಸಿ.

ವೃಶ್ಚಿಕ ರಾಶಿ:
ಈ ರಾಶಿಯು ರಾಶಿ ಚಕ್ರದ ಎಂಟನೇ ರಾಶಿಯಗಿದೆ. ಈ ತಿಂಗಳ‌ ಮೊದಲನೇ ವಾರ ಶುಭಾಶುಭ ವಾರವಾಗಲಿದೆ. ಸೂರ್ಯನು ಷಷ್ಠದಲ್ಲಿ ಇರುವುದರಿಂದ ಸರ್ಕಾರದ ಅಧಿಕಾರಿಗಳಿಂದ ತೊಂದರೆ ಬರುವುದು.‌ ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಬೇಕಾಗುವುದು. ದಾಖಲಾತಿಗಳನ್ನು ಕೊಡುವುದು ಸೂಕ್ತ. ಗುರುವು ಸಪ್ತಮಕ್ಕೆ ಹೋಗುತ್ತಿರುವುದರಿಂದ ನಿಮ್ಮ ಮಾನಸಿಕ ಸ್ಥಿತಿ ದೃಢವಾಗಿರಲಿದೆ. ವಿವಾಹಕ್ಕೆ ಉತ್ತಮ‌ ಸಂಬಂಧವು ಕೂಡಿ ಬರುವುದು. ಕುಜ ಹಾಗೂ ಬುಧರು ಪಂಚಮದಲ್ಲಿ ಇರುವುದು ಮಕ್ಕಳ ವಿಚಾರಕ್ಕೆ ಅಸಮಾಧಾನ ಬರುವುದು. ಕಾರ್ತಿಕೇಯನಿಗೆ ಪ್ರಿಯವಾಗುವ ಸ್ತೋತ್ರವನ್ನು ಪಠಿಸಿ.

ಧನು ರಾಶಿ:
ಮೇ ತಿಂಗಳ ಮೊದಲನೇ ವಾರ ರಾಶಿ ಚಕ್ರದ ಒಂಭತ್ತನೆಯ ರಾಶಿಯವರಿಗೆ ಈ ವಾರ ಮಿಶ್ರಫಲವು ಇರುವುದು. ಪಂಚಮದಲ್ಲಿ ಇದ್ದ ಗುರುವು ಷಷ್ಠಕ್ಕೆ ಹೋಗಲಿದ್ದು ಆರೋಗ್ಯದಲ್ಲಿ ವ್ಯತ್ಯಾಸ ಆಗುವುದು. ಸ್ತ್ರೀಯರು ನಿಮಗೆ ಶತ್ರುವಾಗುವರು. ಸಜ್ಜನರ ವಿರೋಧವು ಉಂಟಾಗುವುದು. ವಿವಾಹಕ್ಕೆ ವಿಳಂಬವಾಗುವುದು. ಸರ್ಕಾರದ ಕಾರ್ಯವನ್ನು ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಬಂಧುಗಳಿಂದ ಕಿರಿಕಿರಿ‌ ಇರುವುದು. ಗುರುಚರಿತ್ರೆಯ ಪಠಣವನ್ನು ದಿನವೂ ಮಾಡಿ.

ಮಕರ ರಾಶಿ:
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಉತ್ತಮವಾಗಿದೆ ಗುರುವು ಪಂಚಮಸ್ಥಾನಕ್ಕೆ ಚಲಿಸುತ್ತಿದ್ದು ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ‌ ಸಂತೋಷವೂ ಸಿಗಲಿದೆ.‌ ಸೂರ್ಯ ಹಾಗೂ ಶುಕ್ರರು ಚತುರ್ಥದಲ್ಲಿ ಇರುವುದರಿಂದ ಕುಟುಂಬದಲ್ಲಿ ಸೌಖ್ಯವಿರಲಿದೆ. ತಾಯಿಯ ಅರೋಗ್ಯವೂ ಇರುವುದು. ಸುಖಕ್ಕೆ ಕಾರಣವು ನಿಮಗೆ‌ಸಿಗಲಿದೆ. ತೃತೀಯದಲ್ಲಿ ರಾಹುವು ಇರುವುದು ಯಾವುದಾದರೂ ಮಾರ್ಗದಲ್ಲಿ ಯಶಸ್ಸನ್ನು ಪಡೆಯಲು ಬಯಸುವಿರಿ. ವಿವಾಹಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.

ಕುಂಭ ರಾಶಿ:
ಈ ತಿಂಗಳ ಮೊದಲ ವಾರ ಗ್ರಹಗಳು ಬದಲಾವಣೆಯಾಗಲಿದ್ದು ಗುರುವು ಚತುರ್ಥಸ್ಥಾನಕ್ಕೆ ಹೋಗುವನು. ಗುರುಬಲವು ಇರಲಾಗದು.‌ ಮಂಗಲ‌ ಕಾರ್ಯವನ್ನು ಮುಂದೂಡುವುದು ಉಚಿತ. ತೃತೀಯದಲ್ಲಿ ಸೂರ್ಯ ಹಾಗೂ ಶುಕ್ರರು ನಿಮ್ಮ‌ ಪ್ರಯತ್ನಕ್ಕೆ ಪೂರ್ಣ ಫಲವನ್ನು ಕೊಡದೇ ಹೋಗಬಹುದು. ಸಂಪತ್ತು ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗುವುದು.‌ ಹಳೆಯ ವಸ್ತುಗಳ ಮಾರಾಟದಿಂದ ಲಾಭವು ಸಿಗುವುದು.

ಮೀನ ರಾಶಿ:
ಇದು ಮೇ ತಿಂಗಳ ಮೊದಲ ವಾರವಾಗಿದ್ದು ಗುರುವಿನ ಸ್ಥಾನವು ಬದಲಾಗದಲಿದೆ. ದ್ವಿತೀಯದಲ್ಲಿ ಇದ್ದು ಸಕಲ‌ ಸಂಪತ್ತು ಅಧಿಕಾರವನ್ನು ಕೊಟ್ಟ ಗುರುವು ಇನ್ನು ಎಲ್ಲವನ್ನೂ ಕಡಿಮೆ ಮಾಡುವನು. ಗುರು ಬಲವು ಶುಭಕಾರ್ಯಗಳಿಗೆ ಇಲ್ಲವಾದರೂ ವಿದ್ಯಾಭ್ಯಾಸಕ್ಕೆ ಅನುಕೂಲದ ಯಶಸ್ಸು ನಿಮಗೆ ಸಿಗಲಿದೆ. ಸಹೋದರರ‌ ನಡುವೆ ಸೌಹಾರ್ದ ಇರಲಿದೆ. ದ್ವಿತೀಯದಲ್ಲಿ ಇರುವ ಸೂರ್ಯ ಹಾಗು ಶುಕ್ರರು ಪೂರ್ವಾರ್ಜಿತ ಸಂಪತ್ತನ್ನು ನೀಡುವರು. ಸರ್ಕಾರದ ಕಡೆಯಿಂದ ಲಾಭವು ಬರಲಿದೆ.

Leave a Comment

Your email address will not be published. Required fields are marked *