ಸಮಗ್ರ ನ್ಯೂಸ್ : ಲಂಡನ್‌ನಿಂದ ಮಂಡ್ಯಕ್ಕೆ ಮಹಿಳೆಯೊಬ್ಬರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಬಂದು ಮತ ಚಲಾಯಿಸಿದ ಘಟನೆ ಮಂಡ್ಯದ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋನಿಕಾ ಎಂಬಾಕೆ ಲಂಡನ್‌ನಿಂದ ಬಂದು ಕಾಳೇನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಇದೇ ವೇಳೆ ಮಾತಾನಾಡಿದ ಸೋನಿಕಾ ಎಲ್ಲೆಡೆ ಬರ ಇದೆ ನಮ್ಮ ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯದಾಗಬೇಕು. ಮೋದಿ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದೆ.
ಹಾಗಾಗಿ ಕುಮಾರಸ್ವಾಮಿ ಅವರಿಗೆ ಮತ ಚಲಾಯಿಸಿದ್ದೀನಿ. ನೀವು ಮತದಾನ ಮಾಡಿ, ಮತ ಚಲಾಯಿಸುವುದಕ್ಕಾಗಿಯೇ ನಾನು ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದೀನಿ. ಮತದಾನ ನಮ್ಮ ಹಕ್ಕು, ನಿರ್ಲಕ್ಷ್ಯ ಮಾಡದೆ ಉದಾಸೀನತೆ ತೋರದೆ ಮತ ಹಾಕಿ ಎಂದರು.