Ad Widget .

ಭಾರತೀಯ ಮೂಲದ 3 ಕಂಪೆನಿಗಳಿಗೆ ಅಮೆರಿಕ ನಿರ್ಬಂಧ

ಸಮಗ್ರ ನ್ಯೂಸ್: ಇರಾನಿಯನ್‌ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಇದೀಗ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಲ್ಲಿ ಭಾರತ ಮೂರು ಕಂಪನಿಗಳು ಸೇರಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Ad Widget . Ad Widget .

ರಷ್ಯಾ-ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್‌(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಹೇಳಿದೆ. ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್‌ ಪ್ರಮುಖವಾಗಿದೆ. ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್‌ ಶಿಪ್ಪಿಂಗ್‌, ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸೀ ಆರ್ಟ್‌ ಶಿಪ್‌ ಮ್ಯಾನೇಜ್‌ಮೆಂಟ್‌(OPC) ಪ್ರೈವೆಟ್‌ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.

Ad Widget . Ad Widget .

ಸಹಾರಾ ಥಂಡರ್‌ ಕಂಪನಿ ಇರಾನ್‌ ಸೇನೆಯ ಪರವಾಗಿ ಇರಾನಿಯನ್‌ ಸರಕುಗಳನ್ನು ಚೀನಾ, ರಷ್ಯಾ ಮತ್ತು ವೆನೆಜುವೆಲಾಗಳಿಗೆ ಸಾಗಾಟ ಮಾಡುತ್ತಿದೆ. ಇದೀಗ ಈ ಕಂಪನಿ ಯುಎಇ ಮೂಲದ ಸೇಫ್ ಸೀಸ್ ಶಿಪ್ ಮ್ಯಾನೇಜ್‌ಮೆಂಟ್ ಎಫ್‌ಜೆಇನ ಕುಕ್ ಐಲ್ಯಾಂಡ್ಸ್-ಫ್ಲ್ಯಾಗ್ಡ್ ನೌಕೆ CHEM (IMO 9240914) ಗಾಗಿ ಭಾರತ ಮೂಲದ ಝೆನ್ ಶಿಪ್ಪಿಂಗ್ ಮತ್ತು ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತ ಮೂಲದ ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಮತ್ತು ಯುಎಇ ಮೂಲದ ಕಂಪನಿ ಟ್ರಾನ್ಸ್ ಗಲ್ಫ್ ಏಜೆನ್ಸಿ LLC ಸಹಾರಾ ಥಂಡರ್‌ಗೆ ಬೆಂಬಲವಾಗಿ ಹಡಗು ನಿರ್ವಹಣಾ ಸೇವೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅಮೆರಿಕ ಹೇಳಿದೆ

Leave a Comment

Your email address will not be published. Required fields are marked *