Ad Widget .

ಪರೀಕ್ಷೆಯಲ್ಲಿ “ಜೈ ಶ್ರೀ ರಾಮ್” ಘೋಷಣೆ ಬರೆದವರು ಪಾಸ್: ಶಿಕ್ಷಕರಿಗೆ ಎದುರಾಯ್ತು ಸಂಕಷ್ಟ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಗಳ ಬದಲು “ಜೈ ಶ್ರೀ ರಾಮ್” ಘೋಷಣೆ ಮತ್ತು ಕ್ರಿಕೆಟಿಗರ ಹೆಸರನ್ನು ಬರೆದಿದ್ದಾರೆ. ಅವರೆ ಅವರೆಲ್ಲಾ ಪಾಸ್ ಆಗಿದ್ದಾರೆ. ಆದರೆ ಈಗ ಶಿಕ್ಷಕರಿಗೆ ತಲೆ ನೋವು ತಂದಿಟ್ಟಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು, ಮ್ಯೂಸಿಕ್‌ ಮತ್ತು ಧಾರ್ಮಿಕ ಘೋಷಣೆಗಳನ್ನು ಬರೆದು, ಅದಕ್ಕೆ ಅಂಕಗಳನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳಿಂದ ಹಣವನ್ನು ಲಂಚ ಪಡೆದ ಆರೋಪದ ಮೇಲೆ ಜೌನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ವಿಶ್ವವಿದ್ಯಾನಿಲಯದ ಕೆಲವು ಅಧಿಕಾರಿಗಳ ಸಹಕಾರದಿಂದ, ಶೂನ್ಯ ಅಂಕ ಪಡೆದ ವಿದ್ಯಾರ್ಥಿಗಳಿಗೂ ಶೇ.60ಕ್ಕಿಂತ ಹೆಚ್ಚು ಅಂಕ ನೀಡಿ ಉತ್ತೀರ್ಣಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಮುಖಂಡ ದಿವ್ಯಾಂಶು ಸಿಂಗ್ ಅವರು ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

Ad Widget . Ad Widget . Ad Widget .

ಆರ್‌ಟಿಐ ಮೂಲಕ ಪಡೆಯಲಾದ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಪ್ರತಿಗಳಲ್ಲಿ ಈ ಅಕ್ರಮಗಳನ್ನು ಗುರುತಿಸಲಾಗಿದೆ. ಮರು ಮೌಲ್ಯಮಾಪನದ ಅಂಕಗಳಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿದೆ. “ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ ಎಂಬ ಆರೋಪವಿತ್ತು. ಹಾಗಾಗಿ ನಾವು ಸಮಿತಿಯನ್ನು ರಚಿಸಿದ್ದೇವೆ. ಆ ಸಮಿತಿಯು ತನ್ನ ವರದಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ಹೇಳಿದೆ” ಎಂದು ಉಪಕುಲಪತಿ ವಂದನಾ ಸಿಂಗ್ ಹೇಳಿದರು
ಬುಧವಾರ ನಡೆದ ಪರೀಕ್ಷಾ ಸಮಿತಿ ಸಭೆಯಲ್ಲಿ ಪರೀಕ್ಷಕರಾದ ಡಾ ವಿನಯ್ ವರ್ಮಾ ಮತ್ತು ಮನೀಶ್ ಗುಪ್ತಾ ಅವರನ್ನು ಅಮಾನತುಗೊಳಿಸಲಾಗಿದೆ. ಇಂತಹ ಘಟನೆ ಪುನರಾವರ್ತನೆಯಾಗದಂತೆ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಶಿಕ್ಷಕರನ್ನು ವಜಾಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಕುಲಪತಿ ಹೇಳಿದರು.

Leave a Comment

Your email address will not be published. Required fields are marked *