Ad Widget .

ತುಮಕೂರಿನಲ್ಲಿ ವೋಟ್ ಹಾಕಿದವರಿಗೆ 1 ರೂಪಾಯಿಗೆ ಟೀ ಮಾರಾಟ

ಸಮಗ್ರ ನ್ಯೂಸ್‌ : ತುಮಕೂರಿನ ಶೆಟ್ಟಿಹಳ್ಳಿ ಟೀ ಸ್ಟಾಲ್ ನಲ್ಲಿ ವೋಟ್ ಹಾಕಿದವರಿಗೆ ಮಾಲೀಕ ಬರೀ ಒಂದು ರೂಪಾಯಿಗೆ ಟೀ ನೀಡುತ್ತಿದ್ದಾರೆ.

Ad Widget . Ad Widget .

ಟೀ ಅಂಗಡಿ ಮಾಲಕ ಉಮೇಶ್ ಕುಮಾರ್ ಎಂಬವರು ಒಂದು ರೂಪಾಯಿ ಇಂದು ಟೀ ಮಾರಾಟ ಮಾಡುತ್ತಿದ್ದಾರೆ. ಯುವ ಮತದಾರರನ್ನು ಸೆಳೆಯುವ ಸಲುವಾಗಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಟೀ ಅಂಗಡಿ ಮಾಲೀಕ ಸ್ವಯಂ ಪ್ರೇರಿತ ಸೇವೆ ನಡೆಸುತ್ತಿದ್ದಾರೆ.

Ad Widget . Ad Widget .

ಬೆಳಗ್ಗೆಯಿಂದ ಮತ ಹಾಕಿ ಟೀ ಬಂದ ಮತದಾರರು ಇಲ್ಲಿ ಟೀ ಕುಡಿಯುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರಗೂ ಉಮೇಶ್ ಕುಮಾರ್ ಟೀ- ಕಾಪಿ ನೀಡುತ್ತಿದ್ದಾರೆ.

ಉಮೇಶ್ ಕುಮಾರ್ 150ಕ್ಕೂ ಹೆಚ್ಚು ಬಗೆಯ ಟೀ- ಕಾಫಿ ಮಾಡುತ್ತಾರೆ. ಬೆಳಗ್ಗೆಯಿಂದ ಸುಮಾರು 400-500 ಜನರಿಗೆ ಟೀ- ಕಾಫಿ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *